More

    ಎಸಿಪಿಯ ಅಕ್ರಮ ಆಸ್ತಿಯ ಒಟ್ಟು ಮೌಲ್ಯ ಕಂಡು ಎಸಿಬಿ ಅಧಿಕಾರಿಗಳೇ ಶಾಕ್​…!

    ಹೈದರಾಬಾದ್​: ಸಮಾಜದಲ್ಲಿ ನಡೆಯುವ ಅಕ್ರಮಗಳನ್ನು ತಡೆಯಬೇಕಾದ ಪೊಲೀಸರೇ ತಪ್ಪು ದಾರಿ ಹಿಡಿಯುವುದು ಎಷ್ಟು ಸರಿ? ಕೈತುಂಬಾ ಸರ್ಕಾರಿ ಸಂಬಳ ಸಿಕ್ಕರು ಎಂಜಲು ಕಾಸಿಗೆ ಕೈ ಒಡ್ಡುವವರನ್ನು ಏನೆನ್ನಬೇಕೋ?

    ಹೈದರಾಬಾದಿನ ಸಹಾಯಕ ಪೊಲೀಸ್​ ಆಯುಕ್ತರೊಬ್ಬರ 70 ಕೋಟಿ ರೂ. ಅಕ್ರಮ ಆಸ್ತಿಯನ್ನು ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ಬಯಲಿಗೆಳೆದಿದೆ. ರಾಚಕೊಂಡ ಪೊಲೀಸ್ ಆಯುಕ್ತ​ರ ಕಚೇರಿ ವ್ಯಾಪ್ತಿಯಲ್ಲಿ ಬರುವ ಮಲ್ಕಜ್​ಗಿರಿ ಠಾಣೆಯ ಎಸಿಪಿ ವೈ. ನರಸಿಂಹ ರೆಡ್ಡಿ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದರು.

    ಇದನ್ನೂ ಓದಿ: ಮಂಚಕ್ಕೆ ಬಾ ಎಂದು ಕಳ್ಳಿಗೆ ಆಫರ್​ ನೀಡಿದ ಪೊಲೀಸ್! ಮುಂದೇನಾಯ್ತು ನೋಡಿ…

    ಎಸಿಪಿ ಕಾನೂನು ಬಾಹಿರವಾಗಿ ಭಾರಿ ಹಣ ಸಂಪಾದನೆ ಮಾಡಿದ್ದಾರೆಂಬ ದೂರ ಬಂದಿತ್ತು. ಹೀಗಾಗಿ ಏಕಕಾಲದಲ್ಲಿ ಹೈದರಾಬಾದ್​ ಹಾಗೂ ತೆಲಂಗಾಣದ ಇತರೆ ಪಟ್ಟಣಗಳು ಸೇರಿದಂತೆ ನೆರೆಯ ಆಂಧ್ರ ಪ್ರದೇಶವು ಒಳಗೊಂಡಂತೆ 25 ಸ್ಥಳಗಳಲ್ಲಿ ಎಸಿಬಿ ದಾಳಿ ಮಾಡಿದೆ. ಈ ವೇಳೆ ಆಂಧ್ರದ ಅನಂತಪುರದಲ್ಲಿ ಎಸಿಪಿಗೆ ಸೇರಿದ 55 ಎಕರೆ ಜಮೀನು, ಹೈದರಾಬಾದಿನ ಮಧಪುರದಲ್ಲಿ 1,960 ಸ್ಕ್ವೇರ್​ ಯಾರ್ಡ್ ಅಳತೆಯ ನಾಲ್ಕು ನಿವೇಶನಗಳು, ಹೈದರಾಬಾದಿನ ಹಫೀಜ್​ಪೇಟ್​ನಲ್ಲಿ ಎರಡು ಮನೆ ನಿವೇಶನ ಮತ್ತು ಒಂದು ವಾಣಿಜ್ಯ ಕಟ್ಟಡ ಇರುವುದು ತಿಳಿದುಬಂದಿದೆ. ಇದಲ್ಲದೆ, ಎರಡು ನಿವಾಸಗಳು ಮತ್ತು 15 ಲಕ್ಷ ರೂ. ನಗದು, ಎರಡು ಬ್ಯಾಂಕ್​ ಲಾಕರ್​ಗಳು ಸೇರಿದಂತೆ ರಿಯಲ್​ ಎಸ್ಟೇಟ್​ನಲ್ಲಿ ಮತ್ತು ಇನ್ನಿತರ ವ್ಯವಹಾರದಲ್ಲಿ ಅಕ್ರಮ ಹಣ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.

    ಸುಮಾರು 70 ಕೋಟಿ ರೂ. ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಎಸಿಪಿ ನರಸಿಂಹ ರೆಡ್ಡಿ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿಕೊಂಡಿದ್ದು, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದೆ. ಅಲ್ಲದೆ, ಪೊಲೀಸ್​ ಇಲಾಖೆಯ ಯಾವುದೇ ವ್ಯಕ್ತಿ ಹಣಕ್ಕಾಗಿ ಬೇಡಿಕೆ ಇಟ್ಟರೆ 1064 ಟೋಲ್​ ಫ್ರೀ ನಂಬರ್​ಗೆ ಕರೆ ಮಾಡಿ ಎಂದು ಎಸಿಬಿ ಜನತೆಗೆ ತಿಳಿಸಿದೆ. (ಏಜೆನ್ಸೀಸ್​)

    ಮಗುವಾಯಿತೆಂದು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮೇಘನಾ ರಾಜ್​ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts