More

    ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

    ಸಿದ್ದಾಪುರ: ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರುಬೇಕು ಎಂದು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದೇವಜಾನು ಸಲಹೆ ನೀಡಿದರು.

    ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರನ್ನು ಸಬಲೀಕರಣಗೊಳಿಸಲು ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಲ್ಲದೆ ಸ್ವ ಸಹಾಯ ಗುಂಪುಗಳ ಮೂಲಕ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಪಶು ಸಂಗೋಪನೆ, ಗುಡಿ ಕೈಗಾರಿಕೆ, ವ್ಯಾಪಾರ ಯಾವುದೇ ಕ್ಷೇತ್ರದಲ್ಲದರೂ ಸ್ವ ಉದ್ಯೋಗ ಕಂಡುಕೊಳ್ಳುವಂತೆ ತಿಳಿಸಿದರು.
    ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳನಿಸ್ವಾಮಿ ಮಾತನಾಡಿ, ಮಹಿಳೆಯರು ವ್ಯಾಪಾರ ವ್ಯವಹಾರ ನಡೆಸಲು ಗ್ರಾಪಂ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

    ಆರೋಗ್ಯ ಇಲಾಖೆ ಅಧಿಕಾರಿ ಚೈತನ್ಯಾ ಮಾತನಾಡಿ, ಹೆಣ್ಣು ಮಕ್ಕಳ ರಕ್ಷಣೆಗೆ ಪಾಲಕರು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು .2023ರ ವರದಿಯ ಪ್ರಕಾರ 70 ಸಾವಿರ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಪ್ರತಿ ದಿನ ಪತ್ರಿಕೆಗಳಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಸ್ತ್ರೀಯರಿಗೆ ರಕ್ಷಣೆಯ ಅಗತ್ಯವಿದ್ದಲ್ಲಿ 112 ಕರೆಮಾಡಿ ಪೊಲೀಸ್ ಇಲಾಖೆ ರಕ್ಷಣೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

    ಕೊಡಗು ಜಿಲ್ಲಾ ವಲಯ ಸಂಯೊಜಕರಾದ ಜೋಯ್ಲಿ, ಗ್ರಾಪಂ ಸದಸ್ಯರಾದ ಪ್ರಮೀಳಾ, ಸಮೀರ, ಒಕ್ಕೂಟದ ಅಧ್ಯಕ್ಷೆ ಸುಲೋಚನಾ, ಕೇಂದ್ರ ಸಮೀಪ ಅಧ್ಯಕ್ಷರಾದ ರಮಾ, ಪೂವಮ್ಮ, ರಾಣಿ, ಮಮತಾ, ಆಶಾ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts