More

    ಭರವಸೆಯ ಒಂದು ಬೆಳಕು … ಕರೊನಾ ವಾರಿಯರ್ಸ್​ಗೆ ಹಾಡಿನ ಮೂಲಕ ಗೌರವ

    ಬೆಂಗಳೂರು: ಕೋವಿಡ್​ ಸಮಯದಲ್ಲಿ ರಾಜ್ಯದ ಜನತೆಗೆ ನೆರವಾಗುತ್ತಿರುವ ಕರೊನಾ ವಾರಿಯರ್ಸ್​ ಸೇವೆಯನ್ನು ಗುರುತಿಸುವುದರ ಜತೆಗೆ ಅವರಿಗೆ ಗೌರವ ತೋರುವ ಸಲುವಾಗಿ ಹಲವರು ಹಾಡುಗಳನ್ನು ಮಾಡಿದ್ದಾರೆ. ಯೋಗರಾಜ್​ ಭಟ್​, ಸ್ಟೀಫನ್ ಪ್ರಯೋಗ್​ ರಾಜ್​, ಪವನ್​ ಒಡೆಯರ್​ ಸೇರಿದಂತೆ ಹಾಡಿನ ಮೂಲಕ ಗೌರವ ಸಲ್ಲಿಸಿದ್ದಾರೆ. ಈಗ ಈ ಸಾಲಿಗೆ ಸುಶೀಲ್​ ಸಾಗರ್​ ಸಹ ಸೇರಿದ್ದಾರೆ.

    ಇದನ್ನೂ ಓದಿ: ಸೆಕ್ಸ್​ ಸೀನ್​ ಶೂಟಿಂಗೂ ಮುನ್ನ ರಾಧಿಕಾ ಆಪ್ಟೆ ಜತೆ ನಡೆದ ರಹಸ್ಯ ಮಾತುಕತೆ ಬಿಚ್ಚಿಟ್ಟ ನಟ!

    ಕೋವಿಡ್​ ಎರಡನೆಯ ಅಲೆಯಿಂದ ತತ್ತರಿಸಿರುವರ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಕರೊನಾ ವಾರಿಯರ್ಸ್​ಗಳ ಸೇವೆಯನ್ನು ಶ್ಲಾಘಿಸುವುದರ ಜತೆಗೆ, ಅವರಿಗೆ ಗೌರವ ತೋರುವ ಸಲುವಾಗಿ ‘ಭರವಸೆಯ ಒಂದು ಬೆಳಕು’ ಎಂಬ ಹಾಡೊಂದನ್ನು ಸಮರ್ಪಿಸಿದ್ದಾರೆ.

    ‘ಭರವಸೆಯ ಒಂದು ಬೆಳಕು’ ಹಾಡು ಈಗಾಗಲೇ ಮೇ 29ರಂದು ಯೂಟ್ಯೂಬ್​ನ ಸಿಟಿ ಸವಾರಿ ಚಾನಲ್​ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ವಸಿಷ್ಠ ಸಿಂಹ, ಅನುಪಮಾ ಗೌಡ, ಶೈನ್​ ಶೆಟ್ಟಿ, ರಘು ಗೌಡ, ಹಿತಾ ಚಂದ್ರಶೇಖರ್​, ಕಿರಣ್​ ಶ್ರೀನಿವಾಸ್​, ಚೈತ್ರಾ ವಾಸುದೇವನ್​ ಕಾಣಿಸಿಕೊಂಡಿದ್ದಾರೆ. ಇನ್ನು, ಈ ಹಾಡಿಗೆ ಎಸ್​. ರಂಜನಿ ಸಾಹಿತ್ಯ ಬರೆದರೆ, ಆಕಾಶ್​ ಪರ್ವ ಸಂಗೀತ ಸಂಯೋಜಿಸಿದ್ದಾರೆ. ಅಶ್ವಿನ್​ ಶರ್ಮ, ಐಶ್ವರ್ಯ ರಂಗರಾಜನ್​ ಮತ್ತು ಆಶಾ ಭಟ್​ ಈ ಹಾಡನ್ನು ಹಾಡಿದ್ದಾರೆ.

    ಇದನ್ನೂ ಓದಿ: ಇನ್ನು ಮುಂದೆ ಶಾಲೆಗೆ ಹೋಗಲ್ಲ ಎಂದು ಸೋನಾಕ್ಷಿ ಹಠ ಹಿಡಿದಿದ್ದು ಯಾಕೆ?

    ಈ ಹಾಡಿಗೆ ಈಗಾಗಲೇ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಹಾಡು ಕೇಳಿ ಹೊಸ ಚೈತನ್ಯ ಬಂದಂತಾಗಿದೆ ಎಂದು ಹಲವರು ಹೇಳಿಕೊಂಡಿದ್ದಾರೆ ಎಂದು ಈ ಹಾಡನ್ನು ರೂಪಿಸಿರುವ ಸುಶೀಲ್​ ಸಾಗರ್​ ಹೇಳುತ್ತಾರೆ.

    ಬಡತನದ ಪಾತ್ರಗಳನ್ನು ಕಾಜೋಲ್ ರಿಜೆಕ್ಟ್​ ಮಾಡೋದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts