More

    ಭಾರತಕ್ಕೆ ಒಂದೇ ಕಲ್ಲಿಗೆ ಮೂರು ಹಕ್ಕಿ ಹೊಡೆಯುವ ಅವಕಾಶ

    ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಗುರುವಾರದಿಂದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ 4ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಗೆದ್ದರೆ ಅಥವಾ ಕನಿಷ್ಠ ಡ್ರಾ ಸಾಧಿಸಿದರೂ 3 ಪ್ರಮುಖ ಸಾಧನೆಗಳನ್ನು ಮಾಡುವ ಅವಕಾಶ ಈಗ ಭಾರತ ತಂಡದ ಮುಂದಿದೆ.

    ಸದ್ಯ 2-1 ಮುನ್ನಡೆಯಲ್ಲಿರುವ ಭಾರತ ತಂಡ ಸರಣಿ ಗೆಲುವಿನ ಜತೆಗೆ ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ‘ಟೆಸ್ಟ್ ವಿಶ್ವ ಚಾಂಪಿಯನ್’ ಪಟ್ಟಕ್ಕಾಗಿ ಹೋರಾಡುವ ಅವಕಾಶ ಪಡೆಯಲಿದೆ. ಇದರೊಂದಿಗೆ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಮತ್ತೊಮ್ಮೆ ಅಗ್ರಸ್ಥಾನಕ್ಕೂ ಏರಲಿದೆ. ಆದರೆ ಭಾರತ ಸೋತರೆ ಈ ಮೂರೂ ಅವಕಾಶಗಳು ತಪ್ಪಿಹೋಗಲಿವೆ.

    ಕೊಹ್ಲಿಗೆ ಐಸಿಸಿ ಪ್ರಶಸ್ತಿಯ ತುಡಿತ
    ಕಳೆದ 7 ವರ್ಷಗಳಿಂದ ಟೀಮ್ ಇಂಡಿಯಾದ ನಾಯಕರಾಗಿದ್ದರೂ ವಿರಾಟ್ ಕೊಹ್ಲಿ ಇದುವರೆಗೆ ಒಂದೂ ಐಸಿಸಿ ಪ್ರಶಸ್ತಿ ಗೆದ್ದುಕೊಟ್ಟಿಲ್ಲ. 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರನ್ನರ್‌ಅಪ್ ಆಗಿದ್ದಷ್ಟೇ ಅವರ ಸಾರಥ್ಯದಲ್ಲಿ ಭಾರತದ ಶ್ರೇಷ್ಠ ಸಾಧನೆ. ಹೀಗಾಗಿ ಕ್ರಿಕೆಟ್‌ನ ಮೂಲ ಪ್ರಕಾರವಾದ ಟೆಸ್ಟ್ ಕ್ರಿಕೆಟ್‌ನ ವಿಶ್ವಕಪ್‌ನಲ್ಲಾದರೂ ಗೆದ್ದು ಈ ಕೊರತೆ ನೀಗಿಸಿಕೊಳ್ಳುವ ಅವಕಾಶ ಕೊಹ್ಲಿ ಮುಂದಿದೆ. ಇದಕ್ಕಾಗಿ ಅವರು ಮೊದಲಿಗೆ ಭಾರತವನ್ನು ಡಬ್ಲ್ಯುಟಿಸಿ ಫೈನಲ್‌ಗೇರಿಸಬೇಕಾಗಿದೆ. ಡಬ್ಲ್ಯುಟಿಸಿ ಫೈನಲ್‌ನಲ್ಲಿ ಡ್ರಾ ಸಾಧಿಸಿದರೂ, ಜಂಟಿ ಚಾಂಪಿಯನ್ ಪಟ್ಟ ಒಲಿಯಲಿದೆ.

    ಇದನ್ನೂ ಓದಿ:  ಮ್ಯಾಕ್ಸ್‌ವೆಲ್ ಸಿಕ್ಸರ್ ಆರ್ಭಟಕ್ಕೆ ಮುರಿದ ಪ್ರೇಕ್ಷಕರ ಆಸನ, ಉತ್ತಮ ಕೆಲಸಕ್ಕೆ ನೆರವಾಯಿತು!

    ಸ್ಪಿನ್ ಪಿಚ್‌ಗೆ ವಿರಾಟ್ ಸಮರ್ಥನೆ
    ಭಾರತ ತಂಡ ತವರಿನಲ್ಲಿ ಸ್ಪಿನ್ ಪಿಚ್‌ಗಳ ಲಾಭವನ್ನು ಬಳಸಿಕೊಂಡಿರುವುದಕ್ಕೆ ಟೀಕೆಗಳು ವ್ಯಕ್ತವಾಗಿರುವುದಕ್ಕೆ ನಾಯಕ ವಿರಾಟ್ ಕೊಹ್ಲಿ ದಿಟ್ಟ ತಿರುಗೇಟು ನೀಡಿದ್ದು, ಕಳೆದ ವರ್ಷ ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ತಂಡ 3ನೇ ದಿನ 36 ಓವರ್‌ಗಳಲ್ಲೇ ಸೋತಿತ್ತು. ಆಗ ಯಾಕೆ ಯಾರೂ ಪಿಚ್ ಬಗ್ಗೆ ಯಾಕೆ ಮಾತನಾಡಿರಲಿಲ್ಲ. ಭಾರತ ತಂಡ ಕೆಟ್ಟದಾಗಿ ಆಡಿತ್ತು ಎಂದು ಯಾಕೆ ದೂರಿದ್ದರು ಎಂಬ ಪ್ರಶ್ನೆಗಳನ್ನು ಎಸೆದಿದ್ದಾರೆ. ನಾವು ಎಲ್ಲ ರೀತಿಯ ಪಿಚ್‌ಗಳಲ್ಲೂ ಆಡಲು ಇಷ್ಟಪಡುತ್ತೇವೆ. ಅದಕ್ಕಾಗಿಯೇ ಉತ್ತಮ ಯಶಸ್ಸು ಕಾಣುತ್ತಿದ್ದೇವೆ ಎಂದೂ ಕೊಹ್ಲಿ ಹೇಳಿದ್ದಾರೆ. ಟೆಸ್ಟ್ ಪಂದ್ಯವನ್ನು ನಾವು ಗೆಲ್ಲುವುದಕ್ಕಾಗಿ ಆಡುತ್ತೇವೆ. 5ನೇ ದಿನದವರೆಗೆ ಎಳೆಯುವುದಕ್ಕಲ್ಲ ಎಂದೂ ಕೊಹ್ಲಿ, ಸ್ಪಿನ್ ಪಿಚ್ ಟೀಕಾಕಾರರಿಗೆ ಟಾಂಗ್ ನೀಡಿದ್ದಾರೆ.

    ಕೊಹ್ಲಿಗೆ ಹಲವು ನಾಯಕತ್ವ ದಾಖಲೆ ಅವಕಾಶ
    ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಹಲವು ನಾಯಕತ್ವ ದಾಖಲೆಗಳನ್ನು ವಶಪಡಿಸಿಕೊಳ್ಳುವ ಅವಕಾಶವಿದೆ. ಈ ಪಂದ್ಯದ ಮೂಲಕ ಅವರು ಭಾರತವನ್ನು ಅತ್ಯಧಿಕ 60 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ ಎಂಎಸ್ ಧೋನಿ ದಾಖಲೆ ಸರಿಗಟ್ಟಲಿದ್ದಾರೆ. 17 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕರಾಗಿ 12 ಸಾವಿರ ರನ್ ಪೂರೈಸಿದ 3ನೇ ಸಾಧಕ ಎನಿಸಲಿದ್ದಾರೆ. ರಿಕಿ ಪಾಂಟಿಂಗ್ (15,440) ಮತ್ತು ಗ್ರೇಮ್ ಸ್ಮಿತ್ (14,878) ಮೊದಲಿಬ್ಬರು ನಾಯಕರು. ಕೊಹ್ಲಿ ಇನ್ನೊಂದು ಶತಕ ಸಿಡಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕರಾಗಿ ಅತ್ಯಧಿಕ ಶತಕ ಸಿಡಿಸಿದ ರಿಕಿ ಪಾಂಟಿಂಗ್ (41) ದಾಖಲೆಯನ್ನೂ ಮುರಿಯಲಿದ್ದಾರೆ. ಭಾರತ ಗೆದ್ದರೆ 36 ಟೆಸ್ಟ್ ಗೆಲುವು ಕಂಡ ವಿಂಡೀಸ್‌ನ ಕ್ಲೈವ್ ಲಾಯ್ಡ ನಾಯಕತ್ವ ದಾಖಲೆಯನ್ನೂ ಸರಿಗಟ್ಟಲಿದ್ದಾರೆ. ಈ ಮೂಲಕ ಗರಿಷ್ಠ ಟೆಸ್ಟ್ ಗೆದ್ದ ನಾಯಕರ ಪಟ್ಟಿಯಲ್ಲಿ ಜಂಟಿ 4ನೇ ಸ್ಥಾನಕ್ಕೇರಲಿದ್ದಾರೆ. ಗ್ರೇಮ್ ಸ್ಮಿತ್ (53), ರಿಕಿ ಪಾಂಟಿಂಗ್ (48), ಸ್ಟೀವ್ ವಾ (41) ಮೊದಲ 3 ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಶತಕ ಸಿಡಿಸದೆ ಬುಧವಾರಕ್ಕೆ 465 ದಿನಗಳಾಗಿವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಕಳೆದ 35 ಇನಿಂಗ್ಸ್‌ಗಳಲ್ಲಿ ಅವರಿಂದ ಶತಕ ಸಿಡಿದಿಲ್ಲ.

    ಮದುವೆ ಸಿದ್ಧತೆಗಾಗಿ ಕ್ರಿಕೆಟ್‌ನಿಂದ ರಜೆ ಬಿಡುವು ಪಡೆದರೇ ಬುಮ್ರಾ?

    ಐಸಿಸಿ ಫೆಬ್ರವರಿ ತಿಂಗಳ ಪ್ರಶಸ್ತಿ ರೇಸ್‌ನಲ್ಲಿದ್ದಾರೆ ಅಶ್ವಿನ್, ನೀವೂ ವೋಟ್ ಮಾಡಿ…

    ಕತಾರ್ ಓಪನ್‌ನಲ್ಲಿ ಸೆಮಿಫೈನಲ್‌ಗೇರಿದ ಸಾನಿಯಾ ಮಿರ್ಜಾ ಜೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts