More

    ತಲ್ವಾರ್ ಕಾರ್ಡ್‌ಬೋರ್ಡ್‌ನದ್ದು! ಸಚಿವರ ಅಚ್ಚರಿ ಹೇಳಿಕೆ

    ಶಿವಮೊಗ್ಗ: ನಗರದ ವಿವಿಧೆಡೆ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಅಲಂಕಾರಕ್ಕಾಗಿ ಕಾರ್ಡ್‌ಬೋರ್ಡ್‌ನಿಂದ ಮಾಡಿದ ತಲ್ವಾರ್‌ಗಳನ್ನು ಇರಿಸಲಾಗಿತ್ತು. ಹಿಂದುಗಳು ಕೆಲವು ಸಂದರ್ಭದಲ್ಲಿ ತ್ರಿಶೂಲವನ್ನು ಅಲಂಕಾರಕ್ಕೆ ಬಳಸುವುದಿಲ್ಲವೇ? ಎಂದು ಪ್ರಶ್ನಿಸುವ ಮೂಲಕ ಸಚಿವ ಮಧು ಬಂಗಾರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮುಸ್ಲಿಂ ಸಮಾಜದವರು ಅಲಂಕಾರ ಮಾಡುವ ಸಂದರ್ಭದಲ್ಲೇ ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದರು. ಬಳಿಕ ಸರಿಪಡಿಸುತ್ತೇವೆ ಎಂದವರು ಅದನ್ನು ಪಾಲಿಸಿಲ್ಲ. ಇದಕ್ಕಾಗಿ ಸಮಸ್ಯೆ ಆಗಿರಬಹುದು. ಸಂತಸದಲ್ಲಿ ಗಣೇಶ ಮೂರ್ತಿ ಮೆರವಣಿಗೆ ನಡೆದಿತ್ತು. ಆದರೆ ಈದ್ ಮೆರವಣಿಗೆಯಲ್ಲಿ ಮಾತ್ರ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಹೇಳಿದರು.
    ಪಕ್ಷಾತೀತ ಸಹಾಯ: ರಾಗಿಗುಡ್ಡ ಘಟನೆಯಲ್ಲಿ ಅನೇಕ ಮನೆಗಳಿಗೆ ಹಾನಿ ಉಂಟಾಗಿದೆ. ನಾನು ಕೆಲವು ಮನೆಗಳಿಗೆ ಮಾತ್ರ ಭೇಟಿ ನೀಡಿ ಅವರ ಸಂಕಷ್ಟ ಆಲಿಸಿದ್ದೇನೆ. ಎಲ್ಲ ಮನೆಗಳಿಗೂ ಹೋಗಿ ಅವರನ್ನು ಮಾತನಾಡಿಸುವುದು ನಿಷೇಧಾಜ್ಞೆ ಕಾರಣದಿಂದ ಸಾಧ್ಯವಾಗಿಲ್ಲ. ರಾಗಿಗುಡ್ಡದಲ್ಲಿ ಎಲ್ಲರೂ ಶ್ರಮಜೀವಿಗಳು. ನಿತ್ಯ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ. ಇಂಥವರ ಮನೆಗಳಿಗೆ ಹಾನಿಯಾಗಿರುವುದರಿಂದ ಅವರಿಗೆ ಪರಿಹಾರ ನೀಡಲೇಬೇಕು. ಆದರೆ ಎಷ್ಟು? ಏನು? ಎಂಬ ಬಗ್ಗೆ ಚಿಂತನೆ ನಡೆದಿಲ್ಲ. ಆದರೆ ಪಕ್ಷಾತೀತವಾಗಿ ಪರಿಹಾರ ನೀಡಲಾಗುವುದು ಎಂದು ಮಧು ಬಂಗಾರಪ್ಪ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts