More

    ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿಗೆ ಒತ್ತು

    ತಾಳಿಕೋಟೆ: ಮುದ್ದೇಬಿಹಾಳ ಮತಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿಯ 98 ಹಳ್ಳಿಗಳ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ಮಾಡಿಸಿದ್ದೇನೆ. ಅದಕ್ಕೆ 180 ಕೋಟಿ ರೂ. ಹಣ ಬಿಡುಗಡೆಯಾಗಿ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ ಶಾಸಕ ಎ.ಎಸ್. ಪಾಟೀಲ(ನಡಹಳ್ಳಿ) ಹೇಳಿದರು.

    ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆ-3ನೇ ಹಂತದ ಬಳಗಾನೂರ ಗ್ರಾಮದಿಂದ ಲಿಂಗದಳ್ಳಿ ಗ್ರಾಮದವರೆಗೆ 4.61 ಕೋಟಿ ರೂ. ವೆಚ್ಚದಲ್ಲಿ 6 ಕಿಮೀ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಮುದ್ದೇಬಿಹಾಳ ಮತಕ್ಷೇತ್ರದ ಇತಿಹಾಸದಲ್ಲಿ ಸರ್ಕಾರದ ವಿಶೇಷ ಅನುದಾನದಲ್ಲಿ 180 ಕೋಟಿ ರೂ. ಸಾಮಾನ್ಯ ವರ್ಗದಲ್ಲಿ ಊರುಗಳಲ್ಲಿ ಸಿ.ಸಿ. ರಸ್ತೆ ನಿರ್ಮಾಣಕ್ಕೆ ಮಂಜೂರಾತಿಯಾಗಿರುವುದು ಉದಾಹರಣೆ ಇಲ್ಲ. ಇಷ್ಟೊಂದು ಹಣ ಬಿಡುಗಡೆಯಾಗಿರುವುದು ಇತಿಹಾಸವಾಗಿದೆ. ಪಿಎಂಜಿಎಸ್‌ವೈ ಅಡಿಯಲ್ಲಿ 4.61ಕೋಟಿ ರೂ. ವೆಚ್ಚದಲ್ಲಿ ಬಳಗಾನೂರ-ಲಿಂಗದಳ್ಳಿ ರಸ್ತೆ ಸುದಾರಣೆಗೆ ಕ್ರಮ ಕೈಗೊಂಡಿದ್ದೇನೆ. ಪಿಎಂಜಿಎಸ್‌ವೈ ಅಡಿಯಲ್ಲಿ ಬಳಗಾನೂರ ಗ್ರಾಮದಲ್ಲಿಯ ಮುಖ್ಯರಸ್ತೆ ನಿರ್ಮಾಣಕ್ಕೆ 1 ಕೋಟಿ ರೂಗಳಲ್ಲಿ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇನೆ. ಮುಖ್ಯವಾಗಿ ಕೆರೆ ತುಂಬುವ ಯೋಜನೆಯಲ್ಲಿ ಬಳಗಾನೂರ ಗ್ರಾಮದ ಕರೆ ತುಂಬಿಸಲು 1.20 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಂಡಿದೆ. ಇದರಿಂದ ಈ ಭಾಗದಲ್ಲಿ ನೀರಿನ ಸಮಸ್ಯೆ ನೀಗಿಸುವಂತಹ ಕೆಲಸ ಮಾಡಿದ್ದೇನೆ ಎಂದರು.

    ಬಳಗಾನೂರ ಗ್ರಾಮದ ಹನುಮಾನ ದೇವಸ್ಥಾನಕ್ಕೆ ಹಣ ಬಿಡುಗಡೆಯಾಗಿದೆ. ಶಾಲೆ ಕಟ್ಟಡಕ್ಕೆ ಹಣ ಬಿಡುಗಡೆಯಾಗಿ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಜಮೀನುಗಳಿಗೆ ಹೋಗುವ ಕಾಲುದಾರಿಗಳ ದುರಸ್ತಿಗೆ 38 ಕೋಟಿ ರೂ. ಬಿಡುಗಡೆಗೊಂಡು ಕೆಲವು ಗ್ರಾಮಗಳಲ್ಲಿ ಕೆಲಸ ನಡೆದಿದೆ. ಅದರಂತೆ ಬಳಗಾನೂರ ಗ್ರಾಮದಲ್ಲಿ ಕೆಬಿಜೆಎನ್‌ಎಲ್ ಅಡಿಯಲ್ಲಿ ಗ್ರಾಮದಲ್ಲಿ ಸಿಸಿ ರಸ್ತೆ ಕೈಗೊಳ್ಳಲು 1 ಕೋಟಿ ರೂ. ಬಿಡುಗಡೆಗೊಂಡಿದೆ. ಬಳಗಾನೂರ ಗ್ರಾಮಕ್ಕೂ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿದ್ದೇನೆ ಎಂದರು.

    ಗ್ರಾಮದ ಮುಖಂಡರಾದ ಶರಣಯ್ಯ ಪರಮಯ್ಯಮಠ, ಪ್ರಭುಗೌಡ ಪಾಟೀಲ, ರಾಮನಗೌಡ ದೋರನಳ್ಳಿ, ಚಂದ್ರಶೇಖರ ಅಲದಿ, ರಮೇಶ ಫೀರಾಪೂರ, ಹಿರಗಪ್ಪ ಅರಳಿಕಟ್ಟಿ, ಹುವಪ್ಪಗೌಡ ಬಿರಾದಾರ, ಸಿದ್ದು ಪಡಶೆಟ್ಟಿ, ರಾಮನಗೌಡ ನಾ ದೋರನಳ್ಳಿ, ಶಾಂತು ದೋರನಳ್ಳಿ, ನಿಂಗಣ್ಣ ಹೊಸಮನಿ, ಸಿದ್ದು ವಾಲಿ, ಪ್ರಭು ಸಜ್ಜನ, ಶಂಕರಗೌಡ ಬಿರಾದಾರ, ರಾಜು ವಡ್ಡರ, ಪ್ರಭು ಪ್ರತ್ತೇಪೂರ, ಸಾಹೇಬಗೌಡ ಬಿರಾದಾರ, ಗೌಡಪ್ಪ ದೋರನಳ್ಳಿ, ಸುರೇಶ ಬಿರಾದಾರ, ಪಿಎಂಜಿಎಸ್‌ವೈ ಅಧಿಕಾರಿಗಳಾದ ಎಸ್.ಎಸ್.ಎಸ್. ಬೈರಾಜ್, ಟಿ.ವಿ. ದೊಡಮನಿ, ಗುತ್ತಿಗೆದಾರ ಎಂ.ಎಸ್. ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts