ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಿ

blank

ಶಿಕಾರಿಪುರ: ನಗರದಲ್ಲಿ ಮಂಗಳವಾರ ರಾತ್ರಿ ಅನ್ಯಕೋಮಿನ ಕಿಡಿಗೇಡಿಗಳು ಹಿಂದು ಯುವಕನಿಗೆ ಚಾಕುವಿನಿಂದ ಇರಿದ ಘಟನೆ ಖಂಡಿಸಿ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಟೌನ್ ಸ್ಟೇಷನ್ ಎದುರು ಹಿಂದುಗಳು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯ -Àಲವಾಗಿ ಕೋಮುಗಲಭೆ ಹೆಚ್ಚಾಗುತ್ತಿದೆ. ಅನ್ಯಕೋಮಿನ ಕೆಲ ಕಿಡಿಗೇಡಿಗಳ ಉಪಟಳ ಹೆಚ್ಚಾಗಿದೆ. ಸರ್ಕಾರ ತಕ್ಷಣ ಈ ರೀತಿಯ ಘಟನೆಗಳು ಮುಂದುವರಿಯದAತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾತುಕತೆಯಲ್ಲಿ ಮುಗಿಯುವಂತಹ ವಿಷಯಗಳು ಕೊಲೆಯ ಹಂತಕ್ಕೆ ತಲುಪುತ್ತಿರುವುದು ಬೇಸರದ ಸಂಗತಿ. ಇಂತಹ ಘಟನೆಗಳಿಂದ ಬಹುಸಂಖ್ಯಾತ ಹಿಂದುಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಾಯಗೊಂಡ ಯುವಕನನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದೇವೆ. ಎರಡ್ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಿಕಾರಿಪುರ ಜನರು ಎಂದಿಗೂ ಶಾಂತಿ, ಸೌಹಾರ್ದದಿಂದ ಬದುಕಿದವರು. ಜನತೆಯಲ್ಲಿ ಸಾಮರಸ್ಯ ಮೂಡಬೇಕು ಎಂದು ಆಗ್ರಹಿಸಿದರು.
ಈ ಘಟನೆಯಲ್ಲಿ ಬಾಲಾಪರಾಽಗಳು ಇದ್ದರೆ ಅವರಿಗೂ ಕಾನೂನು ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಬಿಜೆಪಿ ಮುಖಂಡ ರಾಘವೇಂದ್ರ, ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವೀರನಗೌಡ, ಬೆಣ್ಣೆ ಪ್ರವೀಣ್, ರಾಜು, ವಿನಯ್, ನಿರಂಜನ್, ಯೋಗೀಶ, ವೀರೇಶ್, ಲೋಹಿತ್, ಧಾರವಾಡ ಗಿರೀಶ್, ವಸಂತ ಗೌಡ ಇತರರಿದ್ದರು.

blank
ಚಾಕುವಿನಿಂದ ಮಾರಣಾಂತಿಕ ಹಲ್ಲೆ
ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದವರನ್ನು ಕರೆದು ಇಲ್ಲಿ ಮಕ್ಕಳು, ವಯಸ್ಸಾದವರು ಓಡಾಡುತ್ತಿರುತ್ತಾರೆ ಎಂದು ಬುದ್ಧಿವಾದ ಹೇಳಿದ್ದಕ್ಕೆ ರಾತ್ರಿ ಊಟ ಮಾಡಿ ಹೊರಗೆ ಹೋದಾಗ ಕಿಡಿಗೇಡಿಗಳು ದಾಳಿ ನಡೆಸಿ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕರುಳು ಹೊರಗೆ ಬರುವಂತೆ ಇರಿದಿದ್ದು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಿ ಆಪರೇಷನ್ ಮಾಡಲಾಗಿದೆ. ಈಗಿನ ಕಾಲದಲ್ಲಿ ಕರೆದು ಬುದ್ಧಿವಾದ ಹೇಳುವುದೇ ತಪ್ಪಾಗಿದೆ. ನನ್ನ ಮಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಸಮಾಜದಲ್ಲಿ ಜನಸಾಮಾನ್ಯರು ಭಯದಲ್ಲೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚಾಕು ಇರಿತದಿಂದ ಗಾಯಗೊಂಡ ಸುಶೀಲ್ ತಂದೆ ಚನ್ನವೀರಪ್ಪ ಅಳಲು ತೋಡಿಕೊಂಡರು.
Share This Article
blank

ಇದು ನೇರಳೆ ಹಣ್ಣಿನ ಸೀಸನ್​ ಮಿಸ್​ ಮಾಡ್ದೆ ತಿನ್ನಿ… ತಿಂದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ…Black jamun

Black jamun : ಆಯಾ ಋತುವಿನಲ್ಲಿ ಸಿಗುವ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು…

ಬೆಳಿಗ್ಗೆ ಈ ಸೂಪರ್​ ಫುಡ್​ಗಳನ್ನು ಸೇವಿಸಿ: ನಿಮ್ಮ ದೇಹದಲ್ಲಾಗುವ ಸಕಾರಾತ್ಮಕ ಬದಲಾವಣೆ ಗಮನಿಸಿ | Superfoods

Superfoods: ಸಾಮಾನ್ಯವಾಗಿ ಬೆಳಗಿನ ಸಮಯವು ದಿನಪೂರ್ತಿ ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಎದ್ದ ತಕ್ಷಣ ನೀವು ಏನು ಮಾಡುತ್ತೀರಿ…

blank