More

    ಕಾಸರಗೋಡಿನಲ್ಲಿ ಟಾಟಾ ಆಸ್ಪತ್ರೆ ಉದ್ಘಾಟನೆ

    ಕಾಸರಗೋಡು: ಜಿಲ್ಲೆಯ ಚಟ್ಟಂಚಾಲ್ ಸಮೀಪದ ಪುದಿಯವಳಪ್ಪಿನಲ್ಲಿ ಟಾಟಾ ಸಮೂಹ ಸಂಸ್ಥೆ ನಿರ್ಮಿಸಿದ ಕೋವಿಡ್ ಆಸ್ಪತ್ರೆ ಬುಧವಾರ ಉದ್ಘಾಟನೆಗೊಂಡಿತು. ಆಸ್ಪತ್ರೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೊನಾ ಸಂಕಟದ ದಿನಗಳಲ್ಲಿ ಜನರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯ ನೀಡಲು ಸರ್ಕಾರ ಬದ್ಧವಾಗಿದೆ ಎಂದರು. ಆಸ್ಪತ್ರೆ ಐದು ಎಕರೆ ವಿಸ್ತೀರ್ಣದ ಜಾಗದಲ್ಲಿ 124 ದಿನಗಳ ಅವಧಿಯಲ್ಲಿ 60 ಕೋಟಿ ರೂ.ವೆಚ್ಚದಲ್ಲಿ 541 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣಗೊಂಡಿದೆ.

    ವಿಶೇಷತೆಗಳು: 51,200 ಚದರ ಅಡಿ ವಿಸ್ತೀರ್ಣದ, 541 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ನಿರ್ಮಾಣಕ್ಕೆ ತಗುಲಿದ ಒಟ್ಟು ಖರ್ಚು 60 ಕೋಟಿ ರೂ. ಒಟ್ಟು 128 ಯೂನಿಟ್‌ಗಳಿವೆ. ನಿರ್ವಹಣೆ ಮತ್ತು ಸಿಬ್ಬಂದಿ ನೇಮಕಾತಿ ಕೇರಳ ರಾಜ್ಯ ಸರ್ಕಾರದ ಜವಾಬ್ದಾರಿ. 30 ವರ್ಷಗಳವರೆಗೂ ಯಾವುದೇ ಸಮಸ್ಯೆಯಿಲ್ಲದೆ ಯೂನಿಟ್‌ಗಳ ಕಾರ್ಯನಿರ್ವಹಣೆ ಸಾಧ್ಯವಿದ್ದು, ಸಕಾಲದಲ್ಲಿ ದುರಸ್ತಿ ಮಾಡುತ್ತ ಬಂದರೆ 50 ವರ್ಷಗಳವರೆಗೂ ಸಮಸ್ಯೆಯಿಲ್ಲದೆ ಮುಂದುವರಿಯಲು ಸಾಧ್ಯ. 128 ಸ್ಟೀಲ್ ಕಂಟೈನರ್‌ಗಳಿದ್ದು, ಪ್ರತಿ ಕಂಟೈನರ್ 10 ಮೀ. ಉದ್ದ, ನಾಲ್ಕು ಮೀ. ಅಗಲದ ಹೊಂದಿದೆ. ನಿಗಾದಲ್ಲಿರುವವರಿಗೆ ಪ್ರತಿ ಯೂನಿಟ್‌ನಲ್ಲಿ 5 ಹಾಸಿಗೆ, ಚಿಕಿತ್ಸೆಯಲ್ಲಿರುವವರಿಗೆ ಮೂರು ಹಾಸಿಗೆಯ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಘಟಕದಲ್ಲಿ 2 ಎಸಿ, 5 ಫ್ಯಾನ್, ಪ್ರತ್ಯೇಕ ಶೌಚಗೃಹಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts