More

    ಸ್ಟೀವನ್ ಸ್ಮಿತ್ ಮಾದರಿಯಲ್ಲಿ ಜೋ ರೂಟ್ ವಿರುದ್ಧವೂ ಟೀಮ್ ಇಂಡಿಯಾ ಕಾರ್ಯತಂತ್ರ

    ಚೆನ್ನೈ: ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ವಿರುದ್ಧ ಕಾರ್ಯತಂತ್ರ ರೂಪಿಸಿ ಭರ್ಜರಿ ಯಶಸ್ಸು ಕಂಡಿರುವ ಟೀಮ್ ಇಂಡಿಯಾ ಇದೀಗ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್‌ಗೂ ಕಡಿವಾಣ ಹಾಕಲು ಯೋಜನೆ ಸಿದ್ಧಪಡಿಸುತ್ತಿದೆ. ಕಳೆದ ಶ್ರೀಲಂಕಾ ಪ್ರವಾಸದಲ್ಲಿ ಭರ್ಜರಿ ರನ್‌ಪ್ರವಾಹವನ್ನೇ ಹರಿಸಿರುವ ರೂಟ್ ವಿರುದ್ಧದ ಕಾರ್ಯತಂತ್ರದಲ್ಲಿ ಯಶಸ್ಸು ಕಾಣುವುದು ಭಾರತ ತಂಡದ ಪಾಲಿಗೆ ನಿರ್ಣಾಯಕವೆನಿಸಲಿದೆ.

    ಕಾಂಗರೂ ನೆಲದಲ್ಲಿ ಹೊಸ ಇತಿಹಾಸ ರಚಿಸಿರುವ ಭಾರತ ತಂಡ, ಇದೀಗ ಪ್ರವಾಸಿ ಇಂಗ್ಲೆಂಡ್ ವಿರುದ್ಧವೂ ಗೆದ್ದು ತವರಿನ ಪ್ರಾಬಲ್ಯವನ್ನೂ ಉಳಿಸಿಕೊಳ್ಳುವತ್ತ ಗಮನಹರಿಸಿದೆ. ರೂಟ್ ಲಂಕಾ ಪ್ರವಾಸದಲ್ಲಿ ಆಡಿದ 4 ಇನಿಂಗ್ಸ್‌ಗಳಲ್ಲಿ 106.50ರ ಸರಾಸರಿಯಲ್ಲಿ 426 ರನ್ ಸಿಡಿಸಿದ್ದರು. ಇದರಲ್ಲಿ 1 ದ್ವಿಶತಕ ಮತ್ತು 1 ಶತಕವೂ ಸೇರಿತ್ತು. ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಭರತ್ ಅರುಣ್ ಅವರೇ ರೂಟ್ ವಿರುದ್ಧ ಕಾರ್ಯತಂತ್ರ ರೂಪಿಸುವ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಆಸೀಸ್ ಪ್ರವಾಸದಲ್ಲಿ ಅವರ ಯೋಜನೆಯನ್ವಯ ಬೌಲಿಂಗ್ ಮಾಡಿದ್ದ ಭಾರತದ ಯುವ-ಅನುಭವಿ ಬೌಲರ್‌ಗಳು, 4 ಟೆಸ್ಟ್‌ಗಳಲ್ಲಿ ಒಟ್ಟಾರೆ 72 ವಿಕೆಟ್ ಕಬಳಿಸಿ ಆತಿಥೇಯರಿಗೆ ಕಡಿವಾಣ ಹಾಕಿದ್ದರು.

    ಇದನ್ನೂ ಓದಿ: ಟೀಮ್ ಇಂಡಿಯಾದ ಈ ಕ್ರಿಕೆಟಿಗನ ಅಕ್ಕ ಕೂಡ ವೃತ್ತಿಪರ ಕ್ರಿಕೆಟರ್, ತಮ್ಮನ ಯಶಸ್ಸಿಗೂ ನೆರವು!

    ಫೆಬ್ರವರಿ 5ರಂದು ಚೆನ್ನೈನಲ್ಲಿ ಆರಂಭವಾಗುವ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಭಾರತ ತಂಡ 6 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲಿದ್ದು, ಈ ವೇಳೆ ರೂಟ್ ವಿರುದ್ಧ ಕಾರ್ಯತಂತ್ರ ಅಂತಿಮಗೊಳ್ಳಲಿದೆ ಎಂದು ಭರತ್ ಅರುಣ್ ತಿಳಿಸಿದ್ದಾರೆ. ವೇಗಿ ಮೊಹಮದ್ ಶಮಿ ಮತ್ತು ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜಾ ಹೊರತಾಗಿ ಭಾರತ ತಂಡದ ಎಲ್ಲ ಪ್ರಮುಖ ಬೌಲರ್‌ಗಳು ಇಂಗ್ಲೆಂಡ್ ವಿರುದ್ಧದ ಸರಣಿಗೆ ಫಿಟ್ ಆಗಿದ್ದಾರೆ. ಈ ಬಾರಿ ತವರಿನ ಅನುಕೂಲಕರ ವಾತಾವರಣ ಮತ್ತು ಪರಿಚಿತ ಪಿಚ್‌ಗಳ ಲಾಭವೂ ಭಾರತ ತಂಡಕ್ಕಿದೆ.

    ನವೆಂಬರ್ ತಿಂಗಳಲ್ಲಿ ಶುರುವಾಗಿದ್ದ ಆಸೀಸ್ ಪ್ರವಾಸಕ್ಕೆ ಭಾರತ ತಂಡ ಕೋಚ್ ರವಿಶಾಸಿ ಸಾರಥ್ಯದಲ್ಲಿ ಜುಲೈನಿಂದಲೇ ಕಾರ್ಯತಂತ್ರಗಳನ್ನು ರೂಪಿಸಿತ್ತು. ಆಸೀಸ್ ಬ್ಯಾಟ್ಸ್‌ಮನ್‌ಗಳು ಆ್ ಸೈಡ್‌ನಲ್ಲಿ ಹೆಚ್ಚಿನ ರನ್ ಗಳಿಸುವುದನ್ನು ಗಮನಿಸಿದ್ದ ರವಿಶಾಸಿ ಅದಕ್ಕೆ ತಕ್ಕಂತೆ ಅವರ ಕಡಿವಾಣಕ್ಕೆ ಯೋಜನೆ ರೂಪಿಸಲು ಭರತ್ ಅರುಣ್‌ಗೆ ಸೂಚಿಸಿದ್ದರು. ಆಸೀಸ್ ಪಾಲಿಗೆ ಪ್ರಮುಖ ಬ್ಯಾಟ್ಸ್‌ಮನ್ ಎನಿಸಿದ್ದ ಸ್ಟೀವನ್ ಸ್ಮಿತ್, ಶೇ. 70 ರನ್‌ಗಳನ್ನು ಆ್ ಸೈಡ್‌ನಿಂದಲೇ ಗಳಿಸುತ್ತಿದ್ದುದನ್ನು ಮತ್ತು ಆನ್ ಸೈಡ್‌ನಲ್ಲಿ ಅವರು ರನ್ ಗಳಿಸಲು ಯತ್ನಿಸಿದಾಗ ಚೆಂಡನ್ನು ಗಾಳಿಯಲ್ಲಿ ಬಾರಿಸುತ್ತಿದ್ದುದನ್ನು ಗಮನಿಸಲಾಗಿತ್ತು. ಅಲ್ಲದೆ ಅವರ ಹೆಚ್ಚಿನ ಬೌಂಡರಿಗಳಿಗೂ ನಿಯಂತ್ರಣ ಹಾಕಲಾಗಿತ್ತು. 2019ರ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಕೂಡ ಇದೇ ರೀತಿಯ ಕಾರ್ಯತಂತ್ರದಿಂದ ಸ್ಮಿತ್ ವಿರುದ್ಧ ಯಶಸ್ಸು ಕಂಡಿತ್ತು. ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸ್ಮಿತ್ ಒಂದು ಶತಕ ಸಿಡಿಸಿದ್ದರೂ, ಅದಕ್ಕಾಗಿ 200ಕ್ಕಿಂತ ಹೆಚ್ಚಿನ ಎಸೆತಗಳನ್ನು ಆಡಿದ್ದರು. ಇದರಿಂದ ಭಾರತದ ಬೌಲರ್‌ಗಳ ಕಾರ್ಯತಂತ್ರ ಯಶಸ್ವಿಯಾಗಿದ್ದು ಸ್ಪಷ್ಟವಾಗಿತ್ತು.

    ಅಹಮದಾಬಾದ್, ಪುಣೆಯಲ್ಲಿ ಪ್ರೇಕ್ಷಕರಿಗೆ ಬಿಸಿಸಿಐ ಅವಕಾಶ?
    ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್ ಪಂದ್ಯಗಳನ್ನು ಖಾಲಿ ಕ್ರೀಡಾಂಗಣದಲ್ಲಿ ಆಯೋಜಿಸಲು ಈಗಾಗಲೆ ನಿರ್ಧರಿಸುವ ಬಿಸಿಸಿಐ, ಅನಂತರ ಅಹಮದಾಬಾದ್, ಪುಣೆಯಲ್ಲಿ ನಡೆಯಲಿರುವ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶ ನೀಡಲು ಚಿಂತನೆ ನಡೆಸಿದೆ. ಚೆನ್ನೈ ಪಂದ್ಯಗಳಿಗೂ ಶೇ. 50 ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲು ಬಿಸಿಸಿಐ ಆಸಕ್ತಿ ಹೊಂದಿತ್ತು. ಆದರೆ ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧವಾಗಿರದ ತಮಿಳುನಾಡು ಕ್ರಿಕೆಟ್ ಸಂಸ್ಥೆ ಈ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಆದರೆ ಅಹಮದಾಬಾದ್‌ನಲ್ಲಿ ನಡೆಯಲಿರುವ ಕೊನೇ 2 ಟೆಸ್ಟ್, 5 ಟಿ20 ಮತ್ತು ಪುಣೆಯಲ್ಲಿ ನಡೆಯಲಿರುವ 3 ಏಕದಿನ ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಲಭಿಸುವ ವಿಶ್ವಾಸವನ್ನು ಬಿಸಿಸಿಐ ಹೊಂದಿದೆ. ಸ್ಥಳೀಯ ಆಡಳಿತದಿಂದ ಅನುಮತಿ ದೊರೆತ ಬಳಿಕ ಶೇ. 50ಕ್ಕೂ ಕಡಿಮೆ ಅಥವಾ ಗರಿಷ್ಠ 25-30 ಸಾವಿರ ಪ್ರೇಕ್ಷಕರಿಗೆ ಪ್ರವೇಶ ನೀಡಲು ಬಿಸಿಸಿಐ ಯೋಜನೆ ರೂಪಿಸುತ್ತಿದೆ.

    ಹಸೆಮಣೆಗೇರಿದ ಟೀಮ್ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್

    ಐಪಿಎಲ್ ಆಟಗಾರರ ಹರಾಜು ಯಾವಾಗ? ಎಲ್ಲಿ ನಡೆಯಲಿದೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts