ಬೀದಿ ದೀಪ ನಿರ್ವಹಣೆ ಟೆಂಡರ್​ ಅಕ್ರಮ! ಪ್ರಭಾವಕ್ಕೆ ಒಳಗಾಯಿತೆ ಜಿಲ್ಲಾಡಳಿತ?

435

ಬೀದಿ ದೀಪ ನಿರ್ವಹಣೆ ಟೆಂಡರ್​ ಅಕ್ರಮ ಆರೋಪಿತರ ಮೇಲೆ ಕ್ರಮ ಏಕಿಲ್ಲ?

ಶಿವಾನಂದ ಹಿರೇಮಠ, ಗದಗ
ಬೀದಿ ದೀಪ ನಿರ್ವಹಣೆ ಗುತ್ತಿಗೆ ಟೆಂಡರ್​ನಲ್ಲಿ ಕಾನೂನು ಬಾಹಿರ ಪ್ರಕ್ರಿಯೆ ಜರುಗಿದ್ದ ಪ್ರಕರಣ ಬೆಳಕಿಗೆ ಬಂದರೂ, ನಗರಾಭಿವೃದ್ಧಿ ಕೋಶ ಮತ್ತು ಜಿಲ್ಲಾಡಳಿತ ಆರೋಪಿತರ ಮೇಲೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ. ಸಕ್ಷಮ ಪ್ರಾಧಿಕಾರವನ್ನೂ ಮೀರಿ ಕೋಟಿಗೂ ಅಧಿಕ ಮೊತ್ತದ ಟೆಂಡರ್​ ಪ್ರಕ್ರಿಯೆ ನಗರಸಭೆ ಆವರಣದಲ್ಲೇ ನಡೆದರೂ ಅಕ್ರಮ ವಿರುದ್ಧ ತೊಡೆ ತಟ್ಟಬೇಕಿದ್ದ ಜಿಲ್ಲಾಡಳಿತವು ನಗರಸಭೆ ಅಧಿಕಾರಿಗಳ ಮತ್ತು ಕೆಲ ಜನಪ್ರತಿನಿಧಿಗಳ ಹಿತಾಸಕ್ತಿಗಾಗಿ, ಮುತುವಜಿರ್ಗಾಗಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಹಿಂದಡಿ ಇಟ್ಟಿತೇ ಎಂಬ ಮಾತುಗಳು ಜಿಲ್ಲಾಡಳಿತ ಮತ್ತು ನಗರಸಭೆ ಆವರಣದಲ್ಲಿ ಕೇಳಿ ಬರುತ್ತಿದೆ.
ಟೆಂಡರ್​ ಪ್ರಕ್ರಿಯೆಯಲ್ಲಿ ನಡೆದ ಅಕ್ರಮ ಕುರಿತು ವಿಜಯವಾಣಿ ದಿನಪತ್ರಿಕೆ ನಿರಂತರ ಸುದ್ದಿ ಬಿತ್ತರಿಸಿತ್ತಿದ್ದಂತೆ, ಟೆಂಡರ್​ ದಾಖಲೆ ಪರಿಶೀಲಿಸಿದ್ದ ಜಿಲ್ಲಾಡಳಿತ ಜ.3 ರಂದು ನಗರಸಭೆ ಪೌರಾಯುಕ್ತ ಗಂಗಪ್ಪ ಎಂ ಅವರಿಗೆ ಕಾರಣ ಕೇಳಿ ನೋಟೀಸ್​ ನೀಡಿತ್ತು. ಟೆಂಡರ್​ ನಲ್ಲಿ ಆಗಿರುವ ಲೋಪದೋಷಗಳನ್ನು ನೋಟೀಸ್​ ನಲ್ಲಿ ಉಲ್ಲೇಖಿಸಿ, ನಗರಸಭೆ ಪೌರಾಯುಕ್ತ ಗಂಗಪ್ಪ ಎಂ ವಿರುದ್ಧ ಸರ್ಕಾರಿ ಸೇವಾ ನಿಯಮ ಉಲ್ಲಂನೆ(ಕೆಸಿಎಸ್​) ಕುರಿತು ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿತ್ತು. ನೋಟೀಸ್​ ಗೆ ಉತ್ತರವಾಗಿ ಲಿಖಿತ ಹೇಳಿಕೆ ಸಲ್ಲಿಸಿದ್ದ ಗಂಗಪ್ಪ ಎಂ. ಅವರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಅಕ್ರಮ ಸಾಭಿತಾಗಿದ್ದರೂ ಪೌರಾಯುಕ್ತ ಗಂಗಪ್ಪ ಎಂ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಮುಂದಡಿ ಇಡದಿರುವುದು ಯಕ್ಷ ಪ್ರಶ್ನೆ ಆಗಿದೆ.

ದಾಖಲೆ ಬಹಿರಂಗ ಏಕಿಲ್ಲ?
ಬೀದಿ ದೀಪ ನಿರ್ವಹಣೆ ಟೆಂಡರ್​ ದಾಖಲೆಗಳು ಇತ್ತೀಚಿನ ವರೆಗೂ ನಗರಸಭೆ ಪ್ರಭಾವಿ ಜನಪ್ರತಿನಿಧಿ ಮನೆಯಲ್ಲಿ ಇಟ್ಟುಕೊಳ್ಳಲಾಗಿತ್ತು. ವಿಜಯವಾಣಿ ದಿನ ಪತ್ರಿಕೆಯಲ್ಲಿ ವರದಿ ಬಿತ್ತರಿಸುತ್ತಿದ್ದಂತೆ ನಗರಸಭೆಯಲ್ಲಿ ತಂದು ಇಡಲಾಯಿತು ಎಂದು ನಗರಸಭೆ ಸದಸ್ಯರೇ ವಿಜಯವಾಣಿಗೆ ತಿಳಿಸಿದ್ದಾರೆ. ಈ ನಡುವೆ ಜಿಲ್ಲಾಡಳಿತದಿಂದ ಟೆಂಡರ್​ ಅಕ್ರಮದ ತನಿಖೆ ನಡೆಯುತ್ತಿರುವಾಗಲೇ ನಿರ್ವಹಣೆಗಾಗಿ ಕಡಿಮೆ ಬಿಡ್​ ಮಾಡಿದ ಚೈತನ್ಯ ಎಲೆಕ್ಟ್ರಿಕಲ್​ ಗುತ್ತಿಗೆದಾರನಿಗೆ ನಗರಸಭೆ ಸದ್ದಿಲ್ಲದೇ ಟೆಂಡರ್​ ಕಾರ್ಯಾದೇಶ ನೀಡಿದ ದಾಖಲೆಯನ್ನು ನಗರಸಭೆ ಗೌಪ್ಯವಾಗಿ ಇಟ್ಟಿಕೊಂಡಿದೆ. ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಹೊಸ ಕಾರ್ಯಾದೇಶ ದಾಖಲೆಯನ್ನು ಕೇಳೀದರೂ ನಗರಸಭೆ ಅಧಿಕಾರಿಗಳು ಸಲ್ಲಿಸುತ್ತಿಲ್ಲ ಎನ್ನಲಾಗಿದೆ. ಈ ಕುರಿತು ಪೌರಾಯುಕ್ತರಿಂದ ಮೌಖಿಕ ಹೇಳಿಕೆ ಪಡೆಯಲು ಜಿಲ್ಲಾಡಳಿತ ಮುಂದಾಗಿದೆ ಎನ್ನಲಾಗಿದೆ. ಒಂದು ತಪ್ಪನ್ನು ಮುಚ್ಚಲು ಹಲವು ತಪ್ಪುಗಳನ್ನು ನಗರಸಭೆ ಮೈಮೇಲೆ ಎಳೆದುಕೊಳ್ಳುತ್ತಿದೆ. ಈ ಅಕ್ರಮವನ್ನು ತಡೆ ಹಿಡಿಯಲು ಜಿಲ್ಲಾಡಳಿತ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್​ ನಗರಸಭೆ ಸದಸ್ಯರು ಆರೋಪಿಸಿದ್ದಾರೆ.

ಏನಿದು ಪ್ರಕರಣ:
ಕೆಟಿಪಿಪಿ ನಿಯಮ ಉಲ್ಲಂಘಿಸಿದ ಠರಾವು ಸಂಖ್ಯೆ 263ರ ನಡಾವಳಿಗೆ ನಗರಸಭೆ ಅಧ್ಯೆ ಉಷಾ ದಾಸರ ಮತ್ತು ಕೋಟಿಗೂ ಅಧಿಕ ಮೊತ್ತದ ಕಾರ್ಯಾದೇಶಕ್ಕೆ ಪೌರಾಯುಕ್ತರು ಸಹಿ ಮಾಡಿದ್ದಲ್ಲದೇ ಕಡಿಮೆ ಬಿಡ್​ ಮಾಡಿದ ಗುತ್ತಿಗೆದಾರನನ್ನು ಕೈಬಿಟ್ಟು ಅಧಿಕ ಬಿಡ್​ ಮಾಡಿದ ಗುತ್ತಿಗೆದಾರನಿಗೆ ಟೆಂಡರ್​ ನೀಡಿದ ಪ್ರಕರಣ ಇದಾಗಿದೆ. ಟೆಂಡರ್​ ಆಥಿರ್ಕ ಬಿಡ್​ ತೆರೆಯುವುದಕ್ಕೂ ಪೂರ್ವದಲ್ಲೇ ಅಧ್ಯೆ ಉಷಾ ದಾಸರ ನೇತೃತ್ವದಲ್ಲಿ ಜರುಗಿದ ನಗರಸಭೆ ಸಾಮಾನ್ಯ ಸಭೆಯಲ್ಲಿ ಟೆಂಡರ್​ ದರಕ್ಕೆ ಅನುಮೋದನೆ ನೀಡಿದ್ದರಿಂದ ಅಕ್ರಮ ಸಾಭಿತಾಗಿದೆ. ಜ.5 ರಂದೇ ಪೌರಾಯುಕ್ತರು ಹೇಳಿಕೆ ನೀಡಿದ್ದರೂ ಜಿಲ್ಲಾಡಳೀತ ಕ್ರಮ ಕೈಗೊಳ್ಳದಿರುವುದೇ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಬೀದಿ ದೀಪ ನಿರ್ವಹಣೆ ಟೆಂಡರ್​ ಅಕ್ರಮ! ಪ್ರಭಾವಕ್ಕೆ ಒಳಗಾಯಿತೆ ಜಿಲ್ಲಾಡಳಿತ?

ಕೋಟ್​:
ಬೀದಿ ದೀಪ ನಿರ್ವಹಣೆ ಎಂದರೇ ಭ್ರಷ್ಟರಿಗೆ ಸ್ವರ್ಗ ಇದ್ದಂತೆ. 2018 ರಿಂದಲೂ ಜಿಲ್ಲಾಡಳೀತ ಈ ಕುರಿತು ತನಿಖೆ ನಡೆಸಬೇಕು. ನಗರಸಭೆಯಲ್ಲಿ ಹೊಂದಾಣಿಕೆ ರಾಜಕಾರಣ ಇರುವುದರಿಂದ ಎಲ್ಲ ಅಕ್ರಮಗಳು ಮುಚ್ಚಿ ಹೋಗುತ್ತಿವೆ.
ಸುರೇಶ ಕಟ್ಟಿಮನಿ, ನಗರಸಭೆ ಕಾಂಗ್ರೆಸ್​ ಸದಸ್ಯ.

ಬೀದಿ ದೀಪ ನಿರ್ವಹಣೆ ಟೆಂಡರ್​ ಅಕ್ರಮ! ಪ್ರಭಾವಕ್ಕೆ ಒಳಗಾಯಿತೆ ಜಿಲ್ಲಾಡಳಿತ?

ಕೋಟ್​:
ತನಿಖೆ ಡೆಯುವಾಗ ಮತ್ತೊಬ್ಬರಿಗೆ ಗುತ್ತಿಗೆ ನೀಡುವುದು ಅಪರಾಧ ಆಗುತ್ತದೆ. ಈ ಕುರಿತು ಪೌರಾಯುಕ್ತರನ್ನು ಕರೆದು ವಿಚಾರಿಸಲಾಗುವುದು. ಟೆಂಡರ್​ ಅಕ್ರಮ ಕುರಿತು ಮೌಖಿಕವಾಗಿ ಪ್ರತಿಕ್ರಿಯೆ ಕೇಳಲಾಗುವುದು.
ವೈಶಾಲಿ ಎಂ.ಎಲ್​. ಜಿಲ್ಲಾಧಿಕಾರಿ