More

    ಚಿನ್ನದಲ್ಲಿ ಮೂಡಿದೆ ತಾಜ್​ಮಹಲ್! 17 ಗ್ರಾಂ ತೂಕದ ಕಲಾಕೃತಿಯನ್ನು ಕಣ್ತುಂಬಿಕೊಳ್ಳಿ…

    ಬೆಂಗಳೂರು: ಕಲಾಕಾರರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬ ಮಾತು ಇದಕ್ಕೇ ಹೇಳಿರಬೇಕು ನೋಡಿ. ಕುಶಲಕಮಿರ್ಯೊಬ್ಬರು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್​ಮಹಲ್​ ಪ್ರತಿಕೃತಿಯನ್ನು ಚಿನ್ನದಲ್ಲಿ ತಯಾರಿಸಿದ್ದಾರೆ. ಅದೂ ಅತೀ ಸಣ್ಣ ಮೂಗೂತಿ ಗಾತ್ರದಷ್ಟು!

    ಶ್ರೀರಾಮಪುರದ ಲಕ್ಷ್ಮೀ ನಾರಾಯಣಪುರದಲ್ಲಿರುವ ಶ್ರೀ ಮಂಜುನಾಥ ಜ್ಯುವೆಲರಿಯ ನಾಗರಾಜು ರೇವಣ್ಕರ್​ ಕೇವಲ 16.990 ಗ್ರಾಂ ಚಿನ್ನದಲ್ಲಿ ಪ್ರತಿಕೃತಿ ರೂಪಿಸಿ ಎಲ್ಲರ ಹುಬ್ಬೇರಿಸಿದ್ದಾರೆ. 4 ಸೆಂ.ಮೀ. ಎತ್ತರ ಹಾಗೂ 3.5 ಸೆಂ.ಮೀ. ಅಗಲದ ತಾಜ್​ಮಹಲ್​ ಪ್ರತಿಕೃತಿ ತಯಾರಿಸಿ ಮಳಿಗೆಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.

    ಇದನ್ನೂ ಓದಿರಿ ರಾತ್ರೋರಾತ್ರಿ ಕುಸಿದ ದೇವಾಲಯ ಗೋಪುರ! ಇದು ಅಪಾಯದ ಮುನ್ಸೂಚನೆಯೇ..?

    ಚಿನ್ನದಲ್ಲಿ ಮೂಡಿದೆ ತಾಜ್​ಮಹಲ್! 17 ಗ್ರಾಂ ತೂಕದ ಕಲಾಕೃತಿಯನ್ನು ಕಣ್ತುಂಬಿಕೊಳ್ಳಿ...ತಾಜ್​ಮಹಲ್​ನ ಕೆಳಭಾಗದಲ್ಲಿ “ಐ ಲವ್​ ಮೋದಿ ಜೀ”, “ಕರ್ನಾಟಕ ರತ್ನ”, “ಡಾ.ರಾಜ್​ಕುಮಾರ್​’ ಹಾಗೂ “ಎಂಟು ಜ್ಞಾನಪೀಠ’ ಎಂದು ಚಿನ್ನದ ಎಳೆಗಳಿಂದ ಅಕ್ಷರ ಬರೆದಿದ್ದಾರೆ. ತಾಜ್​ಮಹಲ್​ ಮಧ್ಯಭಾಗದಲ್ಲಿ ‘ಐ ಲವ್​ ಮೈ ಇಂಡಿಯಾ’ ಬರೆದಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.

    ಕರೊನಾ ನಿಯಂತ್ರಿಸಲು ಲಾಕ್​ಡೌನ್​ ಹೇರಿದ್ದರಿಂದ ಸಮಯ ಸಿಕ್ಕಿತ್ತು. ಹೀಗಾಗಿ, ಚಿನ್ನದಲ್ಲಿ ಕಡಿಮೆ ತೂಕದ ಪ್ರತಿಕೃತಿ ತಯಾರಿಸುವ ಯೋಚನೆ ಬಂದಿತು. ಅಂಗಡಿ ಬಾಗಿಲು ಹಾಕಿಕೊಂಡು ಒಳಗೆ ಚಿನ್ನದಲ್ಲಿ ತಾಜ್​ಮಹಲ್​ ರೂಪಿಸಲು ಆರಂಭಿಸಿದೆ. 27 ದಿನಗಳಲ್ಲಿ ತಯಾರಿಸಿದೆ. 20 ವರ್ಷದಿಂದ ಚಿನ್ನಾಭರಣಗಳ ತಯಾರಿಕೆ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ವಿಶ್ವಕಪ್​ ಪ್ರತಿಕೃತಿ ತಯಾರಿಸಿದ್ದೆ. ವಿಶೇಷ ಹಬ್ಬದ ದಿನಗಳಲ್ಲಿ ಬಗೆಬಗೆಯ ಕಲಾಕೃತಿ ರಚಿಸಿದ್ದೇನೆ ಎನ್ನುತ್ತಾರೆ ನಾಗರಾಜು ರೇವಣ್ಕರ್​.

    ಇದನ್ನೂ ಓದಿರಿ ಕ್ಯಾಬ್​ ಚಾಲಕರ ಹೈಟೆಕ್​ ವಂಚನೆಗೆ 500 ಸಿಮ್​ ಬಳಕೆ… ಹೇಗೆಲ್ಲ ಯಾಮಾರಿಸ್ತಾರೆ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts