More

    ಟೀಚ್, ಲರ್ನ್ ಪ್ರಾಮ್ ಹೋಮ್

    ಬೆಳಗಾವಿ: ಕರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಮುನ್ನೆಚ್ಚರಿಕೆಗಾಗಿ ಕೈಗೊಳ್ಳುವ ಕ್ರಮಗಳಿಂದ ಶೈಕ್ಷಣಿಕ ಚಟುವಟಿಕಗೆಳಿಗೆ ಹೊರೆ ಬೀಳದಂತೆ ‘ಮನೆಯಿಂದಲೇ ಕಲಿಯಿರಿ’ ಯೋಜನೆ ಹಾಕಿಕೊಳ್ಳಿ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ಕರಿಸಿದ್ದಪ್ಪ ಸೂಚಿಸಿದ್ದಾರೆ.

    ಆನ್‌ಲೈನ್‌ಲ್ಲಿ ಯುಟ್ಯೂಬ್ ಲೈವ್, ಗೂಗಲ್ ಕ್ಲಾಸ್, ಜೂಮ್ ಆ್ಯಪ್ ಮುಂತಾದ ವೇದಿಕೆಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಮನೆಯಿಂದಲೇ ಪಾಠ ಹೇಳಿಕೊಡಿ. ಈ ನಿಟ್ಟಿನಲ್ಲಿ ಆಯಾ ಕಾಲೇಜುಗಳ ಪ್ರಾಚಾರ್ಯರು ಕ್ರಮ ಕೈಗೊಳ್ಳುಬೇಕು ಎಂದು ಅವರು ಸಲಹೆ ನೀಡಿದ್ದಾರೆ.

    ಕರೊನಾ ವೈರಸ್ ಹರಡುವಿಕೆ ತಡೆಗಟ್ಟುವಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲು ಹಾಗೂ ಮುನ್ನೆಚ್ಚರಿಕಾ ಕ್ರಮ ಸೂಚಿಸಲು ವಿಶ್ವವಿದ್ಯಾಲಯದಲ್ಲಿ ರಾಜ್ಯದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳ ಕಾರ್ಯಾಧ್ಯಕ್ಷರು, ಪ್ರಾಚಾರ್ಯರು ಹಾಗೂ ವಿಭಾಗಗಳ ಮುಖ್ಯಸ್ಥರ ಜತೆ ಇ-ಶಿಕ್ಷಣ ವೇದಿಕೆಯಿಂದ ವಿಡಿಯೋ ಸಂವಾದ ನಡೆಸಿ, ಅವರು ಸಲಹೆ ನೀಡಿದರು.

    ಕರೊನಾ ವೈರಸ್ ಈಗಾಗಲೇ ದೇಶದ ಆರ್ಥಿಕತೆ ಹಾಗೂ ಸಾಮಾಜಿಕ ವ್ಯವಸ್ಥೆ ಹಾಳು ಮಾಡಿದ್ದು, ಹರಡುವಿಕೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ‘ಜನತಾ ಕರ್ಫ್ಯೂ’ ಆದೇಶಗಳನ್ನು ಎಲ್ಲ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು. ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಕಳುಹಿಸಿಕೊಡಬೇಕು ಹಾಗೂ ಆಡಳಿತಾತ್ಮಕ ಕಚೇರಿ ಕೆಲಸಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದರು. ಇದು ಅಜ್ಞಾನದಿಂದ ಬರುವಂತ ಕಾಯಿಲೆಯಲ್ಲ. ನಿರ್ಲಕ್ಷ್ಯತನ ಹಾಗೂ ಅಶುಚಿತ್ವದಿಂದ ಹರಡುವ ಸಾಂಕ್ರಾಮಿಕ ಕಾಯಿಲೆ. ಈ ವೈರಸ್ ವಿರುದ್ಧ ಹೋರಾಟ ಗಂಭೀರತೆಯನ್ನು ನೋಡಿದರೆ ಇದು ಕಡಿಮೆಯಾಗಲು ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದರು. ಕುಲಸಚಿವ ಡಾ. ಆನಂದ ದೇಶಪಾಂಡೆ, ಮೌಲ್ಯಮಾಪನ ಕುಲಸಚಿವ ಡಾ. ಸತೀಶ ಅಣ್ಣಿಗೇರಿ, ವಿಟಿಯು ಸಂಯೋಜಿತ 166ಕ್ಕೂ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜುಗಳ ಕಾರ್ಯಾಧ್ಯಕ್ಷರು, ಪ್ರಾಚಾರ್ಯರು ಹಾಗೂ ಆಡಳಿತ ವಿಭಾಗಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts