More

    ಶಿಕ್ಷಕರು ಮಕ್ಕಳ ಬದುಕು ಅರಳಿಸಬೇಕು

    ಸಿಂದಗಿ: ಶಾಲೆಗೆ ಬರುವ ಮಕ್ಕಳಲ್ಲಿ ಅಕ್ಷರ ಪ್ರೀತಿ ಬಿತ್ತಿ, ಮಾನವೀಯತೆ, ಸಂಸ್ಕಾರಗಳನ್ನು ತುಂಬಿ ಪೂರ್ಣ ಪ್ರಜ್ಞನನ್ನಾಗಿ ಸಮಾಜಕ್ಕೆ ಕೊಡುಗೆ ಕೊಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಸ್ಥಳೀಯ ಆದರ್ಶ ಶಿಕ್ಷಕ ಎಚ್.ಟಿ. ಕುಲಕರ್ಣಿ ಹೇಳಿದರು.

    ಶುಕ್ರವಾರ ಸಂಜೆ ಪಟ್ಟಣದ ಕ್ರಿಯೇಟಿವ್ ಕಿಡ್ಸ್ ಹೋಮ್‌ನಲ್ಲಿ ಹಮ್ಮಿಕೊಂಡಿದ್ದ ಕಿಡ್ಸ್ ಫೆಸ್ಟಿವಲ್ ಉದ್ಘಾಟಿಸಿ ಅವರು ಮಾತನಾಡಿದರು.

    ದೇಶಪ್ರೇಮ, ಭಾಷಾ ಪ್ರೇಮ, ಮರ ಬೆಳೆಸುವ, ನೀರು ಉಳಿಸುವ, ಅಸಹಾಯಕರ ಸಹಾಯಕ್ಕೆ ನಿಲ್ಲುವ, ಮಾನವೀಯ ಸಂಬಂಧಗಳಿಗೆ ಸ್ಪಂದಿಸುವ ಗುಣಗಳಿಗೆ ಪ್ರೇರಣೆ ನೀಡುವ ಶಿಕ್ಷಣ ಇಂದು ಅಗತ್ಯವಾಗಿದೆ. ಈ ದಿಸೆಯಲ್ಲಿ ಶಿಕ್ಷಕರು ಮಕ್ಕಳ ಮನಸ್ಸು ಮತ್ತು ವ್ಯಕ್ತಿತ್ವವನ್ನು ಅರಳಿಸುವ ಕಾರ್ಯಗಳ ಮೂಲಕ ಅವರನ್ನು ಪೂರ್ಣಪ್ರಜ್ಞರನ್ನಾಗಿಸಬೇಕು.

    ಕ್ರಿಯೇಟಿವ್ ಕಿಡ್ಸ್ ಹೋಮ್ ನಿವೃತ್ತ ಶಿಕ್ಷಕ ಹ.ಮ. ಪೂಜಾರ ಗುರುಗಳ ಮಾರ್ಗದರ್ಶನದಲ್ಲಿ ಸೃಜನಶೀಲ ಕಲಿಕೆಯೊಂದಿಗೆ ಕ್ರಿಯಾತ್ಮಕವಾಗಿ ತನ್ನನ್ನು ಸಮಾಜದಲ್ಲಿ ಬಿಂಬಿಸಿಕೊಳ್ಳುತ್ತಿರುವುದು ಹೆಮ್ಮೆ ತಂದಿದೆ ಎಂದರು.

    ಮುಖ್ಯಅತಿಥಿ ಸಿದ್ಧೇಶ್ವರ ಬ್ಯಾಂಕ್‌ನ ವಿಸ್ತೀರ್ಣಾಧಿಕಾರಿ ಅರವಿಂದ ಬಿರಾದಾರ, ಅಧ್ಯಕ್ಷತೆ ವಹಿಸಿದ್ದ ಹ.ಮ. ಪೂಜಾರ ಮಾತನಾಡಿದರು.

    ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಮುಖ್ಯಶಿಕ್ಷಕಿ ಡಾ. ಜ್ಯೋತಿ ಪೂಜಾರ ವರದಿ ವಾಚಿಸಿದರು.

    ಸಂಸ್ಥೆಯ ಅಧ್ಯಕ್ಷ ರಮೇಶ ಪೂಜಾರ ಸ್ವಾಗತಿಸಿದರು. ಶಾಂತಾ ಮೋಸಲಗಿ ನಿರೂಪಿಸಿದರು. ಅಶ್ವಿನಿ ಲೋಣಿ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಎಂ.ಎಂ. ಹೂಗಾರ, ಆನಂದ ಹೂಗಾರ, ಕಸ್ತೂರಿ ಪೂಜಾರಿ, ಶಿಕ್ಷಕಿ ಮಂಗಲಾ ಬಮ್ಮಣ್ಣಿ, ಸಾಧನಾ ಇಮಡೆ, ಗೌರಿ ಪಾಟೀಲ, ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts