More

    VIDEO| ಎಣ್ಣೆಗಾಗಿ ಕಳ್ಳದಾರಿ ಹಿಡಿದ ತಮಿಳುನಾಡು ಜನರಿಂದ ಗಡಿಭಾಗದಲ್ಲಿ ಆತಂಕ!

    ಬೆಂಗಳೂರು: ತಮಿಳುನಾಡಿನಲ್ಲಿ ಕರೊನಾ ವೈರಸ್​ ಪ್ರಕರಣಗಳು ಹೆಚ್ಚಾಗಿದ್ದು, ಹೊಸೂರು ಗಡಿಭಾಗದ ತಮಿಳಿಗರಿಂದ ಕನ್ನಡಿಗರಲ್ಲಿ ಆತಂಕ ಮನೆ ಮಾಡುವಂತಾಗಿದೆ.

    ಇದನ್ನೂ ಓದಿ: ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಿಪಿಇ ಗೌನ್ ತೊಟ್ಟಿದ್ದ ನರ್ಸ್​ಗೆ ಒಲಿಯಿತು ಬಂಪರ್​ ಆಫರ್​!

    ಎಣ್ಣೆ ಖರೀದಿಸಲು ತಮಿಳುನಾಡಿನ ಹೊಸೂರು ಭಾಗದ ಜನರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್​ ತಾಲೂಕಿನ ಬಳ್ಳೂರು ಗ್ರಾಮದ ಮಾರ್ಗವಾಗಿ ಯಾವುದೇ ಮಾಸ್ಕ್​ ಅಥವಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಬರುತ್ತಿರುವುದು ಹೊಸ ತಲೆನೋವಿಗೆ ಕಾರಣವಾಗಿದೆ.

    ಬಳ್ಳೂರು ಗ್ರಾಮದ ಎನ್.ಆರ್.ಐ ಬಡಾವಣೆಯ ತೋಪುಗಳ ಮೂಲಕ ತಮಿಳಿಗರು ತಮ್ಮ ವಾಹನಗಳಲ್ಲಿ ಬರುತ್ತಿದ್ದಾರೆ. ಇಲ್ಲಿ ಅಂತಾರಾಜ್ಯ ಸಂಪರ್ಕಕ್ಕೆ ಯಾವುದೇ ಭಯ ಇಲ್ಲದಂತಾಗಿದೆ. ಖರೀದಿಸಿ ಎಣ್ಣೆಯನ್ನು ರಾಜಾರೋಷವಾಗಿ ಕೈಯಲ್ಲಿ ಹಿಡಿದು ನೂರಾರು ವಾಹನಗಳ ಮೂಲಕ ಹೋಗುತ್ತಿದ್ದಾರೆ. ಗಂಟೆಗೆ ಬರೋಬ್ಬರಿ 100ಕ್ಕೂ ಹೆಚ್ಚು ವಾಹನಗಳು ಸಂಚಾರ ಮಾಡುತ್ತವೆ.

    ಇದನ್ನೂ ಓದಿ: ಕುಟುಂಬದಿಂದ ದೂರಾದ ಕಿನ್ನರಿ!

    ಇನ್ನು ಸ್ಥಳದಲ್ಲಿ ಪೊಲೀಸರಾಗಲಿ ಅಥವಾ ಅಧಿಕಾರಿಗಳಾಗಲಿ ಇಲ್ಲ. ಅತ್ತಿಬೆಲೆ ಮೂಲಕ ಬಂದರೆ ವಾಹನಗಳ ತಪಾಸಣೆ ಆಗುತ್ತದೆ. ಹೀಗಾಗಿ ಎಲ್ಲಾ ವಾಹನಗಳು ಹೊಸೂರು ಭಾಗದಿಂದ ಬಳ್ಳೂರಿನತ್ತ ಬರುತ್ತಿವೆ. ಇದರಿಂದಾಗಿ ಸ್ಥಳೀಯ ಜನರಲ್ಲಿ ಆತಂಕ ಶುರುವಾಗಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್​)

    ಎಣ್ಣೆಗಾಗಿ ಕಳ್ಳದಾರಿ ಹಿಡಿದ ತಮಿಳುನಾಡು ಜನರಿಂದ ಗಡಿಭಾಗದಲ್ಲಿ ಆತಂಕ!

    ಎಣ್ಣೆ ಖರೀದಿಸಲು ತಮಿಳುನಾಡಿನ ಹೊಸೂರು ಭಾಗದ ಜನರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್​ ತಾಲೂಕಿನ ಬಳ್ಳೂರು ಗ್ರಾಮದ ಮಾರ್ಗವಾಗಿ ಯಾವುದೇ ಮಾಸ್ಕ್​ ಅಥವಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಬರುತ್ತಿರುವುದು ಹೊಸ ತಲೆನೋವಿಗೆ ಕಾರಣವಾಗಿದೆ.#TamilNadu #Bengaluru #Balluru #Hosuru #Coronavirus #Pandemic #Alcohol

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಮೇ 21, 2020

    ಅತ್ತಿಗೆ ಜತೆ ಸಂಸಾರ ನಡೆಸುತ್ತಿದ್ದವ ಅಣ್ಣನ‌ ಮಗಳ ಜತೆ ಎಸ್ಕೇಪ್…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts