More

    ‘ರಾಬರ್ಟ್’ ಬಿಡುಗಡೆ ಯಾವಾಗ? – ತರುಣ್ ಹೇಳುತ್ತಾರೆ ಕೇಳಿ …

    ದರ್ಶನ್ ಅಭಿನಯದ ‘ರಾಬರ್ಟ್’ ಲಾಕ್‌ಡೌನ್ ಮುಗಿಯುತ್ತಿದ್ದಂತೆಯೇ ಬಿಡುಗಡೆ ಆಗಬೇಕಿತ್ತು. ಆದರೆ, ಲಾಕ್‌ಡೌನ್ ವಿಸ್ತರಣೆಯಾಗಿರುವುದಷ್ಟೇ ಅಲ್ಲ, ಸದ್ಯಕ್ಕೆ ಯಾವಾಗ ಬಿಡುಗಡೆ ಆಗಬಹುದು ಎಂದು ಯಾರಿಗೂ ಹೇಳಲು ಸಾಧ್ಯವಾಗುತ್ತಿಲ್ಲ.

    ಹೀಗಿರುವಾಗಲೇ, ‘ರಾಬರ್ಟ್’ ಬಿಡುಗಡೆಯ ಕುರಿತು, ದಿನಕ್ಕೊಂದು ಮಾಹಿತಿ ಬರುತ್ತಲೇ ಇದೆ. ಚಿತ್ರ ಜೂನ್‌ನಲ್ಲಿ ಬಿಡುಗಡೆ ಎಂದು ಮೊದಲು ಹೇಳಲಾಗಿತ್ತು. ಇದೀಗ ಆಗಸ್ಟ್ 15ಕ್ಕೆ ‘ರಾಬರ್ಟ್’ ಬರುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಈ ಕುರಿತು ನಿರ್ದೇಶಕ ತರುಣ್ ಸುಧೀರ್ ಅವರ ಪ್ರತಿಕ್ರಿಯೆ ಕೇಳಿದರೆ, ‘ಸದ್ಯಕ್ಕೆ ಯಾವಾಗ ಬಿಡುಗಡೆ ಎಂದು ನಮಗೂ ಗೊತ್ತಿಲ್ಲ’ ಎನ್ನುತ್ತಾರೆ.

    ಇದನ್ನೂ ಓದಿ: ನನ್ ಹೊಟ್ಟೆ ಮೇಲೆ ಯಾಕೆ ಹೊಡೀತೀಯೋ ಮಾರಾಯ …

    ‘ಇತ್ತೀಚೆಗೆ ನಮ್ಮ ನಿರ್ಮಾಪಕರಿಗೆ ಯಾರೋ ಫೋನ್​ ಮಾಡಿ, ಚಿತ್ರದ ಬಿಡುಗಡೆ ಯಾವಾಗ ಎಂದು ಕೇಳಿದ್ದಾರೆ. ಸದ್ಯಕ್ಕೆ ಆ ಬಗ್ಗೆ ಕ್ಲಾರಿಟಿ ಸಿಗುತ್ತಿಲ್ಲವಾದ್ದರಿಂದ, ಆಗಸ್ಟ್ ಹೊತ್ತಿಗೆ ಬಿಡುಗಡೆ ಆಗಬಹುದು ಎಂದು ಅವರು ಹೇಳಿದ್ದಾರೆ. ಅಷ್ಟಕ್ಕೇ, ಆಗಸ್ಟ್ 15ರಂದು ಚಿತ್ರ ಬಿಡುಗಡೆ ಎಂದು ಸುದ್ದಿಯಾಗಿದೆ. ಇದು ಸುಳ್ಳು’ ಎನ್ನುತ್ತಾರೆ ತರುಣ್.

    ಹಾಗಾದರೆ, ‘ರಾಬರ್ಟ್’ ಬಿಡುಗಡೆ ಯಾವಾಗ? ಈ ಬಗ್ಗೆ ಅವರಿಗೂ ಸ್ಪಷ್ಟತೆ ಇಲ್ಲವಂತೆ. ‘ಮೊದಲಿಗೆ ಲಾಕ್‌ಡೌನ್ ಮುಗಿಯಬೇಕು. ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳು ಯಾವಾಗ ಪ್ರಾರಂಭವಾಗುತ್ತದೆ ಎಂದು ಗೊತ್ತಾಗಬೇಕು. ಶುರುವಾದ ಮೇಲೆ ಎರಡ್ಮೂರು ವಾರಗಳ ಕಾಲ ನೋಡಿಕೊಂಡು ನಂತರ ಬರುತ್ತೇವೆ. ನಮ್ಮ ಚಿತ್ರ ಸಂಪೂರ್ಣ ಸಿದ್ಧವಿದೆ. ಸೆನ್ಸಾರ್‌ಗೂ ಕಳಿಸಲಾಗಿತ್ತು. ಅಷ್ಟರಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಲಾಕ್‌ಡೌನ್ ಮುಗಿದು, ಸೆನ್ಸಾರ್ ಆದ ಮೇಲಷ್ಟೇ ಮುಂದಿನ ತೀರ್ಮಾನ. ಅದೇ ಕಾರಣಕ್ಕೆ ಚಿತ್ರದ ಪಬ್ಲಿಸಿಟಿ ಸಹ ಶುರು ಮಾಡಿಲ್ಲ. ಒಮ್ಮೆ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿಬಿಟ್ಟರೆ, ಆ ನಂತರ ಚಿತ್ರದ ಪ್ರಚಾರ ಶುರು ಮಾಡುತ್ತೇವೆ’ ಎನ್ನುತ್ತಾರೆ ತರುಣ್ ಸುಧೀರ್.

    ಇದನ್ನೂ ಓದಿ: ಧಾರಾವಾಹಿ ಶೂಟಿಂಗ್ ಮುಂದಕ್ಕೆ; ಜೂನ್‌ನಿಂದ ಹೊಸ ಎಪಿಸೋಡ್‌ಗಳು

    ‘ರಾಬರ್ಟ್’ ಚಿತ್ರದಲ್ಲಿ ದರ್ಶನ್ ಎದುರು ಆಶಾ ಭಟ್ ನಾಯಕಿಯಾಗಿ ನಟಿಸಿದ್ದು, ಜಗಪತಿ ಬಾಬು, ವಿನೋದ್ ಪ್ರಭಾಕರ್ ಮುಂತಾದವರು ನಟಿಸಿದ್ದಾರೆ. ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

    ಕೊನೆಗೂ ನನಸಾಗಲೇ ಇಲ್ಲ ಜಾಕಿ ಕನಸು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts