More

    ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಆಫ್​ ಡೆತ್ ಎನಿಸಿದ 1ನೇ ಗುಂಪಿನಲ್ಲಿ ಸೆಮೀಸ್ ಲೆಕ್ಕಾಚಾರ ಹೇಗಿದೆ ಗೊತ್ತಾ?

    ದುಬೈ: ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಒಳಗೊಂಡ ಗ್ರೂಪ್-2ರಲ್ಲಿ ಪಾಕಿಸ್ತಾನ ಈಗಾಗಲೆ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದ್ದರೆ, ನ್ಯೂಜಿಲೆಂಡ್ 2ನೇ ನೆಚ್ಚಿನ ತಂಡವೆನಿಸಿದೆ. ಕಿವೀಸ್ ಇನ್ನೊಂದು ಪಂದ್ಯ ಸೋತರಷ್ಟೇ ಭಾರತ ಅಥವಾ ಅಫ್ಘಾನಿಸ್ತಾನ ಸೆಮಿಫೈನಲ್‌ಗೇರುವ ಅವಕಾಶ ಹೊಂದಿದೆ. ಮತ್ತೊಂದೆಡೆ ‘ಗ್ರೂಪ್ ಆಫ್​ ಡೆತ್’ ಎನಿಸಿದ್ದ ಸೂಪರ್-12ರ ಗ್ರೂಪ್-1ರಲ್ಲಿ ಸೆಮಿಫೈನಲ್ ಲೆಕ್ಕಾಚಾರ ಭಾರಿ ಕುತೂಹಲ ಮೂಡಿಸಿದೆ.

    ಇಂಗ್ಲೆಂಡ್ ತಂಡ ಇದುವರೆಗೆ ಆಡಿದ ನಾಲ್ಕೂ ಪಂದ್ಯ ಜಯಿಸಿದ್ದರೂ, ಸೆಮೀಸ್ ಪ್ರವೇಶ ಖಚಿತಗೊಂಡಿಲ್ಲ. ಆದರೆ ಉತ್ತಮ ರನ್‌ರೇಟ್ ಕೂಡ ಹೊಂದಿರುವುದು ಆಂಗ್ಲರ ಹಾದಿ ಸುಗಮವಾಗಿಸಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳೂ ಸೆಮೀಸ್ ರೇಸ್‌ನಲ್ಲಿ ನಿಕಟ ಪೈಪೋಟಿ ಒಡ್ಡುತ್ತಿವೆ.

    ಆಸೀಸ್ ಮತ್ತು ದ. ಆಫ್ರಿಕಾ ತಂಡಗಳು ತಮ್ಮ ಕೊನೇ 2 ಲೀಗ್ ಪಂದ್ಯಗಳಲ್ಲಿ ವಿಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಎದುರಿಸಬೇಕಾಗಿದ್ದು, ಇವೆರಡೂ ಪಂದ್ಯಗಳು ‘ಕ್ವಾರ್ಟರ್​ಫೈನಲ್’ ಮಾದರಿಯಲ್ಲಿರಲಿವೆ. ಆಸೀಸ್, ಆಫ್ರಿಕಾ ತಂಡಗಳು ಜಯಿಸಿದರೆ, ಆಗ ಇಂಗ್ಲೆಂಡ್ ಜತೆಗೆ 3 ತಂಡಗಳು ತಲಾ 4 ಜಯದೊಂದಿಗೆ 8 ಅಂಕ ಗಳಿಸಲಿದ್ದು, ಸೆಮಿಫೈನಲ್‌ಗೇರಲಿರುವ 2 ತಂಡಗಳನ್ನು ರನ್‌ರೇಟ್ ಲೆಕ್ಕಾಚಾರ ನಿರ್ಧರಿಸಲಿದೆ. ಆಸೀಸ್ ಸೋತು, ದಕ್ಷಿಣ ಆಫ್ರಿಕಾ ಗೆದ್ದರೆ ಆಗ ಆಫ್ರಿಕಾ ಜತೆಗೆ ಇಂಗ್ಲೆಂಡ್ ಸೆಮೀಸ್‌ಗೇರಲಿದೆ. ಆಸೀಸ್ ಗೆದ್ದು, ದಕ್ಷಿಣ ಆಫ್ರಿಕಾ ಸೋತರೆ ಆಗ ಇಂಗ್ಲೆಂಡ್ ಜತೆಗೆ ಆಸೀಸ್ ಸೆಮೀಸ್‌ಗೇರಲಿದೆ.

    ಇನ್ನು ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಕೂಡ ತನ್ನ ಕೊನೇ 2 ಲೀಗ್ ಪಂದ್ಯಗಳಲ್ಲಿ ಭಾರಿ ಅಂತರದಿಂದ ಜಯಿಸಿದರೆ ಸೆಮಿಫೈನಲ್‌ಗೇರಬಹುದಾಗಿದೆ. ಆದರೆ ಇದಕ್ಕೆ ಆಸೀಸ್, ಆಫ್ರಿಕಾ ಎರಡೂ ತಂಡಗಳು ತಮ್ಮ ಕೊನೇ ಲೀಗ್ ಪಂದ್ಯಗಳಲ್ಲಿ ಸೋಲಬೇಕಾಗುತ್ತದೆ ಮತ್ತು ರನ್​ರೇಟ್​ ಲೆಕ್ಕಾಚಾರದಲ್ಲಿ ಅವೆರಡನ್ನೂ ವಿಂಡೀಸ್​ ತಂಡ ಹಿಂದಿಕ್ಕಬೇಕಾಗುತ್ತದೆ.

    ಬಾಂಗ್ಲಾ ಎದುರು ಭರ್ಜರಿ ಜಯ, ಆಸೀಸ್‌ಗೆ ಹೆಚ್ಚಿದ ಸೆಮೀಸ್ ಆಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts