More

    ಕೈಗೆಟುಕದ ಟೊಮ್ಯಾಟೋಗೆ ಹುಣಸೆ ಪರ್ಯಾಯ: ಆರೋಗ್ಯ ವೃದ್ಧಿ, ತ್ವಚೆಯ ಸೌಂದರ್ಯಕ್ಕೂ ಹುಣಸೆ ಸೂಕ್ತ

    ಬೆಂಗಳೂರು: ಪ್ರಸ್ತುತ ಟೊಮ್ಯಾಟೋ ಗ್ರಾಹಕರ ಪಾಲಿಗೆ ಕೈಗೆಟುಕದ ತರಕಾರಿ ಎನಿಸಿದ್ದು, ಅದರ ಬೆಲೆ ಕೆಜಿಗೆ 100 ರೂ. ದಾಟಿದೆ. ಇದರಿಂದ ಗೃಹಿಣಿಯರು ಟೊಮ್ಯಾಟೋ ಇಲ್ಲದೇ ಅಡುಗೆ ಮಾಡುವುದು ಹೇಗೆ ಎಂಬ ಚಿಂತೆಗೆ ಒಳಗಾಗಿದ್ದಾರೆ. ಆದರೆ, ಹುಣಸೆಹಣ್ಣು ಆಹಾರದ ರುಚಿಯನ್ನು ಮತ್ತು ಮುಖದ ಕಾಂತಿಯನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿ ಎಂದು ಸಂಶೋಧನೆಯಿಂದ ಸಾಬೀತು ಆಗಿದೆ.

    ಟೊಮ್ಯಾಟೋ ಬೆಲೆ ಗಗನಕ್ಕೇರಿರುವುದರಿಂದ ಕೈಗೆಟುಕುವ ದರದಲ್ಲಿ ದೊರೆಯುವ ಹುಣಸೆ ಹಣ್ಣನ್ನು ಗ್ರಾಹಕರು ಸಾಂಬಾರು, ರಸಂ, ಗೊಜ್ಜು ಮತ್ತು ಸಂಸ್ಕರಿಸಿದ ಪೇಸ್ಟ್ (ತಿರುಳು) ಹಾಗೂ ಪೌಡರ್‌ಗಳನ್ನು ದಿನನಿತ್ಯದ ಅಡುಗೆಯಲ್ಲಿ ಬಳಸುವುದರಿಂದ ರುಚಿಯನ್ನು ಹೆಚ್ಚಿಸುವುದರ ಜತೆಗೆ ಬೆಲೆ ಏರಿಕೆಯಿಂದ ಸ್ವಲ್ಪಮಟ್ಟಿಗೆ ಹಣವನ್ನು ಉಳಿತಾಯ ಮಾಡಬಹುದಾಗಿದೆ.

    ಇದನ್ನೂ ಓದಿ: ಯಥಾಸ್ಥಿತಿ ಕಾಪಾಡಿ, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ: ಮದ್ಯಪಾನಪ್ರಿಯರ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ

    100 ಗ್ರಾಂ ಟೊಮ್ಯಾಟೋ ಹಣ್ಣಿನಲ್ಲಿ ಪ್ರೊಟೀನ್ 0.88 ಗ್ರಾಂ, ಶರ್ಕರಪಿಷ್ಠ 3.89 ಗ್ರಾಂ, ನಾರಿನಾಂಶ 1.2 ಗ್ರಾಂ, ಕ್ಯಾಲ್ಸಿಯಂ-10 ಮಿ.ಗ್ರಾಂ, ಪೊಟ್ಯಾಷಿಯಂ-237ಮಿ.ಗ್ರಾಂ ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ. ಅತಿಯಾದ ಟೊಮ್ಯಾಟೋ ಬಳಕೆ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ. ಟೊಮ್ಯಾಟೋದಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇವುಗಳನ್ನು ಸುಲಭವಾಗಿ ದೇಹದಿಂದ ಹೊರತೆಗೆಯಲಾಗುವುದಿಲ್ಲ. ಈ ಅಂಶಗಳು ಸಂಗ್ರಹಗೊಳ್ಳುವುದರಿಂದ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಉಂಟುಮಾಡುತ್ತದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

    ಇದನ್ನೂ ಓದಿ: ಹಿಂದೂಗಳು ಪೂಜೆ ಮಾಡಲು ಪೊಲೀಸ್​-ಬಿಬಿಎಂಪಿ ಅನುಮತಿ ಬೇಕೇ?: ವಿವಾದ ಸೃಷ್ಟಿಸಿದ್ದ ಪೊಲೀಸರ ನೋಟಿಸ್​​​ಗೆ ಯತ್ನಾಳ್​ ಪ್ರಶ್ನೆ

    ಹುಣಸೆ ಆರೋಗ್ಯಕ್ಕೆ ಸಹಕಾರಿ

    ಟೊಮ್ಯಾಟೋಗೆ ಹೋಲಿಸಿದರೆ ಹುಣಸೆ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಸಿಹಿ ಹುಳಿ ಮಿಶ್ರಿತ 100 ಗ್ರಾಂ. ಹುಣಸೆಯಲ್ಲಿರುವ ಪೌಷ್ಟಿಕಾಂಶಗಳೆಂದರೆ ಶರ್ಕರಪಿಷ್ಟ-62.5 ಮಿ.ಗ್ರಾಂ, ಪ್ರೊಟೀನ್- 2.8 ಗ್ರಾಂ, ನಾರಿನಾಂಶ-5.1 ಗ್ರಾಂ, ಸೋಡಿಯಂ-28 ಮಿ.ಗ್ರಾಂ, ಪೊಟ್ಯಾಷಿಯಂ-628 ಮಿ.ಗ್ರಾಂ, ಜಿವಸತ್ವ ಸಿ -4.2 ಮಿ.ಗ್ರಾಂ. ಇದರಲ್ಲಿರುವ ಟಾರ್ಟಾರಿಕ್ ಆಮ್ಲದಿಂದಾಗಿ ಹೆಚ್ಚಿನ ರುಚಿ ಒದಗಿಸುತ್ತದೆ.
    ಹುಣಸೆ ಹಣ್ಣಿನ ರಸ ಉತ್ತಮ ಜೀರ್ಣಕಾರಿ ಮತ್ತು ಉಪ್ಪಿನ ಜತೆ ಸೇವಿಸಿದಾಗ ಗಂಟಲು ನೋವು ನಿವಾರಣೆಯಾಗುತ್ತದೆ. ಶೀತಕ್ಕೆ ಹುಣಸೆ ಹಣ್ಣು ರಾಮಬಾಣ ಆಗಿದ್ದು, ಹುಣಸೆಹಣ್ಣಿನ ರಸಕ್ಕೆ ಸ್ವಲ್ಪ ಮೆಣಸು, ಉಪ್ಪು ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ ಸೇವಿಸಬೇಕು. ಹುಣಸೆ ಹಣ್ಣಿನಲ್ಲಿರುವ ಪೊಟ್ಯಾಷಿಯಂ ದೇಹದ ಜೀವಕೋಶ ದ್ರವಗಳ ಜೊತೆಗೂಡಿ ಹೃದಯ ಬಡಿತ, ರಕ್ತದೊತ್ತಡವನ್ನು ನಿಯಂತ್ರಿಸುವ ಜೊತೆಗೆ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವಲ್ಲಿ ಸಹಕಾರಿಯಾಗಿದೆ.

    ಕೈಗೆಟುಕದ ಟೊಮ್ಯಾಟೋಗೆ ಹುಣಸೆ ಪರ್ಯಾಯ: ಆರೋಗ್ಯ ವೃದ್ಧಿ, ತ್ವಚೆಯ ಸೌಂದರ್ಯಕ್ಕೂ ಹುಣಸೆ ಸೂಕ್ತನಮ್ಮ ಪೂರ್ವಜರು ಸ್ಥಳೀಯವಾಗಿ ಲಭ್ಯವಿರುವ ಹುಣಸೆ ಹಣ್ಣಿನ ಮಹತ್ವವನ್ನು ಅರಿತು ದಿನನಿತ್ಯದ ಅಡುಗೆಯಲ್ಲಿ ಬಳಸಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಸದ್ಯ ಬೆಲೆ ಹೆಚ್ಚಳದ ಸಮಯದಲ್ಲಿ ಗೃಹಿಣಿಯರು ಟೊಮ್ಯಾಟೋ ಬದಲು ಹುಣಸೆ ಹಣ್ಣನ್ನು ಬಳಸಿ ಆರೋಗ್ಯ ವೃದ್ಧಿ ಹಾಗೂ ಅಡುಗೆ ರುಚಿ ಹೆಚ್ಚಿಸಿಕೊಳ್ಳಬಹುದು.
    | ಡಾ.ಬಿ.ಕಲ್ಪನಾ, ಪ್ರಾಧ್ಯಾಪಕರು, ಬೆಂಗಳೂರು ಕೃಷಿ ವಿವಿ

    ತ್ವಚೆಯ ಸೌಂದರ್ಯ ಹುಣಸೆ ಬಳಸಿ

    ಹುಣಸೆ ಹಣ್ಣಿನಲ್ಲಿರುವ ಅಲ್ಫಾ-ಅಮೈಲೇಸ್ ಇನ್‌ಹಿಬಿಟರ್ ದೇಹದಲ್ಲಿರುವ ಸಕ್ಕರೆ ಪ್ರಮಾಣವನ್ನು ಹಿಡಿತದಲ್ಲಿರುವಂತೆ ಮಾಡುವುದರಿಂದ ಮಧುಮೇಹಿಗಳಿಗೂ ಸಹ ಉಪಯೋಗಕಾರಿ. ಜೀವಸತ್ವ ಸಿ ಹೇರಳ ವಾಗಿರುವುದರಿಂದ ರೋಗ ನಿರೋಧಕ ಶಕ್ತಿಯ ಗುಣವನ್ನು ಹೊಂದಿದ್ದು, ಜತೆಗೆ ತ್ವಚೆಯ ಸೌಂದರ್ಯವನ್ನು ಸಹ ಇಮ್ಮಡಿಸುತ್ತದೆ.

    ಒಂದೇ ಕುಟುಂಬದ ಆರು ಮಂದಿ ಸಾವು; ತಿರುಪತಿ ದೇವಸ್ಥಾನದಿಂದ ಮರಳುವಾಗ ಅಪಘಾತ!

    ಒಂದು ವರ್ಷದ ಅಂತರ.. ಅದೇ ಜಾಗ.. ಒಂದೇ ಥರದಲ್ಲಿ ಸಂಬಂಧಿಕರಿಬ್ಬರ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts