More

    ‘ಕೆಜಿಎಫ್​’ ಚಿತ್ರತಂಡದಿಂದ ಬಂತು ಕೆಜಿಎಫ್​ ಟೈಮ್ಸ್ ಪತ್ರಿಕೆ

    ಬೆಂಗಳೂರು: ಕೆಜಿಎಫ್​ ಚಾಪ್ಟರ್ 2 ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಈಗಾಗಲೇ ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ ಎರಡನೇ ಭಾಗದ ಮೇಲೆ ಇಡೀ ದೇಶದ ಚಿತ್ರಪ್ರೇಮಿಗಳ ಕಣ್ಣಿದೆ. ಇನ್ನೇನು ಜ. 8ರ ಯಶ್ ಜನ್ಮದಿನಕ್ಕೆ ಟೀಸರ್​ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ವಿಶೇಷ ಪ್ರಚಾರದಲ್ಲಿ ನಿರತವಾಗಿದೆ ತಂಡ.

    ಇದನ್ನೂ ಓದಿ: ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಆಸನ ಭರ್ತಿಗೆ ಒಪ್ಪಿಗೆ

    ಹೌದು, ಕೆಜಿಎಫ್​ ಸಿನಿಮಾ ಟೀಸರ್ ಬಿಡುಗಡೆಯ ಸನಿಹದಲ್ಲಿದೆ. ಯಶ್ ಜನ್ಮದಿನದ ನಿಮಿತ್ತ ಹೊಂಬಾಳೆ ಫಿಲಂಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಅದಕ್ಕಾಗಿಯೇ ಒಂದಷ್ಟು ಪ್ರಚಾರವನ್ನೂ ತಂಡ ಮಾಡಿಕೊಳ್ಳುತ್ತಿದೆ. ಇದೀಗ ಸದ್ದಿಲ್ಲದೆ ಸುದ್ದಿ ಪತ್ರಿಕೆಯನ್ನೇ ಹೊರತಂದಿದೆ ತಂಡ.

    ಕೆಜಿಎಫ್​ ಟೈಮ್ಸ್ ಹೆಸರಿನ ಪತ್ರಿಕೆಯೊಂದನ್ನು ಪ್ರಚಾರಕ್ಕೋಸ್ಕರ ಬಳಸಿಕೊಳ್ಳಲಾಗಿದೆ. ಆ ಪತ್ರಿಕೆಯಲ್ಲಿ ಬಾಲಕ ರಾಕಿ, ರಾಕಿ ಭಾಯ್ ಆಗಿ ಬೆಳೆದ ರೀತಿಯನ್ನು ವಿವರಿಸಿದ್ದಾರೆ. ಕೆಜಿಎಫ್​ ಮೊದಲ ಭಾಗದ ಒಂದಷ್ಟು ಫೋಟೋಗಳನ್ನು ಅದರಲ್ಲಿ ಪ್ರಕಟಿಸಿ ಸುದ್ದಿ ರೂಪದಲ್ಲಿ ಅಭಿಮಾನಿಗಳಿಗೆ ನೀಡಿದ್ದಾರೆ. ಎರಡನೇ ಭಾಗದಲ್ಲಿ ಏನಾಗಬಹುದು ಎಂಬುದರ ಬಗ್ಗೆಯೂ ಸುಳಿವು ನೀಡಿದ್ದಾರೆ.

    'ಕೆಜಿಎಫ್​' ಚಿತ್ರತಂಡದಿಂದ ಬಂತು ಕೆಜಿಎಫ್​ ಟೈಮ್ಸ್ ಪತ್ರಿಕೆ

    ಇದನ್ನೂ ಓದಿ: ಆರು ವರ್ಷದಲ್ಲಿ ಅಕ್ಷಯ್ ಕುಮಾರ್ ಗಳಿಕೆ ಎಷ್ಟು ಸಾವಿರ ಕೋಟಿ ಗೊತ್ತ!!

    ಒಟ್ಟಿನಲ್ಲಿ ಕೆಜಿಎಫ್​ ಸಿನಿಮಾ ಪ್ರಚಾರ ಕೆಲಸ ಆರಂಭಿಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳ ಪಾಲಿಗೆ ಇದು ಹಬ್ಬದಂತೆ ಭಾಸವಾಗಿದೆ. ಇನ್ನೇನು ಶೀಘ್ರದಲ್ಲಿ ಸಿನಿಮಾ ಬಿಡುಗಡೆ ಬಗ್ಗೆಯೂ ಚಿತ್ರತಂಡ ಘೋಷಣೆ ಮಾಡಲಿದೆ ಎಂದು ಕಾಯುತ್ತಿದ್ದಾರೆ.

    ‘ಕೆಜಿಎಫ್​ ಚಾಪ್ಟರ್​ 2’ ಯೂನಿವರ್ಸಲ್ ಟೀಸರ್!; ಶುರುವಾಯ್ತು ದಿನಗಣನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts