More

    ಬೇಡಿಕೆ ಈಡೇರಿಕೆಗೆ ಗ್ರಾಪಂ ನೌಕರರ ಪ್ರತಿಭಟನೆ

    ತಾಳಿಕೋಟೆ: ಸರ್ಕಾರ ಆದೇಶ ಹೊರಡಿಸಿ ಹಲವು ತಿಂಗಳು ಗತಿಸಿದರೂ ಗ್ರಾಪಂಗಳಲ್ಲಿ ಆದೇಶಗಳು ಜಾರಿಯಾಗುತ್ತಿಲ್ಲ. ಕೂಡಲೇ ಗ್ರಾಪಂ ಸಿಬ್ಬಂದಿ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿ ರಾಜ್ಯ ಗ್ರಾಪಂ ನೌಕರರ ಸಂಘದ ಪದಾಧಿಕಾರಿಗಳು ಸೋಮವಾರ ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿ ತಾಪಂ ಇಒ ಶಶಿಕಾಂತ ಶಿವಪುರೆ ಅವರಿಗೆ ಮನವಿ ಸಲ್ಲಿಸಿದರು.
    14 ನೇ ಹಣಕಾಸು ಆಯೋಗದ ಹಣದಲ್ಲಿ ಸರ್ಕಾರಿ ಆದೇಶದಂತೆ ಸಿಬ್ಬಂದಿಗೆ ವೇತನ ಕೊಡುವಂತಾಗಬೇಕು. ಸರ್ಕಾರದ ಆದೇಶದಂತೆ ತೆರಿಗೆ ವಸೂಲಾತಿಯ ಶೇ.40ರಷ್ಟು ಹಣದಲ್ಲಿ ಬಾಕಿ ಉಳಿದ ವೇತನ ಪಾವತಿಸುವಂತಾಗಬೇಕು ಹಾಗೂ ನಿವೃತ್ತರಾದವರಿಗೆ ಗ್ರಾೃಚುಟಿ ಕೊಡಬೇಕು. ಇಎ್ಎಂಎಸ್ ಗೆ ಬಾಕಿ ಉಳಿದ ಸಿಬ್ಬಂದಿಯನ್ನು ಸರ್ಕಾರದ ಆದೇಶದಂತೆ ಸೇರ್ಪಡೆ ಮಾಡುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
    ಸಂಘದ ಸಂಚಾಲಕ ಎ.ಎಸ್. ಬಾಗೇವಾಡಿ, ಕಾರ್ಯದರ್ಶಿ ಎಂ.ಎಚ್. ಚವಾಣ್, ಶಾಂತು ಕಟ್ಟಿಮನಿ, ಬಸವರಾಜ ಮಸರಕಲ್ಲ, ಮಹಾಂತೇಶ ಬಿರಾದಾರ, ಎಸ್.ಎಂ. ಬಿರಾದಾರ, ಶರಣು ಕುಂಬಾರ, ತಿಪ್ಪಣ್ಣ ಹೊಸಮನಿ, ಪರಶುರಾಮ ಕೊಳೂರ, ಬಸವರಾಜ ಹೆಳವರ, ಜಿ.ಎಸ್.ಬಿರಾದಾರ, ಒಮ್ಮಾಸಾ ಮಕಾಂದಾರ್, ಕಾಶಿನಾಥ ಹಳಿಮನಿ, ಕಾಶಿರಾಯ ಕೊಡಗಾನೂರ, ಕೆ.ಎಚ್ .ಮಡಿವಾಳರ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts