More

    ಬಿಜೆಪಿ ಶಾಸಕನ ಹೆಸರಿನಲ್ಲಿ ನಕಲಿ ಖಾತೆ ಸೃಜಿಸಿ ಮಹಿಳೆಯರಿಗೆ ಮೆಸೇಜ್; ಆರೋಪಿ ಸೆರೆ

    ಮುಂಬೈ: ಬಿಜೆಪಿ ಶಾಸಕರೊಬ್ಬರ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆ ಸೃಷ್ಟಿಸಿ ಮಹಿಳೆಯರಿಗೆ ಮೆಸೇಜ್​ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು 28 ವರ್ಷದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

    ಥಾಣೆಯ ಕಲ್ಯಾಣ್​ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಗಣಪತಿ ಗಾಯಕ್ವಾಡ್​ ನೀಡಿದ ದೂರಿನ ಮೇರೆಗೆ ಪೊಲೀಸರು 28 ವರ್ಷದ ಕ್ಯಾಬ್​ ಚಾಲಕ ಚಂದನ್​ ಶಿರ್ಸೆಕಾರ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    BJP Mla

    ಇದನ್ನೂ ಓದಿ: ಎಸ್‌ಇಪಿ ರಚನೆಗೆ ಸದ್ಯದಲ್ಲಿಯೇ ಕ್ರಮ, ಮುಂದಿನ ವರ್ಷ ನೀತಿ ಅನುಷ್ಠಾನಕ್ಕೆ ಸಿದ್ಧತೆ: ಸಚಿವ ಮಧು ಬಂಗಾರಪ್ಪ

    ಈ ಕುರಿತು ಪ್ರತಿಕ್ರಿಯಿಸಿರುವ ಕೊಲ್ಸೆವಾಡಿ ಪೊಲೀಸ್​ ಠಾಣಾಧಿಕಾರಿ ದೇಶ್​ಮುಖ್​ ಥಾಣೆಯ ಕಲ್ಯಾಣ್ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಗಣಪತಿ ಗಾಯಕ್ವಾಡ್​ ಹೆಸರಿನಲ್ಲಿ ವೃತ್ತಿಯಲ್ಲಿ ಕ್ಯಾಬ್​ ಚಾಲಕನಾಗಿರುವ ಚಂದನ್​ ಶಿರ್ಸೆಕಾರ್​ ಎಂಬ ವ್ಯಕ್ತಿಯೂ ನಕಲಿ ಖಾತೆಯನ್ನು ಸೃಷ್ಟಿಸಿ ಮೆಸೇಜ್​ ಮಾಡುತ್ತಿರುತ್ತಾನೆ.

    ಈ ಬಗ್ಗೆ ಶಾಸಕ ಗಣಪತಿ ಅವರನ್ನು ಭೇಟಿಯಾದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರಿನ ಖಾತೆಯಿಂದ ಮೆಸೇಜ್​ ಮಾಡಿರುವ ಕುರಿತು ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಶಾಸಕ ಪೊಲೀಸ್​ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಆರೋಪಿ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಕ್ಯಾಬ್​ ಚಾಲಕನನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿ ವಿರುದ್ಧ ಭಾರತ ದಂಡ ಸಂಹಿತೆ(IPC Section) 499(ಮಾನನಷ್ಟ) ಸೇರಿದಂತೆ ಇತರೆ ಸಂಬಂಧಿತ ನಿಬಂದನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೊಲ್ಸೆವಾಡಿ ಪೊಲೀಸ್​ ಠಾಣಾಧಿಕಾರಿ ದೇಶ್​ಮುಖ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts