More

    ಜಲ್ಲಿಕಟ್ಟು ವೇಳೆ ಭೀಕರ ದುರಂತ! ಮಗು ಸೇರಿ ಇಬ್ಬರ ದುರ್ಮರಣ, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಚೆನ್ನೈ: ತಮಿಳುನಾಡಿನ ಹೆಸರಾಂತ ಸ್ಪರ್ಧೆಯಾಗಿರುವ ಜಲ್ಲಿಕಟ್ಟು ಸ್ಪರ್ಧೆ ನಡೆಯುವ ಸಮಯದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಮನೆಯ ಗೋಡೆಯೊಂದು ಕುಸಿದಿದ್ದು ಮಗು ಸೇರಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. 20 ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿರುವುದಾಗಿ ವರದಿಯಾಗಿದೆ.

    ಇದನ್ನೂ ಓದಿ: ಇಬ್ಬರು ರೂಂ ಒಳಗೆ ಹೋದರೆ ಒಬ್ಬ ಕಾಂಗ್ರೆಸ್​ ಲೀಡರ್​ ಹುಟ್ತಾನೆ! ಕಾಂಗ್ರೆಸ್​ ಕಾಲೆಳೆದ ಪ್ರಹ್ಲಾದ್ ಜೋಶಿ

    ವ್ಯಾಪನಪಲ್ಲಿಯ ನೇರ್ಲಗಿರಿ ಗ್ರಾಮದಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆ ನೋಡಲೆಂದು ಐದು ಸಾವಿರಕ್ಕೂ ಅಧಿಕ ಮಂದಿ ಗ್ರಾಮಕ್ಕೆ ಬಂದಿದ್ದರು. ಪ್ರತಿ ವರ್ಷವೂ ಈ ಗ್ರಾಮದಲ್ಲಿ ಹೋರಿ ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು, ಈ ವರ್ಷವೂ ವಿಜೃಂಭಣೆಯಿಂದ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಜನರು ಗ್ರಾಮದ ಮನೆಗಳು ಹಾಗೂ ಕಟ್ಟಡಗಳ ಮೇಲೆ ನಿಂತು ಸ್ಪರ್ಧೆ ವೀಕ್ಷಿಸುತ್ತಿದ್ದರು. ಈ ವೇಳೆ ಹಾಲೋ ಬ್ಲಾಗ್ನಿಂದ ನಿರ್ಮಾಣ ಮಾಡಿದ್ದ ಟೆರೇಸ್​ನ ಗೋಡೆ ಕುಸಿದು ಬಿದ್ದಿದೆ. ಮನೆಯ ಮೇಲೆ ಹೆಚ್ಚು ಜನ ನಿಂತಿದ್ದರಿಂದ ಭಾರ ತಡೆಯದೆ ಗೋಡೆ ಕುಸಿದಿದೆ. ಇದರಿಂದಾಗಿ ಒಂದು ಮಗು ಸೇರಿ ಒಟ್ಟು ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯವಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ವ್ಯಾಪನಪ್ಪಲ್ಲಿ ಮತ್ತು ಕೃಷ್ಣಗಿರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇದನ್ನೂ ಓದಿ: ನಿನ್ನನ್ನೇ ಪ್ರೀತಿಸೋದು ಅಂದೋಳು ಈಗ ಬೇರೆ ಮದ್ವೆಯಾಗಹೊರಟಿದ್ದಾಳೆ- ಸಾಯೋಣ ಎನಿಸ್ತಿದೆ…

    ಗ್ರಾಮದಲ್ಲಿ ಅನಧಿಕೃತ ಗೂಳಿ ಕಾಳಗ ನಡೆಸಲಾಗುತ್ತಿತ್ತು. ಜಲ್ಲಿ ಕಟ್ಟು ಸ್ಪರ್ಧೆಗೆ ನಿಷೇಧವಿರುವ ಹಿನ್ನೆಲೆಯಲ್ಲಿ ಬೇರೆ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಬೇರೆ ಹೆಸರಿನಲ್ಲಿ ಪೊಲೀಸರಿಂದ ಅನುಮತಿ ಪಡೆಯಲಾಗಿತ್ತು. (ದಿಗ್ವಿಜಯ ನ್ಯೂಸ್​)

    ಮದ್ವೆಯಾಗದೇ ಪಾಪು ಕೊಟ್ಟ… ಹೆಂಡ್ತಿ ಜತೆ ಅತ್ತೆಯನ್ನೂ ಕೊಲೆ ಮಾಡ್ದ- ದೇವನಹಳ್ಳಿಯಲ್ಲಿ ಭೀಕರ ಘಟನೆ

    ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಕಾರು: ಓರ್ವ ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts