More

    ಕಿರಾಣಿ ಅಂಗಡಿ ಆರಂಭಿಸಿದ ನಿರ್ದೇಶಕ ಆನಂದ್

    ಕಳೆದ ಮೂರು ತಿಂಗಳಿನಿಂದ ಭಾರತೀಯ ಚಿತ್ರರಂಗ ಸುಸ್ತಾಗಿ ಕುಳಿತಿದೆ. ಲಾಕ್​ಡೌನ್​ನಿಂದ ಕೆಲಸಗಳೆಲ್ಲಾ ನಿಂತು ಹೋಗಿದ್ದವು. ಈಗ ಕೆಲವು ಕಡೆ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆಯಾದರೂ, ಕರೊನಾ ಭಯದಿಂದ ಚಿತ್ರೀಕರಣದ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಹುತೇಕ ಚಿತ್ರರಂಗಗಳು ಬಂದ ಹಾಗಿವೆ.

    ಇದನ್ನೂ ಓದಿ: ಸದ್ದಿಲ್ಲದೆ ಸಪ್ತಪದಿ ತುಳಿದ್ರಾ ‘ಐರಾವತ’ ಬೆಡಗಿ ಊರ್ವಶಿ ರೌಟೇಲಾ!?

    ಇನ್ನು ಚಿತ್ರರಂಗವನ್ನೇ ನಂಬಿಕೊಂಡಿರುವ ಹಲವು ಕಲಾವಿದರು ಮತ್ತು ತಂತ್ರಜ್ಱರು ಇದರಿಂದಾಗಿ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಕಳೆದ ಮೂರು ತಿಂಗಳನಿಂದ ಕೆಲಸವಿಲ್ಲದ ತಮಿಳು ನಿರ್ದೇಶಕ ಆನಂದ್​ ಎನ್ನುವವರು, ಒಂದು ಕಿರಣಾ ಅಂಗಡಿ ತೆರೆದಿದ್ದಾರೆ. ಚಿತ್ರೀಕರಣ ಚಟುಟಿಕೆಗಳು ಪ್ರಾರಂಭವಾಗುವವರೆಗೂ, ಕಿರಾಣಿ ಅಂಗಡಿಯ ಮೂಲಕ ಒಂದಿಷ್ಟು ಸಂಪಾದನೆ ಮಾಡುವ ಯೋಚನೆಯಲ್ಲಿದ್ದಾರೆ.

    ಈ ಆನಂದ್​ ದೊಡ್ಡ ಹೆಸರೇನಲ್ಲ. ತಮಿಳು ಚಿತ್ರರಂಗದಲ್ಲಿ ಕಳೆದ ಹತ್ತು ವರ್ಷಗಳಿಂದ ಇದ್ದಾರೆ. ಒಂದೆರೆಡು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ‘ಒರು ಮಲೈ ನಾಂಗು ಸಾರಳ್​’, ‘ಮೌನ ಮಳೈ’ ಎಂಬ ಚಿತ್ರ ಮುಗಿಸಿದ್ದಾರೆ. ಇನ್ನು ‘ತುನಿಂತು ಸೈ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದ ಅವರು, ಕೊನೆಯ ಹಂತದ ಕೆಲಸಗಳಲ್ಲಿ ಭಾಗಿಯಾಗಿದ್ದರು. ಅಷ್ಟರಲ್ಲಿ ಲಾಕ್​ಡೌನ್​ ಹೇರಿದ್ದರಿಂದ ಕೆಲಸಗಳೆಲ್ಲಾ ಬಂದ್​ ಆದವು.

    ಲಾಕ್​ಡೌನ್​ ಸಂದರ್ಭದಲ್ಲಿ ಅವರು ಮನೆಯಲ್ಲೇ ಕುಳಿತಿದ್ದರಂತೆ. ಹೊಟ್ಟೆಪಾಡಿಗಾಗಿ ಏನು ಮಾಡಬೇಕು ಎಂದು ತೋಚದೆ ಕಂಗಾಲಾಗಿದ್ದ ಅವರಿಗೆ, ಮೆಡಿಕಲ್​ ಸ್ಟೋರ್​ಗಳು ಮತ್ತು ಕಿರಾಣಿ ಅಂಗಡಿಗಳು ಮಾತ್ರ ತೆರೆದಿರುವುದು ಗೊತ್ತಾಗಿದೆ. ಸುಮ್ಮನೆ ಕೆಲಸವಿಲ್ಲದೆ ಕುಳಿತುಕೊಳ್ಳುವ ಬದಲು, ಯಾಕೆ ಒಂದು ಕಿರಾಣಿ ಅಂಗಡಿ ಪ್ರಾರಂಭಿಸಬಾರದು ಎಂದು ಇದ್ದಬದ್ದ ಹಣವನ್ನೆಲ್ಲಾ ಒಟ್ಟುಗೂಡಿಸಿ, ಚೆನ್ನೈನ ಮೌಳಿವಕ್ಕಂ ಏರಿಯಾದಲ್ಲೊಂದು ಕಿರಾಣಿ ಅಂಗಡಿಯನ್ನು ಅವರು ಪ್ರಾರಂಭಿಸಿದ್ದಾರೆ. ಅದರ ಮೂಲಕ ಅಕ್ಕಿ, ಬೇಳೆ, ಎಣ್ಣೆಗಳನ್ನು ಮಾರುತ್ತಿದ್ದಾರೆ.

    ಇದನ್ನೂ ಓದಿ: ನೆಪೋಮೀಟರ್​ ಮಾಡಿದ್ದು ಹಣ ಮಾಡೋ ಉದ್ದೇಶದಿಂದಲ್ಲ …

    ಈ ಕುರಿತು ಮಾತನಾಡಿರುವ ಅವರು, ‘ಸದ್ಯದ ಮಟ್ಟಿಗೆ ಚಿತ್ರರಂಗ ಪುನಃ ಪ್ರಾರಂಭವಾಗುತ್ತಿದೆ ಎಂದನಿಸುವುದಿಲ್ಲ. ಏಕೆಂದರೆ, ಜನರಲ್ಲಿ ಇನ್ನೂ ಕರೊನಾ ಬಗ್ಗೆ ಭಯ ಇದೆ. ಆ ಭಯ ಮೊದಲು ಕಡಿಮೆಯಾಗಬೇಕು. ಆ ನಂತರವಷ್ಟೇ ಚಿತ್ರರಂಗದ ಚಟುವಟಿಕೆಗಳು ಪ್ರಾರಂಭವಾಗುವುದಕ್ಕೆ ಸಾಧ್ಯ. ಅಲ್ಲಿಯವರೆಗೂ ಕೂತು ಏನು ಮಾಡುವುದು? ಹಾಗಾಗಿ ಒಂದು ಕಿರಾಣಿ ಅಂಗಡಿ ಪ್ರಾರಂಭಿಸಿದ್ದೇನೆ. ಚಿತ್ರೀಕರಣ ಶುರುವಾಗುವವರೆಗೂ ಅಲ್ಲಿರುತ್ತೇನೆ. ಆ ನಂತರ ಮುಂದೆ ನೋಡೋಣ’ ಎಂದು ಅವರು ಹೇಳಿದ್ದಾರೆ.

    ನಾನು ನಿರ್ದೇಶಕ ಅಂತ ಅವರಿಗೆ ಪ್ರೂವ್​ ಮಾಡಬೇಕಿಲ್ಲ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts