More

    ತಮಿಳುನಾಡಲ್ಲಿ ಟಾಟಾ ಐಫೋನ್​ ಕಾರ್ಖಾನೆ

    ನವದೆಹಲಿ: ಭಾರತದಲ್ಲಿ ಐಫೋನ್​ಗಳ ತಯಾರಿಕೆಯನ್ನು ಹೆಚ್ಚಿಸುವ ಆ್ಯಪಲ್​ ಕಂಪನಿಯ ಮಹತ್ವಾಕಾಂಕ್ಷೆಯ ಯೋಜನೆಯ ಲಾಭ ಪಡೆದು ಐಫೋನ್​ ಬಿಡಿಭಾಗ ಜೋಡಿಸುವ ಭಾರತದ ಅತಿ ದೊಡ್ಡ ಕಾರ್ಖಾನೆಯನ್ನು ಚೆನ್ನೈ ಸಮೀಪ ಸ್ಥಾಪಿಸಲು ಟಾಟಾ ಸಮೂಹ ಚಿಂತನೆ ನಡೆಸಿದೆ.

    ತಮಿಳುನಾಡಿನ ಹೊಸೂರಿನಲ್ಲಿ ದೊಡ್ಡ ಸ್ಥಾವರವನ್ನು ಸ್ಥಾಪಿಸುವುದು ಟಾಟಾ ಗುರಿಯಾಗಿದೆ. ಕಾರ್ಖಾನೆಯಲ್ಲಿ ಬಿಡಿಭಾಗ ಜೋಡಿಸುವ 20 ಅಸೆಂಬ್ಲಿ ಲೈನ್​ಗಳಿದ್ದು ಸುಮಾರು 50,000 ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂಭವವಿದೆ ಎಂದು ಮೂಲದವರು ತಿಳಿಸಿದ್ದಾರೆ. 12ರಿಂದ 18 ತಿಂಗಳಲ್ಲಿ ಕಾರ್ಖಾನೆ ಕಾರ್ಯಾರಂಭ ಮಾಡಲು ಟಾಟಾ ಯೋಜಿಸಿದೆ ಎಂದವರು ಹೇಳಿದ್ದಾರೆ.

    ಕರ್ನಾಟಕದ ನರಸಾಪುರದಲ್ಲಿದ್ದ ಐಫೋನ್​ ತಯಾರಿಕಾ ಕಂಪನಿ ವಿಸ್ಟ್ರಾನ್​ ಕಾರ್ಪೊರೇಶನ್​ಅನ್ನು ಟಾಟಾ ಈಗಾಗಲೇ ಖರೀದಿಸಿದೆ. ಸರಬರಾಜು ಸರಣಿಯನ್ನು ಸ್ಥಳಿಯಗೊಳಿಸುವ ಹಾಗೂ ಟಾಟಾದೊಂದಿಗಿನ ಪಾಲುದಾರಿಕೆಯನ್ನು ಬಲಪಡಿಸುವ ಆ್ಯಪಲ್​ ಪ್ರಯತ್ನಗಳಿಗೆ ಹೊಸೂರು ಸ್ಥಾವರ ಇಂಬು ನೀಡಲಿದೆ. ಚೀನಾದಲ್ಲಿ ಐೋನ್​ ಉತ್ಪಾದನೆ ಪ್ರಕ್ರಿಯೆಯಿಂದ ದೂರ ಸರಿದು ತನ್ನ ಕಾರ್ಯಾಚರಣೆಗಳನ್ನು ಭಾರತ, ಥಾಯ್ಲೆಂಡ್​, ಮಲೇಶ್ಯಾ ಮತ್ತಿತರ ಕಡೆ ವಿಸ್ತರಿಸಲು ಆ್ಯಪಲ್​ ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts