More

    ಚುನಾವಣೆಯ ಉಮೇದಿನಲ್ಲಿದ್ದ ಅಣ್ಣಾಮಲೈಗೆ ಶಾಕ್ ಕೊಟ್ಟ ಪಕ್ಷೇತರ ಅಭ್ಯರ್ಥಿಗಳು!

    ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗೆ ಆಯ್ಕೆ ಬಯಿಸಿ ಸ್ಪರ್ಧಿಸಿರುವ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಕೆ ಅಣ್ಣಾಮಲೈ ಅವರಿಗೆ ಸಂಕಷ್ಟ ಎದುರಾಗಿದೆ.

    ಹೌದು ಅಣ್ಣಾಮಲೈ ಅವರು ಕರೂರು ಜಿಲ್ಲೆಯ ಅರವಕುರುಚಿ ವಿಧಾನಸಭೆ ಚುನಾವಣೆಗೆ ನಾಮಪತ್ರವನ್ನು ನಿನ್ನೆಯಷ್ಟೇ ಸಲ್ಲಿಸಿದ್ದರು. ಆದರೆ, ಇದೀಗ ಚುನಾವಣಾ ಆಯೋಗ ಅವರ ನಾಮಪತ್ರವನ್ನು ತಡೆಹಿಡಿದು ಶಾಕ್ ನೀಡಿದೆ.

    ಡಿಎಂಕೆ ಭದ್ರಕೋಟೆಯಾಗಿರುವ ಅರವಕುರುಚಿ ಕ್ಷೇತ್ರಕ್ಕೆ ಡಿಎಂಕೆಯಿಂದ ಸ್ಪರ್ಧಿಸಿರುವ ಅಭ್ಯರ್ಥಿ ಹಾಗೂ ಕೆಲ ಪಕ್ಷೇತರ ಅಭ್ಯರ್ಥಿಗಳು, ಅಣ್ಣಾಮಲೈ ನಾಮಪತ್ರದಲ್ಲಿ ತಮಗೆ ಸಂಬಂಧಿಸಿರುವ ಅಪರಾಧ ಪ್ರಕರಣಗಳನ್ನು ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ್ದಾರೆ. ಅವರ ಮೇಲೆ 10 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ವಿವಿದೆಡೆ ದಾಖಲಾಗಿವೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

    ಇದನ್ನೂ ಓದಿ: ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಲಿಸ್ಟ್ ನಾಳೆ ಸಂಜೆ ರೆಡಿ ಎಂದ ಸಿಎಂ ಯಡಿಯೂರಪ್ಪ

    ದೂರನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ, ಸದ್ಯಕ್ಕೆ ಅಣ್ಣಾಮಲೈ ಅವರ ನಾಮಪತ್ರವನ್ನು ತಡೆಹಿಡಿದಿದ್ದು, ಸ್ಪಷ್ಟನೆ ಕೇಳಿ ನೋಟಿಸ್ ನೀಡಿದೆ. ಆದರೆ, ಈ ಬಗ್ಗೆ ಅಣ್ಣಾಮಲೈ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಮೂಲತಃ ಕರೂರು ಜಿಲ್ಲೆಯವರಾದ ಅಣ್ಣಾಮಲೈ ಅವರು ತಮ್ಮದೇ ಜಿಲ್ಲೆಯ ವಿಧಾನಸಭಾ ಕ್ಷೇತ್ರ ಅರವಕುರುಚಿಯಿಂದ ಚುನಾವಣಾ ಕಣಕ್ಕಳಿದಿದ್ದು, ಬಿಜೆಪಿ ಮುಖಂಡರು ಅವರ ಮೇಲೆ ವಿಶ್ವಾಸವಿಟ್ಟಿದ್ದಾರೆ. ಅರವಕುರುಚಿ ಕ್ಷೇತ್ರ ದೇಶದಲ್ಲೇ ಉತ್ಕೃಷ್ಟ ನುಗ್ಗೆ ಬೆಳೆ ಬೆಳೆಯಲು ಖ್ಯಾತಿ ಹೊಂದಿದೆ. (ಏಜೇನ್ಸಿಸ್).

    ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನಿಗೆ ಗುಂಡಿಕ್ಕಿ ಕೊಲೆ!

    ಚೀನಾ ಲಸಿಕೆ ತೆಗೆದುಕೊಂಡ ಮಾರನೇ ದಿನವೇ ಕೋವಿಡ್-19 ಸೋಂಕಿಗೆ ತುತ್ತಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts