More

    ಜನಸಂಖ್ಯೆ ಹೆಚ್ಚಳದಿಂದ ನಿರುದ್ಯೋಗ ಸಮಸ್ಯೆ

    ತಾಳಿಕೋಟೆ: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ, ಜಿಲ್ಲಾ ಹಾಗೂ ತಾಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮುದ್ದೇಬಿಹಾಳದ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ತಾಲೂಕು ಮಟ್ಟದ ವಿಶ್ವ ಜನಸಂಖ್ಯೆ ದಿನವನ್ನು ಗುರುವಾರ ಆಚರಿಸಲಾಯಿತು.
    ಸರ್ವಜ್ಞ ವಿದ್ಯಾಪೀಠದ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಜನಸಂಖ್ಯೆ ಹೆಚ್ಚಿದಂತೆ ಆರ್ಥಿಕ ಸಂಕಷ್ಟ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗನಿದ್ದರೆ ಸಾಕು. ಚಿಕ್ಕ ಸಂಸಾರ ಸುಖಿ ಸಂಸಾರ ಎಂದರು.
    ತಾಲೂಕು ಆರೋಗ್ಯ ಅಧಿಕಾರಿ ಡಾ. ಸತೀಶ ತಿವಾರಿ ಮಾತನಾಡಿದರು. ಶಿಕ್ಷಕ ರಾಜು ಜವಳಗೇರಿ ಉಪನ್ಯಾಸ ನೀಡಿದರು.
    ಶಾಲೆ ಮುಖ್ಯಗುರು ಸಂತೋಷ ಪವಾರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯಾ ತೇರದಾಳ ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದರು.
    ವಿದ್ಯಾರ್ಥಿಗಳಿಗೆ ‘ಆವಿಷ್ಮಾನ ಭಾರತ’ ವಿಷಯದ ಕುರಿತು ಮಕ್ಕಳಿಗೆ ಪ್ರಂಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪಧೆಯಲ್ಲಿ ವಿಜೇತರಿಗೆ ಇಲಾಖೆಯಿಂದ ನಗದು ಬಹುಮಾನ ವಿತರಿಸಲಾಯಿತು.
    ನೂರಜಾನ್ ಬೋರಗಿ, ಯಾಜ್ ಅತ್ತಾರ ಹಾಗೂ ತಾಳಿಕೋಟೆ ಎಲ್ಲ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
    ಆರೋಗ್ಯ ಸಹಾಯಕಿ ಮಹಾದೇವಿ ಟಕ್ಕಳಕಿ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts