More

    ಟ್ಯಾಕ್ಸಿ ಪ್ರಯಾಣವೂ ದುಬಾರಿ; ಮೂರು ವರ್ಷದ ನಂತರ ಪ್ರಯಾಣ ದರ ಹೆಚ್ಚಿಸಿ ಆದೇಶ

    ಬೆಂಗಳೂರು: ಟ್ಯಾಕ್ಸಿ ಪ್ರಯಾಣ ದರ ನಿಗದಿ ಮಾಡುವ ಕುರಿತ ನಿಯಮದಲ್ಲಿ ಬದಲಾವಣೆ ಮಾಡಿರುವ ಸಾರಿಗೆ ಇಲಾಖೆ, ವಾಹನಗಳ ಮೌಲ್ಯವನ್ನಾಧರಿಸಿ ಪ್ರಯಾಣ ದರ ಪಡೆಯಲು ಹೊಸ ದರಪಟ್ಟಿ ಪ್ರಕಟಿಸಿದೆ. ಟ್ಯಾಕ್ಸಿ ಸೇವೆಗಳ ಪ್ರಯಾಣ ದರ ನಿಗದಿಗೆ ಸಾರಿಗೆ ಇಲಾಖೆ ಹೊಸ ಮಾನದಂಡ ಅನುಸರಿಸಿದೆ. ಈ ಹಿಂದೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹವಾನಿಯಂತ್ರಿತ ಮತ್ತು ಹವಾನಿಯಂತ್ರಿತವಲ್ಲದ ಟ್ಯಾಕ್ಸಿ ಸೇವೆಗೆ ಪ್ರತ್ಯೇಕ ಪ್ರಯಾಣ ದರ ನಿಗದಿ ಮಾಡಲಾಗಿತ್ತು. ಆದರೀಗ ಅದನ್ನು ಬದಲಿಸಲಾಗಿದ್ದು, ರಾಜ್ಯಕ್ಕೆ ಅನ್ವಯವಾಗುತ್ತಿದ್ದ ವಾಹನಗಳ ಮೌಲ್ಯವನ್ನಾಧರಿಸಿ ಪ್ರಯಾಣ ದರ ನಿಗದಿಯನ್ನು ಬೆಂಗಳೂರಿಗೂ ಅನ್ವಯವಾಗುವಂತೆ ಆದೇಶಿಸಲಾಗಿದೆ. ಅದರ ಪ್ರಕಾರ ವಾಹನಗಳನ್ನು ಎ, ಬಿ, ಸಿ ಮತ್ತು ಡಿ ಎಂದು ನಾಲ್ಕು ವರ್ಗಗಳನ್ನಾಗಿ ವಿಂಗಡಿಸಿ ಪ್ರತ್ಯೇಕ ದರ ನಿಗದಿಪಡಿಸಿದೆ. ಈ ಆದೇಶದಿಂದಾಗಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಏಕರೂಪ ಪ್ರಯಾಣ ದರವಿರಲಿದೆ.

    ನಾಲ್ಕು ವರ್ಗದ ವಾಹನಗಳು: ನೂತನ ಆದೇಶದ ಪ್ರಕಾರ ಎ ಗುಂಪಿನಲ್ಲಿ 16 ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ವಾಹನ, ಬಿ ಗುಂಪಿನಲ್ಲಿ 10ರಿಂದ 16 ಲಕ್ಷ ರೂ., ಸಿ ಗುಂಪಿನಲ್ಲಿ 5ರಿಂದ 10 ಲಕ್ಷ ರೂ ಹಾಗೂ ಡಿ ಗುಂಪಿನಲ್ಲಿ 5 ಲಕ್ಷ ರೂ. ವರೆಗಿನ ಮೌಲ್ಯದ ಟ್ಯಾಕ್ಸಿಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.

    ಇದನ್ನೂ ಓದಿ: ನಿಮ್ಮೂರಿನ ಇನ್​ಸ್ಪೆಕ್ಟರ್​ ಬದಲಾಗಿದ್ದಾರಾ ನೋಡಿಕೊಳ್ಳಿ: 18 ಡಿವೈಎಸ್‌ಪಿ, 100 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ; ಇಲ್ಲಿದೆ ಪೂರ್ತಿ ಪಟ್ಟಿ

    ಪ್ರಯಾಣಿಕರಿಗೆ ಹೊರೆ: ನೂತನ ಆದೇಶದಿಂದ ಪ್ರಯಾಣಿಕರಿಗೆ ಹೊರೆಯಾಗಲಿದೆ. ನೂತನ ಆದೇಶದಿಂದಾಗಿ ಪ್ರಯಾಣಿಕರು ಹಿಂದಿಗಿಂತ ಶೇ. 80 ಹೆಚ್ಚಿನ ಹಣ ಪಾವತಿಸಬೇಕಿದೆ. ಅದರ ಜತೆಗೆ ಜಿಎಸ್‌ಟಿ ಮತ್ತು ಟೋಲ್ ಶುಲ್ಕಗಳನ್ನು ಪ್ರಯಾಣಿಕರಿಂದ ವಸೂಲಿ ಮಾಡಲು ಅವಕಾಶ ಹಾಗೆಯೇ ಮುಂದುವರಿಸಲಾಗಿದೆ.

    ದರ ತಾರತಮ್ಯಕ್ಕೆ ಬ್ರೇಕ್: ಸರ್ಕಾರ ನೂತನವಾಗಿ ನಿರ್ಮಿಸಿರುವ ಪ್ರಯಾಣ ದರವನ್ನು ಹೊರತುಪಡಿಸಿ ಪ್ರಯಾಣಿಕರಿಂದ ಬೇರೆ ದರವನ್ನು ಪಡೆಯುವಂತಿಲ್ಲ ಎಂದು ತಿಳಿಸಲಾಗಿದೆ. ಸದ್ಯ ಆ್ಯಪ್ ಆಧಾರಿತ ಸೇವೆ ನೀಡುತ್ತಿರುವ ಕೆಲ ಸಂಸ್ಥೆಗಳು ಸರ್ಕಾರದ ದರಕ್ಕಿಂತ ಕಡಿಮೆ ಮೊತ್ತವನ್ನು ಪ್ರಯಾಣಿಕರಿಂದ ಪಡೆಯುತ್ತಿದ್ದವು. ಅದರಿಂದ ಉಳಿದ ಸಂಸ್ಥೆಗಳಿಗೆ ಪ್ರಯಾಣಿಕರಲಿಲ್ಲದಂತಾಗಿತ್ತು. ಇದೀಗ ಸರ್ಕಾರ ನಿಗದಿ ಮಾಡಿರುವ ದರವನ್ನೇ ಪ್ರಯಾಣಿಕರಿಂದ ಪಡೆಯಬೇಕು ಎಂಬ ಆದೇಶವು, ಪ್ರಯಾಣ ದರ ವಸೂಲಿಯಲ್ಲಿನ ತಾರತಮ್ಯಕ್ಕೆ ಕಡಿವಾಣ ಹಾಕಿದಂತಾಗಲಿದೆ.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    3 ವರ್ಷದ ನಂತರ ಹೆಚ್ಚಳ: ಮೂರು ವರ್ಷಗಳ ನಂತರ ವಾಹನಗಳ ಮೌಲ್ಯವನ್ನಾಧರಿಸಿ ಮಾಡಲಾದ ವರ್ಗಗಳ ವಾಹನದ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿದೆ. 2018ರಲ್ಲಿ ಈ ಕುರಿತಂತೆ ಪ್ರಯಾಣ ದರ ಪರಿಷ್ಕರಿಸಿ ಹೆಚ್ಚಳ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮೊದಲ 4 ಕಿ.ಮೀ.ಗೆ ಡಿ ವರ್ಗದ ವಾಹನಗಳಿಗೆ 44 ರೂ., ಸಿ ವರ್ಗದ ವಾಹನಗಳಿಗೆ 48 ರೂ., ಬಿ ವರ್ಗಕ್ಕೆ 64 ರೂ. ಹಾಗೂ ಎ ವರ್ಗಕ್ಕೆ 80 ರೂ. ಪ್ರಯಾಣ ದರ ನಿಗದಿ ಮಾಡಲಾಗಿತ್ತು.

    * ಕಾಯುವಿಕೆ ದರ ಮೊದಲ 20 ನಿಮಿಷಗಳಿಗೆ ಉಚಿತ. ನಂತರದ ಪ್ರತಿ 15 ನಿಮಿಷಕ್ಕೆ 10 ರೂ. ವಸೂಲಿಗೆ ಅನುಮತಿ

    ಪ್ರಯಾಣ ದರದ ವಿವರ 

    ವರ್ಗ- ನಿಗದಿತ ದರ (ಕನಿಷ್ಠ 4 ಕಿ.ಮೀ.) ಹೆಚ್ಚುವರಿ ಪ್ರತಿ ಕಿ.ಮೀ. ದರ

    • ಡಿ- 75 ರೂ. 18 ರೂ. (ಕನಿಷ್ಠ)36 ರೂ. (ಗರಿಷ್ಠ)
    • ಸಿ- 100 ರೂ. 21 ರೂ. (ಕನಿಷ್ಠ)42 ರೂ. (ಗರಿಷ್ಠ)
    • ಬಿ- 120 ರೂ. 24 ರೂ. (ಕನಿಷ್ಠ)48 ರೂ. (ಗರಿಷ್ಠ)
    • ಎ- 150 ರೂ. 27 ರೂ. (ಕನಿಷ್ಠ)54 ರೂ. (ಗರಿಷ್ಠ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts