More

    ಕೃಷಿ ಕಾಯ್ದೆ ವಿರೋಧದ ಬೆನ್ನಲ್ಲೇ ರೈತರ ಸಾಲ ಮನ್ನಾ! 16.43 ಲಕ್ಷ ರೈತರ ನಿಟ್ಟುಸಿರು

    ಚೆನ್ನೈ: ದೇಶಾದ್ಯಂತ ಕೃಷಿ ಕಾಯ್ದೆಗೆ ಭಾರಿ ಪ್ರಮಾಣದಲ್ಲಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಮಹತ್ತರ ಪ್ರಕಟಣೆಯೊಂದನ್ನು ಹೊರಡಿಸಿದೆ. ರಾಜ್ಯದ ರೈತರ ಸಾಲ ಮನ್ನಾ ಮಾಡಿ ಎಐಎಡಿಎಂಕೆ ಸರ್ಕಾರ ಆದೇಶ ಹೊರಡಿಸಿದೆ.

    ರಾಜ್ಯದ 16.43 ಲಕ್ಷ ರೈತರು ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ 12,110 ಕೋಟಿ ರೂಪಾಯಿ ಕೃಷಿ ಸಾಲ ಮನ್ನಾ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಾಜ್ಯ ವಿಧಾನಸಭೆಯಲ್ಲಿ ಶುಕ್ರವಾರಂದು ಈ ಘೋಷಣೆಯನ್ನು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಅವರು ಮಾಡಿದ್ದಾರೆ. ಈ ಯೋಜನೆ ಕೂಡಲೇ ಜಾರಿಗೆ ಬರಲಿದ್ದು, ಅಗತ್ಯವಾದ ಆರ್ಥಿಕ ಹಂಚಿಕೆಯನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದು ಅವರು ಹೇಳಿದರು.

    ಎಐಎಡಿಎಂಕೆ ಭರವಸೆಗಳನ್ನು ಈಡೇರಿಸುವ ಏಕೈಕ ಪಕ್ಷವಾಗಿದೆ ಮತ್ತು ಹೊಸ ಕಲ್ಯಾಣ ಕ್ರಮಗಳನ್ನು ಸಹ ಹೊಂದಿದೆ. ಡಿಎಂಕೆ ಪಕ್ಷವು ಎರಡು ಎಕರೆ ಜಮೀನಿಗೆ ಭರವಸೆ ನೀಡಿತ್ತಾದರೂ ಅದನ್ನು ಜಾರಿಗೆ ತರಲು ವಿಫಲವಾಗಿದೆ ಎಂದು ಅವರು ಪ್ರತಿಪಕ್ಷದ ಕಾಲೆಳೆದರು. (ಏಜೆನ್ಸೀಸ್)

    38ನೇ ವಯಸ್ಸಿನಲ್ಲಿ ಕಳೆದುಕೊಂಡ ಪರ್ಸ್​ 91ನೇ ವಯಸ್ಸಿಗೆ ಮರಳಿ ಸಿಕ್ಕಿತು!

    ಅರ್ಧ ಕೋಟಿ ಭಾರತೀಯರಿಗೆ ತಲುಪಿದ ಕರೊನಾ ಲಸಿಕೆ ; ಉತ್ತರಪ್ರದೇಶದಲ್ಲಿ ಅತಿಹೆಚ್ಚು ಫಲಾನುಭವಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts