More

    ಲಂಚ ಪಡೆಯುತ್ತಿದ್ದ ಶಿಕ್ಷಕಿ ವಿಡಿಯೋ ವೈರಲ್!; ಅಮಾನತುಗೊಳಿಸಿದ ಶಿಕ್ಷಣ ಇಲಾಖೆ

    ಮಧ್ಯಪ್ರದೇಶ: ಶಾಲಾ ಶಿಕ್ಷಕಿಯೊಬ್ಬರು ಲಂಚ ಸ್ವೀಕರಿಸುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್​ ಆಗುತ್ತಿದ್ದಂತೆ, ವಿಡಿಯೋ ಗಮನಿಸಿದ ಶಿಕ್ಷಣ ಇಲಾಖೆ ಅವರನ್ನು ಕೆಲಸದಿಂದ ಅಮಾನುತುಗೊಳಿಸಿದೆ.

    ಇದನ್ನೂ ಓದಿ: ಮಹಿಳಾ ಪೇದೆ ಸ್ನಾನ ಮಾಡುವುದನ್ನು ರಹಸ್ಯವಾಗಿ ವಿಡಿಯೋ ಮಾಡಿದ ಟ್ರೇನಿ ಕಾನ್‌ಸ್ಟೆಬಲ್; ಎಫ್‌ಐಆರ್ ದಾಖಲು 

    ಮಹಿಳೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಪ್ರೌಢ ಶಾಲೆಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿಸಲಾಗಿದ್ದು, 6,000 ರೂ. ಲಂಚ ಸ್ವೀಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್​ ಆಗಿದೆ. ದೃಶ್ಯ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ಈ ವಿಷಯ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದೆ. ಘಟನೆಯ ಬೆನ್ನಲ್ಲೇ ಇಲಾಖೆಯ ಅಧಿಕಾರಿಗಳು ಶಿಕ್ಷಕಿಯನ್ನು ಕೆಲಸದಿಂದ ಅಮಾನತುಗೊಳಿಸಿದ್ದಾರೆ.

    ಇದನ್ನೂ ಓದಿ: “ಆಧುನಿಕ ಬಟ್ಟೆಗಳು ಲೈಂಗಿಕತೆಗೆ ಪ್ರಚೋದನಕಾರಿ ಎಂದು ಪರಿಗಣಿಸಬಾರದು”: ಮಹಿಳೆಯರ ನಿಂದನೆ ತಡೆಯಲು ‘ಸುಪ್ರೀಂ’ ಕೈಪಿಡಿ

    ಮೂಲಗಳ ಪ್ರಕಾರ, ರಾಜನಗರ ಕನ್ಯಾ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ಶಿಕ್ಷಕರು ನಗದು ಸ್ವೀಕರಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಜಿಲ್ಲಾ ಶಿಕ್ಷಣಾಧಿಕಾರಿ ಎಂ.ಕೆ. ಕಾಟೋರಿ ಅವರು ಸಾಗರದಲ್ಲಿರುವ ಉಪನಿರ್ದೇಶಕರಿಗೆ ಪತ್ರ ಬರೆದಿದ್ದರು. ಇದನ್ನು ಗಮನಿಸಿದ ಉಪನಿರ್ದೇಶಕರು ಇದೀಗ ಸಸ್ಪೆಂಡ್​ ಮಾಡಿದ್ದಾರೆ,(ಏಜೆನ್ಸೀಸ್).

    ಕಾಂಗ್ರೆಸ್​ ಸರ್ಕಾರ ಕನ್ನಡಿಗರಿಗೆ, ಅದರಲ್ಲೂ ಅನ್ನದಾತರಿಗೆ ಘೋರ ವಿಶ್ವಾಸದ್ರೋಹ ಎಸಗಿದೆ: ಎಚ್​.ಡಿ. ಕುಮಾರಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts