More

    ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ಚಹಾ ಮಾರಾಟಗಾರನಿಗೆ ಕಾದಿತ್ತು 50 ಕೋಟಿ ರೂ. ಶಾಕ್​

    ನವದೆಹಲಿ: ಕುರುಕ್ಷೇತ್ರದಲ್ಲಿ ಬೀದಿಬದಿ ಚಹಾ ಮಾರಾಟ ಮಾಡುವವ ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ. ಇದರಿಂದ ಪಾರಾಗಲು ಬ್ಯಾಂಕ್​ನಿಂದ ಸ್ವಲ್ಪ ಸಾಲ ಪಡೆಯೋಣ ಎಂದು ಅರ್ಜಿ ಸಲ್ಲಿಸಿದ್ದವನಿಗೆ ಬ್ಯಾಂಕ್​ವೊಂದು 50 ಕೋಟಿ ರೂ. ಶಾಕ್​ ನೀಡಿದೆ.

    ಈಗಾಗಲೆ ತೆಗೆದುಕೊಂಡಿರುವ 50 ಕೋಟಿ ರೂ. ಸಾಲವನ್ನು ಹಿಂದಿರುಗಿಸಿಲ್ಲ. ಹಾಗಾಗಿ ನಿಮಗೆ ಹೊಸದಾಗಿ ಸಾಲ ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಬ್ಯಾಂಕ್ ಸಿಬ್ಬಂದಿ​ ಚಹಾ ಮಾರಾಟಗಾರನ ಸಾಲದ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

    ಇದನ್ನೂ ಓದಿ: ಮನೆಪಾಠ ಮಾಡಲೆಂದು ಬಂದ, ಬಾಲಕನ ಮೇಲೆ ಅತ್ಯಾಚಾರ ಎಸಗಿದ; ಬಹಿರಂಗಪಡಿಸಿದರೆ ಆತ್ಮಹತ್ಯೆಯ ಬೆದರಿಕೆ ಒಡ್ಡಿದ!

    ಕೋವಿಡ್​-19 ಪಿಡುಗಿನಿಂದಾಗಿ ವಹಿವಾಟು ಸರಿಯಾಗಿ ನಡೆಯದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೆ. ಆದರೆ, ಬ್ಯಾಂಕ್​ನವರು ನಾನು ಈಗಾಗಲೆ 50 ಕೋಟಿ ರೂ. ಸಾಲ ಪಡೆದುಕೊಂಡಿದ್ದೇನೆ ಎಂದು ಹೇಳುತ್ತಿದ್ದಾರೆ. ಅದು ಯಾವಾಗ ಇಷ್ಟೊಂದು ಸಾಲ ಮಾಡಿದೆನೋ, ಬ್ಯಾಂಕ್​ನವರು ಅದು ಹೇಗೆ ಇಷ್ಟೊಂದು ಸಾಲವನ್ನು ನನಗೆ ಕೊಟ್ಟರೋ ನನಗೇ ತಿಳಿಯದಾಗಿದೆ ಎಂದು ಚಹಾ ಮಾರಾಟಗಾರ ಹೇಳಿದ್ದಾನೆ.

    ಅರ್ಜಿ ತಿರಸ್ಕೃತಗೊಂಡ ಬಳಿಕ ನಾನು ನನ್ನ ಆಧಾರ್​ಕಾರ್ಡ್​ ಸೇರಿ ಎಲ್ಲ ದಾಖಲೆಗಳನ್ನು ಕೊಂಡೊಯ್ದು ಬ್ಯಾಂಕ್​ನವರಿಗೆ ಕೊಟ್ಟು ಮರುಪರಿಶೀಲಿಸುವಂತೆ ಹೇಳಿದೆ. ಆದರೂ ಬ್ಯಾಂಕ್​ನವರು ನನ್ನ ಹೆಸರಿನಲ್ಲಿ 50 ಕೋಟಿ ರೂ. ಸಾಲ ಇರುವುದಾಗಿ ಹೇಳುತ್ತಿದ್ದಾರೆ. ಈಗ ಚಹಾ ಮಾರಾಟ ಬಿಟ್ಟು ಬೇರೆ ಏನಾದರೂ ಮಾಡಬೇಕು ಎಂದು ಪ್ರಯತ್ನಿಸುತ್ತಿದ್ದೇನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮುಂದೆ ಏನು ಮಾಡುವುದು ಎಂಬುದೇ ತಿಳಿಯದಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾನೆ.

    ಬೇಲಿ ಮೇಲೆ ಕುಳಿತಿರುವವರು ಸ್ವಲ್ಪ ಆಚೀಚೆ ನೆಗೆದರೆ ಸಚಿನ್​ ಪೈಲಟ್​ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts