More

    ಲಾರ್ಡ್ಸ್ ಗೆಲುವಿನ ಬಳಗದಲ್ಲಿ ಏಕೈಕ ಬದಲಾವಣೆಗೆ ಟೀಮ್ ಇಂಡಿಯಾ ಚಿಂತನೆ

    ಲೀಡ್ಸ್: ಲಾರ್ಡ್ಸ್ ಟೆಸ್ಟ್ ಗೆಲುವಿನ ನಡುವೆಯೂ ಭಾರತ ತಂಡ 3ನೇ ಟೆಸ್ಟ್ ಪಂದ್ಯಕ್ಕೆ ಆಡುವ ಬಳಗದಲ್ಲಿ ಏಕೈಕ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. 5 ಪಂದ್ಯಗಳ ಸರಣಿಯ 3ನೇ ಪಂದ್ಯ ಬುಧವಾರದಿಂದ ಹೆಡಿಂಗ್ಲೆ ಮೈದಾನದಲ್ಲಿ ನಡೆಯಲಿದೆ.

    ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್‌ನಲ್ಲಿ 1 ಅರ್ಧಶತಕ ಸಹಿತ ಉಪಯುಕ್ತ ಕೊಡುಗೆ ನೀಡಿದ್ದರೂ, ಸರಣಿಯ ಮೊದಲೆರಡು ಟೆಸ್ಟ್‌ಗಳಲ್ಲಿ 44 ಓವರ್ ಬೌಲಿಂಗ್ ಮಾಡಿ ಒಂದೂ ವಿಕೆಟ್ ಕಬಳಿಸುವಲ್ಲಿ ಸಲರಾಗಿಲ್ಲ. ಹೀಗಾಗಿ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ಲೀಡ್ಸ್ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ.

    ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಈಗ ಇಡೀ ಜಗತ್ತಿನ ಕ್ರಶ್ ಎಂದ ಬಾಲಿವುಡ್ ಬೆಡಗಿ!

    ಲಾರ್ಡ್ಸ್‌ನಲ್ಲೇ ಅಶ್ವಿನ್‌ರನ್ನು ಆಡಿಸುವ ಚಿಂತನೆ ನಡೆಸಿದ್ದರೂ, ಮೋಡಕವಿದ ವಾತಾವರಣದಿಂದಾಗಿ ವೇಗಿಗಳಿಗೆ ಆದ್ಯತೆ ನೀಡಲಾಗಿತ್ತು. ಅಲ್ಲದೆ ಪಂದ್ಯದಲ್ಲಿ ಎಲ್ಲ ಬ್ಯಾಟ್ಸ್‌ಮನ್‌ಗಳು ಉಪಯುಕ್ತ ಕೊಡುಗೆ ನೀಡಿದ್ದರಿಂದ ಭಾರತ ಈಗ ಬೌಲಿಂಗ್ ವಿಭಾಗವನ್ನು ಹೆಚ್ಚು ಬಲಪಡಿಸಲು ಬಯಸಿದೆ ಎನ್ನಲಾಗುತ್ತಿದೆ.

    ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಮೊಯಿನ್ ಅಲಿ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರೂ, ಜಡೇಜಾ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಯಾವುದೇ ರೀತಿಯ ಒತ್ತಡ ಹೇರಲು ಶಕ್ತರಾಗಿರಲಿಲ್ಲ. ಹೀಗಾಗಿ ಹಾಲಿ ಸರಣಿಗೆ ಮುನ್ನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಮತ್ತು ಸರ‌್ರೆ ಪರ ಆಡಿದ ಪ್ರಥಮ ದರ್ಜೆ ಪಂದ್ಯದಲ್ಲಿ ವಿಕೆಟ್ ಕಬಳಿಸಿದ್ದ ಅಶ್ವಿನ್‌ಗೆ ಮಣೆ ಹಾಕುವ ನಿರೀಕ್ಷೆ ಹೆಚ್ಚಿದೆ.

    ಟೀಮ್ ಇಂಡಿಯಾ ವೇಗಿ ಸಿರಾಜ್‌ಗೆ ಬೋಲ್ಡಾದ ಪಾಕ್ ಟಿವಿ ನಿರೂಪಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts