More

    ಶಿಕ್ಷಕಿಗೆ 31 ಲಕ್ಷ ರೂ. ಧೋಖಾ

    ಬೆಂಗಳೂರು: ಉದ್ಯಮಿ ಸೋಗಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕಿಯ ಸ್ನೇಹ ಬೆಳೆಸಿದ ವ್ಯಕ್ತಿ, 31 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಪಡೆದು ಲೈಂಗಿಕವಾಗಿ ಆಕೆಯನ್ನು ಬಳಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನಾಗರಭಾವಿ ನಿವಾಸಿ 34 ವರ್ಷದ ಶಿಕ್ಷಕಿ ವಂಚನೆಗೊಳಗಾಗಿದ್ದು, ಆರೋಪಿ ಕೋರಮಂಗಲ ನಿವಾಸಿ ಜೋ ಅಬ್ರಹಾಂ ಮ್ಯಾಥ್ಯೂಸ್ (38) ಎಂಬಾತನ ವಿರುದ್ಧ ವಿವೇಕನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಸಂತ್ರಸ್ತೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದಾರೆ. 2018ರಲ್ಲಿ ‘ಟಿಂಡರ್’ ಎಂಬ ಸಾಮಾಜಿಕ ಜಾಲತಾಣ ಬಳಕೆ ಮಾಡುತ್ತಿದ್ದರು. ಇದರ ಮೂಲಕ ಪರಿಚಯವಾಗಿದ್ದ ಅಬ್ರಹಾಂ ತಾನು ಉದ್ಯಮಿ ಎಂದು ಹೇಳಿಕೊಂಡಿದ್ದ. ಪ್ರತಿನಿತ್ಯ ಶಿಕ್ಷಕಿ ಜತೆ ಚಾಟಿಂಗ್ ಮಾಡುತ್ತಿದ್ದ. ಇಬ್ಬರ ನಡುವಿನ ಪರಿಚಯ ಸ್ನೇಹಕ್ಕೆ ತಿರುಗಿದ್ದು ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು.

    ಇದನ್ನೂ ಓದಿ:  ಕರೊನಾ ಸೇನಾನಿಗಳಿಗೆ ಊಟ ಬಡಿಸಿದ್ದ ಯುವಕನನ್ನೂ ಬಿಡಲಿಲ್ಲ ಜವರಾಯ!

    ಫೋನ್​ನಲ್ಲಿ ಮಾತನಾಡುವುದು ಹಾಗೂ ಚಾಟಿಂಗ್ ಮುಂದುವರಿಸಿದ್ದರು. ಬಳಿಕ ಇಬ್ಬರೂ ಕೋರಮಂಗಲದ ಪಬ್​ವೊಂದರಲ್ಲಿ ಭೇಟಿಯಾಗಿದ್ದರು. ಆಕೆಯೊಂದಿಗೆ ಸಲುಗೆ ಬೆಳೆಸಿದ್ದ ಆರೋಪಿ ಪಬ್, ಬಾರ್ ಸೇರಿ ಮುಂತಾದ ಕಡೆ ಸುತ್ತಾಡಿಸಿದ್ದ. ಈ ವೇಳೆ ನಂಬಿಕೆ ಗಿಟ್ಟಿಸಿಕೊಂಡು, ತನಗೆ ವ್ಯವಹಾರದಲ್ಲಿ ನಷ್ಟವಾಗಿದ್ದು, ಆರ್ಥಿಕ ಸಮಸ್ಯೆಯಾಗುತ್ತಿದೆ. ತಂಗಿಗೆ ಕಾಲೇಜಿನ ಶುಲ್ಕ ಕಟ್ಟಬೇಕು ಎಂದು ಹೇಳಿ ಹಂತಹಂತವಾಗಿ 31 ಲಕ್ಷ ರೂ. ನಗದು ಹಾಗೂ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದುಕೊಂಡಿದ್ದಾನೆ. ಅಲ್ಲದೆ, ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ್ದಾನೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಆರೋಪಿಯ ವಿರುದ್ಧ ವಂಚನೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೂರು ಪದರದ ಮಾಸ್ಕ್ ಧರಿಸಲು ಸೂಚನೆ: ನಿಲುವು ಬದಲಾಯಿಸಿದ ಡಬ್ಲ್ಯುಎಚ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts