More

    ವಿದ್ಯಾರ್ಥಿಯನ್ನು ಪುಸಲಾಯಿಸಿ 2 ವರ್ಷ ಸೆಕ್ಸ್​: ಬಾಲಕನಿಂದಲೇ ಶಿಕ್ಷಕಿಗೆ ಬಿಗ್​ ಶಾಕ್​!

    ಲಂಡನ್​: ಹದಿನೈದು ವರ್ಷದ ವಿದ್ಯಾರ್ಥಿಯೊಂದಿಗೆ ಅಕ್ರಮ ಲೈಂಗಿಕ ಸಂಬಂಧ ಹೊಂದಿದ್ದ ಆರೋಪದಲ್ಲಿ ಬೋಧನಾ ಸಹಾಯಕಿಯೊಬ್ಬಳು ಜೈಲು ಶಿಕ್ಷೆಗೆ ಗುರಿಯಾಗಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಕೋರ್ಟ್​ನಲ್ಲಿ ಸಮಜಾಯಿಷಿ ನೀಡಿರುವ ಆರೋಪಿ ಮಹಿಳೆ ನಾನು ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾಳೆ.

    ತನಗಿಂತಲೂ 10 ವರ್ಷ ಹಿರಿಯ ಮಹಿಳೆಯ ಲೈಂಗಿಕ ಬೇಡಿಕೆಯಿಂದ ವಿದ್ಯಾರ್ಥಿಯ ಜೀವನವೇ ಹಾಳಾಗಿದ್ದು, ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡಿರುವ ಆತ ಮಹಿಳೆಯರೆಡೆಗೆ ಕಡಿಮೆ ಆಕರ್ಷಣೆ ಹೊಂದುವ ಮೂಲಕ ಮುಂದಿನ ತನ್ನ ಲೈಂಗಿಕ ಜೀವನ ಹಾಳಾಗಿದೆ ಎಂದು ಹೇಳಿಕೊಂಡಿದ್ದಾನೆ. ವಿಚಾರಣೆ ಆಲಿಸಿದ ನ್ಯಾಯಾಲಯ ಆರೋಪಿ ಮಹಿಳೆಗೆ ಇದೀಗ ಎರಡು ವರ್ಷಕ್ಕೂ ಅಧಿಕ ಕಾಲ ಶಿಕ್ಷೆ ವಿಧಿಸಿದೆ.

    ಆರೋಪಿ ಮಹಿಳೆಯನ್ನು ಮೆಕ್ರೊಬಿ (32) ಎಂದು ಗುರುತಿಸಲಾಗಿದೆ. ಈಕೆ ಆಕ್ಸ್​ಫರ್ಡ್​ಶೈರ್​ನ ವಲ್ಲಿಂಗ್​ಫೋರ್ಡ್​ ನಿವಾಸಿ. 2014ರಲ್ಲಿ 15 ವರ್ಷದ ವಿದ್ಯಾರ್ಥಿ (ಸದ್ಯ 22 ವರ್ಷ ವಯಸ್ಸು) ಯನ್ನು ತನ್ನ ಲೈಂಗಿಕ ತೃಷೆಗೆ ಆಕೆ ಬಳಸಿಕೊಂಡಿದ್ದಳು. ಆಗ ಆಕೆಗೆ 25 ವರ್ಷ ವಯಸ್ಸಾಗಿತ್ತು. ಅಂದಿನಿಂದಲೂ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

    ಎರಡು ವರ್ಷಗಳ ಬಳಿಕ ತನ್ನ ಲೈಂಗಿಕ ಸಂಬಂಧಕ್ಕೆ ಅಂತ್ಯವಾಡಿದ್ದಾಗಿ ಹುಡುಗ ಹೇಳಿಕೊಂಡಿದ್ದು, ಬೋಧನಾ ಸಹಾಯಕಿಯನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ಪ್ರೀತಿಸುವುದಿಲ್ಲ ಎಂದು ಹೇಳಿದ್ದಾನೆ. ಇಬ್ಬರ ನಡುವಿನ ಸಂಬಂಧದ ನಡುವೆಯೇ ಹುಡುಗ ತನ್ನದೇ ವಯಸ್ಸಿನ ಹುಡುಗಿ ಜತೆ ಪ್ರೀತಿಯಲ್ಲಿರುವುದನ್ನು ನೋಡಿದ ಆರೋಪಿ ಮೆಕ್ರೋಬಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹುಡುಗನಿಗೆ ಬೆದರಿಕೆ ಹಾಕಿದ್ದಳಂತೆ. ಅಲ್ಲದೆ, ತನ್ನನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಳು. ಇದು ನನ್ನ ಮೇಲೆ ಸಂಪರ್ಣ ಪರಿಣಾಮ ಬೀರಿತು ಎಂದು ಹುಡುಗ ಕೋರ್ಟ್​ನಲ್ಲಿ ವಿವರಿಸಿದ್ದಾನೆ.

    ಇದನ್ನೂ ಓದಿ: ಮಾಂಗಲ್ಯ ಧರಿಸುವುದನ್ನು ನಾಯಿಗೆ ಚೈನ್​ ಹಾಕುವುದಕ್ಕೆ ಹೋಲಿಸಿದವಳ ವಿರುದ್ಧ ಎಫ್​ಐಆರ್​

    ಆಕೆ ನನ್ನ ಭಾವನೆಗಳೊಂದಿಗೆ ಆಟವಾಡಿದಳು. ಕ್ಷಲ್ಲಕ ಕಾರಣಕ್ಕಾಗಿ ಅನೇಕ ಬಾರಿ ಇಬ್ಬರ ನಡುವೆ ಸಾಕಷ್ಟು ಜಗಳವಾಯಿತು. ಇದರಿಂದ ಇಬ್ಬರ ನಡುವಿನ ಸಂಬಂಧ ಮತ್ತಷ್ಟು ಹಾಳಾಗ ತೊಡಗಿತು. ಇದರಿಂದ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ. ಹೀಗಾಗಿ ಅವಳಿಂದ ಸಂಪೂರ್ಣ ದೂರವಾಗುವ ನಿರ್ಧಾರಕ್ಕೆ ಬಂದೆ ಎಂದು ಹುಡುಗ ಹೇಳಿಕೊಂಡಿದ್ದಾನೆ.

    ಶಿಕ್ಷಣದ ತರಬೇತಿಯ ನಡುವೆ ಪರಸ್ಪರ ಇಬ್ಬರು ಕಿತ್ತಾಡುತ್ತಿದ್ದೆವು. ಒಮ್ಮೆ ಇಬ್ಬರು ಆಕಸ್ಮಿಕವಾಗಿ ಚುಂಬಿಸಿದೆವು. ಆ ಸಂದರ್ಭದಲ್ಲಿ ನನಗೆ ಯಾವುದೇ ಮಹಿಳೆ ಅಥವಾ ಹುಡುಗಿಯರ ಮೇಲೆ ಆಸಕ್ತಿ ಇರಲಿಲ್ಲ. ಅದೊಂದು ಅನಿರೀಕ್ಷಿತವಾಗಿತ್ತು. ನಂತರದ ದಿನಗಳಲ್ಲಿ ಇಬ್ಬರ ನಡುವಿನ ಸಂಬಂಧ ಲೈಂಗಿಕತೆಗೆ ತಿರುಗಿತು. ಬೇಸಿಗೆ ಸಮಯದಲ್ಲಿ ಫ್ರೆಂಡ್ಸ್​ ಮನೆ ಹೋಗಿದ್ದಾಗ ಮೊದಲ ಬಾರಿಗೆ ಒಟ್ಟಿಗೆ ಸೇರಿದೆವು ಎಂದು ಸಂತ್ರಸ್ತ ಹುಡುಗ ಹೇಳಿಕೊಂಡಿದ್ದಾನೆ. ಎರಡು ವರ್ಷಗಳ ಬಳಿಕ ಇಬ್ಬರ ನಡುವಿನ ಸಂಬಂಧ ಅಂತ್ಯವಾಯಿತು. ಆಕೆಯಿಂದ ಮಹಿಳೆಯರೆಡೆಗಿನ ಆಸಕ್ತಿಯೇ ಕಡಿಮೆ ಆಯಿತು ಎಂದು ಹುಡುಗ ಕೋರ್ಟ್​ ಮುಂದೆ ಹೇಳಿಕೊಂಡಿದ್ದಾನೆ.

    ವಿಚಾರಣೆ ನಡೆಸಿರುವ ನ್ಯಾಯಾಲಯ ವಿದ್ಯಾರ್ಥಿಯೊಂದಿಗೆ ಅಸಹಜ ಲೈಂಗಿಕ ನಡೆಸಿದ ಆರೋಪದ ಮೇಲೆ ಆರೋಪಿ ಮೆಕ್ರೋಬಿಗೆ ಎರಡು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿಸಿದೆ. (ಏಜೆನ್ಸೀಸ್​)

    ಸ್ವಯಾರ್ಜಿತ, ಪಿತ್ರಾರ್ಜಿತ ಆಸ್ತಿಗಳನ್ನು ನನಗೆ ಬೇಕಾದ ಮಕ್ಕಳಿಗೆ ಮಾತ್ರ ವಿಲ್​ ಮಾಡಬಹುದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts