More

    ಓದು, ಬರಹದಲ್ಲಿ ಆಸಕ್ತಿಯಿದ್ದರೆ ಯಶಸ್ಸು ಸಾಧ್ಯ

    ಚಿತ್ತಾಪುರ: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಓದು, ಬರಹದಲ್ಲಿ ಆಸಕ್ತಿ ಇದ್ದರೆ ಮಾತ್ರ ಶಿಕ್ಷಣದಲ್ಲಿ ಯಶಸ್ಸು ಸಿಗಲು ಸಾಧ್ಯ ಎಂದು ಕಲಬುರಗಿ ಕಾಯಕ ಫೌಂಡೇಷನ್ ಸಂಸ್ಥಾಪಕ ಪ್ರೊ.ಶಿವರಾಜ ಪಾಟೀಲ್ ಹೇಳಿದರು.

    ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ತಾಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ೨೦೨೩-೨೪ನೇ ಶೈಕ್ಷಣಿಕ ಸಾಲಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರೌಢ ಶಾಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಭಯ ಬೇಡ ಎಂದರು.

    ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳು ಸಹ ಸತತವಾಗಿ ವಿದ್ಯಾರ್ಥಿಗಳು ವಿಷಯಗಳ ಪಾಠದ ಕಡೆಗೆ ಆಸಕ್ತಿಯಿಂದ ಗಮನ ಹರಿಸಿ ಚೆನ್ನಾಗಿ ಓದಿದರೇ ರ‍್ಯಾಂಕ್ ಪಡೆಯಬಹುದು. ಶಿಕ್ಷಕರು ಪಾಠದ ಪ್ರಮುಖ ಅಂಶಗಳು ವಿದ್ಯಾರ್ಥಿಗಳಿಗೆ ಬರವಣಿಗೆ ನೀಡಿದ ಬಳಿಕ ವಿವರಣೆ ನೀಡಬೇಕು. ಬರೆಯುವ, ಓದುವ ಪದ್ಧತಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಬೇಕು. ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

    ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಮಾತನಾಡಿ, ಸರ್ಕಾರಿ ಶಾಲೆಗಳು ಕೀಳು, ಖಾಸಗಿ ಶಾಲೆಗಳು ಮೇಲು ಎಂಬ ಚಿಂತೆ ವಿದ್ಯಾರ್ಥಿಗಳು, ಪಾಲಕರು ತಿಳಿದುಕೊಳ್ಳಬಾರದು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದೆ. ದೊಡ್ಡ ಹುದ್ದೆಯಲ್ಲಿದ್ದವರು, ಇತಿಹಾಸ ನಿರ್ಮಿಸಿದವರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಆದ್ದರಿಂದ ಸತತ ಅಭ್ಯಾಸದ ಪ್ರಯತ್ನದಿಂದ ವಿದ್ಯಾರ್ಥಿಗಳು ಗುರಿ ತಲುಪಬೇಕೆಂದು ಹೇಳಿದರು.

    ಪದವೀಧರ ಕಲ್ಯಾಣ ಅಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ ಸಜ್ಜನ್, ಸ್ಕೂಪ್ ಸಂಸ್ಥಾಪಕ ಗುರುಪಾದ ಕೋಗನೂರ, ಜಿಲ್ಲಾಧ್ಯಕ್ಷೆ ಸಾವಿತ್ರಿ ಪಾಟೀಲ್ ಮಾತನಾಡಿದರು.

    ಇಂಗ್ಲಿಷ್ ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ. ಶಾಂತಿ ಆರ್.ದೇಸಾಯಿ, ಗಣಿತ ಉಪನ್ಯಾಸಕ ಅಮರೇಶ್ವರ ಶಿಳಿ ಉಪನ್ಯಾಸ ನೀಡಿದರು. ಸ್ಕೂಪ್ ತಾಲೂಕು ಅಧ್ಯಕ್ಷೆ ಜಯಶೀಲಾ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

    ಬಿಇಒ ಸಿದ್ದವೀರಯ್ಯ ರುದ್ನೂರ, ನೋಡಲ್ ಅಧಿಕಾರಿ ವೆಂಕಟರೆಡ್ಡಿ ಕರೆಡ್ಡಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ, ಪ್ರೌಢ ಶಾಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷ ರವೀಂದ್ರರೆಡ್ಡಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ, ಅನುದಾನಿತ ರಹಿತ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ ಘವಾರೀಯಾ, ಮುಖಂಡರಾದ ಶಿವಶರಣಪ್ಪ ಕಾಂಬಳೆ, ಸೇವಂತಿಬಾಯಿ ಚವ್ಹಾಣ್, ವೀರೇಶ ಮಾಕಪ್, ಲಕ್ಷ್ಮೀಕಾಂತ ಸಾಲಿ ಇತರಿದ್ದರು.

    ಶ್ರೀದೇವಿ ಪ್ರಾರ್ಥನಾ ಗೀತೆ ಹಾಡಿದರು. ಸವಿತಾ ಬಾಳಿಕಾಯಿ ಸ್ವಾಗತಿಸಿದರು. ಭಾರತಿ ಸಿಂಪಿ ನಿರೂಪಣೆ ಮಾಡಿದರು. ಬೇಬಿ ಬಿರಾದಾರ ವಂದಿಸಿದರು. ತಾಲೂಕಿನ ೨೯ ಶಾಲೆಗಳ ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts