More

  ಗಣರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸೋಣ

  ತಾವರಗೇರಾ: ಜ.26 ರಂದು ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ನಬಿಸಾಬ ಖುದನವರ ಹೇಳಿದರು. ಪಟ್ಟಣದ ವೆಂಕಟೇಶ್ವರ ಮಂಗಲಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

  ಸಾಧಕರಿಗೆ ಸನ್ಮಾನಿಸಲು ತೀರ್ಮಾನ

  ವಿವಿಧ ರಂಗದಲ್ಲಿ ಸಾಧನೆ ಮಾಡಿದವರಿಗೆ ಗಣರಾಜ್ಯೋತ್ಸವದಲ್ಲಿ ಸನ್ಮಾನ ಮಾಡಬೇಕು ಎಂದು ಸಭೆಯಲ್ಲಿ ಪ್ರಮುಖರು ಸಲಹೆ ನೀಡಿದರು. ಕ್ರೀಡೆಯಲ್ಲಿ ವಿಶ್ವವಿದ್ಯಾಲಯದ ಮಟ್ಟದಲ್ಲಿ ಸಾಧನೆ ಮಾಡಿದ ಪಟ್ಟಣದ ಮೂವರನ್ನು ಮತ್ತು ಚಾರ್ಟಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಹಾಗೂ ಪಿಎಚ್.ಡಿ ಪದವಿ ಪಡೆದ ಸಾಧಕರಿಗೆ ಸನ್ಮಾನಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

  ಇದನ್ನೂ ಓದಿ: ಬೀದಿ ದೀಪ ನಿರ್ವಹಣೆ ಟೆಂಡರ್​ ಅಕ್ರಮ! ಪ್ರಭಾವಕ್ಕೆ ಒಳಗಾಯಿತೆ ಜಿಲ್ಲಾಡಳಿತ?

  ನಾಡಕಚೇರಿಯ ಉಪ ತಹಸೀಲ್ದಾರ್ ಶರಣಬಸವೇಶ್ವರ ಕಳೀಮಠ, ಪಟ್ಟಣ ಪಂಚಾಯಿತಿ ಸದಸ್ಯರಾದ ಬಸನಗೌಡ ಓಲಿ, ಶಾಮಣ್ಣ ಬಜಂತ್ರಿ , ಬೇಬಿರೇಖಾ, ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಸುಭಾಷ್ ಪೋರೆ , ಮುಖ್ಯ ದೈಹಿಕ ಶಿಕ್ಷಣ ಶಿಕ್ಷಕ ಗವಿಸಿದ್ಧಪ್ಪ ನಾಗಲೀಕರ , ಎಎಸ್‌ಐ ನಿಂಗಪ್ಪ ಹೂಗಾರ , ಕಸಾಪ ತಾಲೂಕಾಧ್ಯಕ್ಷ ರವೀಂದ್ರ ಬಳೆಗಾರ, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಸೂಡಿ, ಪಪಂ ಸಿಬ್ಬಂದಿ ಶರಣಬಸವ ಸೈಂಧರ, ಶಾಮೂರ್ತಿ ಕಟ್ಟಿಮನಿ, ಮರೇಶ , ಅಬ್ದುಲ್ ರಜಾಕ್ ಇನ್ನಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts