More

    “ಆಧುನಿಕ ಬಟ್ಟೆಗಳು ಲೈಂಗಿಕತೆಗೆ ಪ್ರಚೋದನಕಾರಿ ಎಂದು ಪರಿಗಣಿಸಬಾರದು”: ಮಹಿಳೆಯರ ನಿಂದನೆ ತಡೆಯಲು ‘ಸುಪ್ರೀಂ’ ಕೈಪಿಡಿ

    Supreme Court Handbook List: ಕಲ್ಕತ್ತಾ ಹೈಕೋರ್ಟಿನ ನ್ಯಾಯಾಧೀಶೆ ಮೌಶುಮಿ ಭಟ್ಟಾಚಾರ್ಯ ನೇತೃತ್ವದ ಸಮಿತಿಯು ಸಿದ್ಧಪಡಿಸಿರುವ ಈ ಕೈಪಿಡಿಯಲ್ಲಿ ಮಹಿಳೆಯರ ಬಗ್ಗೆ ಸಂಪ್ರದಾಯವಾದಿ ಚಿಂತನೆಯನ್ನು ಬಿಂಬಿಸಲು ಬಳಸಬಾರದ ಅವಹೇಳನಕಾರಿ ಪದಗಳ ಪಟ್ಟಿಯನ್ನು ಹೊರಡಿಸಿದೆ.


    ಮಹಿಳೆಯರೂ ಸಹ ಪುರುಷರಂತೆ ವಿವಿಧ ಕಾರಣಗಳಿಗಾಗಿ ಆಲ್ಕೋಹಾಲ್ ಅಥವಾ ಸಿಗರೇಟ್ ಸೇವಿಸುತ್ತಾರೆ. ಆ ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಲು ಆಕೆಯ ಇಚ್ಛೆಯನ್ನು ತೋರಿಸುವುದಿಲ್ಲ” ಎಂದು ಹೇಳುತ್ತಾ, ಮಹಿಳೆಯರಿಗೆ ಸಂಬಂಧಿಸಿದ ಕೆಲವು ರೂಢಿಗತ ಪರಿಕಲ್ಪನೆಗಳನ್ನು ನಿರಾಕರಿಸಿ ಸುಪ್ರೀಂ ಕೋರ್ಟ್ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದೆ.

    “ಲೈಂಗಿಕತೆಯ ಬಗ್ಗೆ ಮಹಿಳೆಯ ನಿರಾಕರಣೆ ಲಘುವಾಗಿ ತೆಗೆದುಕೊಳ್ಳಬಾರದು, ಮಹಿಳೆ ಸಾಂಪ್ರದಾಯಿಕ ಉಡುಗೆಯನ್ನು ಧರಿಸದಿದ್ದರೆ, ಅವಳು ದೈಹಿಕ ಸಂಬಂಧವನ್ನು ಹೊಂದಲು ಬಯಸುತ್ತಾಳೆ ಎಂದು ಅರ್ಥೈಸಬಾರದು.


    ಕಲ್ಕತ್ತಾ ಹೈಕೋರ್ಟಿನ ನ್ಯಾಯಾಧೀಶೆ ಮೌಶುಮಿ ಭಟ್ಟಾಚಾರ್ಯ ನೇತೃತ್ವದ ಸಮಿತಿಯು ಸಿದ್ಧಪಡಿಸಿರುವ ಈ ಕೈಪಿಡಿಯಲ್ಲಿ ಮಹಿಳೆಯರ ಬಗ್ಗೆ ಸಂಪ್ರದಾಯವಾದಿ ಚಿಂತನೆಯನ್ನು ಬಿಂಬಿಸಲು ಬಳಸಬಾರದ ಅವಹೇಳನಕಾರಿ ಪದಗಳ ಪಟ್ಟಿಯನ್ನು ಹೊರಡಿಸಿದೆ. ಇದರೊಂದಿಗೆ, ಅವುಗಳ ಬದಲಿಗೆ ಪರ್ಯಾಯ ಉತ್ತಮ ಪದಗಳು/ಪದಗಳ ಪಟ್ಟಿಯನ್ನು ಸಹ ನೀಡಲಾಗಿದೆ.


    ತೆರೆದ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಈ ಪುಸ್ತಕದ ಬಗ್ಗೆ ಮಾಹಿತಿ ನೀಡಿದರು. ಈ ಕೈಪಿಡಿಯ ಮೂಲಕ ನ್ಯಾಯಾಧೀಶರು ಮತ್ತು ವಕೀಲ ವೃತ್ತಿಗೆ ಸಂಬಂಧಿಸಿದ ಇತರ ವ್ಯಕ್ತಿಗಳು ಕಾನೂನು ಭಾಷೆಯಲ್ಲಿ ಇನ್ನೂ ಬಳಸುತ್ತಿರುವ ಸ್ಟೀರಿಯೊಟೈಪ್ ಪದಗಳನ್ನು ಗುರುತಿಸಲು ಮತ್ತು ಅದರ ಬದಲಿಗೆ ಉತ್ತಮ ಪದ/ವಾಕ್ಯಗಳನ್ನು ಬಳಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

    ಉದಾಹರಣೆಗೆ, ಈ ಪುಸ್ತಕದಲ್ಲಿ, ‘ಪುರುಷನು ತನ್ನ ಮದುವೆಯ ಹೊರತಾಗಿ ಸಂಬಂಧ ಹೊಂದಿರುವ ಮಹಿಳೆ’ ಎಂಬ ಪದದ ಬದಲಿಗೆ ‘ಉಪಪತ್ನಿ’, ‘ವೇಶ್ಯೆ’ ಬದಲಿಗೆ ‘ಲೈಂಗಿಕ ಕೆಲಸಗಾರ’ ಎಂಬ ಪದವನ್ನು ಬಳಕೆ ಮಾಡಲು ಸಲಹೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts