More

    ಇದಪ್ಪಾ ನಿಜವಾದ ಶಿಕ್ಷಣವೆಂದರೆ…!

    ದಾದ್​ಗಾಂವ್: ಕೋವಿಡ್​​ನಿಂದಾಗಿ ಸೃಷ್ಟಿಯಾದ ಸಮಸ್ಯೆಗಳು ಅಷ್ಟಿಷ್ಟಲ್ಲ. ಬಹುತೇಕ ಎಲ್ಲ ಕ್ಷೇತ್ರಗಳೂ ಇದರ ಹೊಡೆತಕ್ಕೆ ಸಿಕ್ಕು, ಈಗಷ್ಟೇ ಚೇತರಿಸಿಕೊಳ್ಳುತ್ತಿವೆ. ಆದರೆ ಶಿಕ್ಷಣ ಕ್ಷೇತ್ರ ಸಧ್ಯಕ್ಕೆ ಚೇತರಿಕೆ ಕಾಣದೆ ಮತ್ತಷ್ಟು ಹೊಸ ಹೊಸ ಸಮಸ್ಯೆಗಳನ್ನು ಎದುರಿಸುತ್ತಿದೆ.
    ಶಾಲೆಗಳು ಬಂದ್ ಆಗಿದ್ದು, ಮಕ್ಕಳ ಕಲಿಕೆ ಮುಂದುವರಿಸಲು ಇಂಟರ್ನೆಟ್ ಮೊರೆಹೋಗಲಾಗುತ್ತಿದೆ. ಆದರೆ ಇಂಟರ್ನೆಟ್, ಸ್ಮಾರ್ಟ್​​ಫೋನ್​ಗಳ ಮುಖವನ್ನೇ ನೋಡದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಆನ್​ಲೈನ್ ಶಿಕ್ಷಣ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತದೆ ಎಂಬುದನ್ನು ಊಹಿಸುವುದು ಅಸಾಧ್ಯ.

    ಇದನ್ನೂ ಓದಿ: ಪತಿಯ ಜನನಾಂಗ ಕತ್ತರಿಸಿ ಕೊಲೆಗೈದ ಮಹಿಳೆ ತನ್ನ ಮಕ್ಕಳಿಗೆ ಹೇಳಿದ್ದು ಶಾಕ್​ ಆಗುವ ವಿಚಾರ!

    ಇಂಟರ್ನೆಟ್ ಸೌಲಭ್ಯ ಬಹುತೇಕ ಗ್ರಾಮಗಳಲ್ಲಿ ಇಲ್ಲವೆಂದೇ ಹೇಳಬಹುದು. ಬಡ ಮಕ್ಕಳು ಹೊತ್ತಿನ ತುತ್ತಿಗೆ ಪರದಾಡಬೇಕಾದ ಪರಿಸ್ಥಿತಿ ಇರುವಾಗ ಸ್ಮಾರ್ಟ್​ಫೋನ್ ತರುವುದಾದರೂ ಎಲ್ಲಿಂದ?
    ಬಡ ಮಕ್ಕಳಿಗೆ ಸಾಲ ಸೋಲ ಮಾಡಿ, ಆಸ್ತಿ, ಜಾನುವಾರು ಮಾರಿ ಸ್ಮಾರ್ಟ್ ಫೋನ್ ಕೊಡಿಸಿದ ಉದಾಹರಣೆಗಳೂ ಇವೆ. ಆದರೆ ಇಂಟರ್ನೆಟ್ ಸಂಪರ್ಕ ಸಮಸ್ಯೆ ಮತ್ತೊಂದು ತಲೆನೋವಾಗಿದೆ. ಇಂಟರ್ನೆಟ್ ಸಂಪರ್ಕವಿಲ್ಲದೆ ಬಹುತೇಕ ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಕಟ್ಟಡವನ್ನೋ, ಮರವನ್ನೋ ಏರಬೇಕಾದ ಸ್ಥಿತಿ ಇದೆ. ಆದರೆ ಇದೂ ಕೂಡ ಒಂದು ಹೊಸ ಮಾರ್ಗದ ಸೃಷ್ಟಿಗೆ ಕಾರಣವಾದಂತಾಗಿದೆ.
    ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ದಾದ್ಗಾಂವ್ ಗ್ರಾಮದ ವ್ಯಕ್ತಿಯೊಬ್ಬ ಆನ್​​ಲೈನ್ ಶಿಕ್ಷಣಕ್ಕೆ ಉತ್ತಮ ಇಂಟರ್ನೆಟ್ ಸಂಪರ್ಕ ಪಡೆಯುವ ವಿಧಾನದ ಬಗ್ಗೆ ಮಕ್ಕಳಿಗೆ ಹೇಳಿಕೊಡುತ್ತಿರುವುದಕ್ಕೆ ನೆಟ್ಟಿಗರಿಂದ ಪ್ರಶಂಸೆ ಗಳಿಸುತ್ತಿದ್ದಾರೆ.
    ಉತ್ತಮ ಇಂಟರ್ನೆಟ್ ಸಂಪರ್ಕವನ್ನು ಪಡೆಯಲು ಮರದ ಮೇಲೆ ಕುಳಿತುಕೊಂಡು ಸ್ಮಾರ್ಟ್​ಫೋನ್ ಬಳಸುವ ವಿಧಾನದ ಬಗ್ಗೆ ಮಕ್ಕಳಿಗೆ ಅವರು ಪಾಠಗಳನ್ನು ನೀಡುತ್ತಾರೆ.

    ಇದನ್ನೂ ಓದಿ: 20 ಟು 40- ಕರೊನಾ ಹರಡಿಸುವಲ್ಲಿ ಇವರ ಪಾತ್ರವೇ ಅಧಿಕ ಎಂದ ವಿಶ್ವ ಆರೋಗ್ಯ ಸಂಸ್ಥೆ

    ಈ ಪ್ರದೇಶದಲ್ಲಿ ಕಡಿಮೆ ಮೊಬೈಲ್ ಟವರ್‌ಗಳಿವೆ ಎಂದು ನಾಸಿಕ್ ಶಿಕ್ಷಣ ವಿಭಾಗದ ಉಪನಿರ್ದೇಶಕ ಪ್ರವೀಣ್ ಪಾಟೀಲ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
    ಮರದ ಮೇಲೆ ಕುಳಿತು ಆತ ಪಾಠ ಮಾಡುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ನೆಟ್ಟಿಗರು ಅವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ.
    ಇನ್ನೊಬ್ಬ ಬಳಕೆದಾರರು ಜನರು ಅಧಿಕಾರಿಗಳಿಂದ ಪರಿಹಾರವನ್ನು ನಿರೀಕ್ಷಿಸುತ್ತಾರೆ ಹೊರತು ಸಮಸ್ಯೆಗಳಲ್ಲ. ಎಂದಿದ್ದಾರೆ. ಕಡಿಮೆ ನೆಟ್‌ವರ್ಕ್ ಟವರ್‌ಗಳ ಸಮಸ್ಯೆಯನ್ನು ಯಾರಾದರೂ ಹೇಳಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ:  ನೀವೂ ಬಳಸಬಹುದೇ ಇಂಥ ಸ್ಮಾರ್ಟ್​​ಫೋನ್ ಅನ್​ಲಾಕ್ ಪ್ಯಾಟರ್ನ್​​?

    ಜಾರ್ಖಂಡ್‌ನಲ್ಲಿ, ದುಮ್ಕಾ ಜಿಲ್ಲೆಯ ಶಾಲೆಯೊಂದರ ಮುಖ್ಯೋಪಾಧ್ಯಾಯರು ಲಾಕ್‌ಡೌನ್ ಮಧ್ಯೆ ವಿದ್ಯಾರ್ಥಿಗಳಿಗೆ ಕಲಿಸಲು ಗ್ರಾಮದಾದ್ಯಂತ ಏಪ್ರಿಲ್​​ನಲ್ಲಿ ಹಲವಾರು ಧ್ವನಿವರ್ಧಕಗಳನ್ನು ಅಳವಡಿಸಿದ್ದಾರೆ. ಮಕ್ಕಳು ಹೊಸ ಮಾದರಿಯ ಕಲಿಕೆಯನ್ನು ಆನಂದಿಸುತ್ತಿದ್ದಾರೆ.
    ಅವರ ನವೀನ ಆಲೋಚನೆಗಾಗಿ ಜಿಲ್ಲಾ ಶಿಕ್ಷಣಾಧಿಕಾರಿ ಪೂನಂ ಕುಮಾರಿ ಮುಖ್ಯ ಶಿಕ್ಷಕರನ್ನು ಶ್ಲಾಘಿಸಿದ್ದರು. ಎಲ್ಲ ಸರ್ಕಾರಿ ಶಾಲೆಗಳು ಈ ಮಾದರಿಯನ್ನು ಅನುಸರಿಸಿದರೆ ಉತ್ತಮ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಹಿಂದಿರುಗುವಾಗ ಹೆಚ್ಚು ಕಷ್ಟಪಡಬೇಕಾಗಿಲ್ಲ ಎಂದಿದ್ದರು.
    ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠ ಮಾಡಲು ರೆಫ್ರಿಜರೇಟರ್ ಟ್ರೇ ಬಳಸಿದ ಶಿಕ್ಷಕರ ವಿಡಿಯೋ ಕೂಡ ವೈರಲ್ ಆಗಿತ್ತು.

    ಬಿಜೆಪಿ ಕೈಯಲ್ಲಿ ಫೇಸ್‌ಬುಕ್‌ ಇಂಡಿಯಾ: ತನಿಖೆ ಕೋರಿ ಜುಕರ್‌ಬರ್ಗ್‌ಗೆ ಕಾಂಗ್ರೆಸ್‌ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts