More

    ರೈತ ಹೋರಾಟ ಸ್ಥಳದಲ್ಲಿ ಮತ್ತೆ ದೆಹಲಿ ಪೊಲೀಸ್ ಮೇಲೆ ಕತ್ತಿಯಿಂದ ಹಲ್ಲೆ

    ನವದೆಹಲಿ: ದೆಹಲಿ-ಹರಿಯಾಣ ಗಡಿಭಾಗವಾದ ಸಿಂಘುವಿನ ರೈತ ಹೋರಾಟದಲ್ಲಿ ಭಾಗವಹಿಸುತ್ತಿದ್ದ ವ್ಯಕ್ತಿಯೊಬ್ಬ ದೆಹಲಿ ಪೊಲೀಸರ ಕಾರು ಕದಿಯುವ ಪ್ರಯತ್ನ ಮಾಡಿದ್ದಲ್ಲದೆ, ತಡೆಯಲು ಹೋದ ಅಧಿಕಾರಿಯ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಪಂಜಾಬ್ ನಿವಾಸಿ ಹರ್​ಪ್ರೀತ್ ಸಿಂಗ್​ ಎಂಬುವವನೇ ಈ ಕೃತ್ಯ ಎಸಗಿದವ.

    ದೆಹಲಿಯ ಹೊರಭಾಗದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ. ಮತ್ತಿನಲ್ಲಿದ್ದ ಎನ್ನಲಾದ ಹರ್​ಪ್ರೀತ್​ ಸಿಂಗ್, ದೆಹಲಿ ಪೊಲೀಸರ ಕಾರು ಕದ್ದು ಓಡಿಸಿಕೊಂಡು ಹೋಗಿದ್ದಾನೆ. ಅವನನ್ನು ತಡೆಯಲು ಹೋದ ಪೊಲೀಸರಲ್ಲಿ ಒಬ್ಬ ಅಧಿಕಾರಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ನಂತರ ಟ್ರಾಫಿಕ್ ಸಿಗ್ನಲ್ ಬಳಿ ಕಾರನ್ನು ಬಿಟ್ಟು, ಸ್ಕೂಟರ್ ಒಂದನ್ನು ಬಳಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ.

    ಇದನ್ನೂ ಓದಿ: ರೈತರ ಪ್ರತಿಭಟನೆ: 18 ಮಂದಿ ದೆಹಲಿ ಪೊಲೀಸರು ಆಸ್ಪತ್ರೆಗೆ ದಾಖಲು, ಒಬ್ಬರ ಸ್ಥಿತಿ ಗಂಭೀರ

    ಕೊನೆಗೂ ಸಿಂಗ್​ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹಲ್ಲೆ ಮತ್ತು ಕಳ್ಳತನದ ಕೇಸುಗಳನ್ನು ದಾಖಲಿಸಲಾಗಿದೆ. ಹಲ್ಲೆಗೊಳಗಾದ ಸಮಯ್​ಪುರ್ ಬದ್ಲಿ ಪೊಲೀಸ್ ಠಾಣಾಧಿಕಾರಿ ಆಶಿಶ್ ದುಬೆಯ ಕತ್ತು ಮತ್ತು ಬೆರಳುಗಳಿಗೆ ಗಂಭೀರ ಗಾಯಗಳಾಗಿವೆ. ಕಳೆದ ವಾರವಷ್ಟೇ ಟಿಕ್ರಿ ಪ್ರದೇಶದಲ್ಲಿ ಮತ್ತೊಬ್ಬ ಪೊಲೀಸ್ ಸಿಬ್ಬಂದಿಯನ್ನು ಚಳುವಳಿಕಾರನೊಬ್ಬ ಥಳಿಸಿದ್ದ ಘಟನೆ ವರದಿಯಾಗಿತ್ತು.(ಏಜೆನ್ಸೀಸ್)

    ಗ್ರೆಟಾ ಟೂಲ್​ಕಿಟ್​​ ಪ್ರಕರಣ : ವಕೀಲೆ ನಿಕಿತಾ ಜೇಕಬ್​ಗೆ ನಿರೀಕ್ಷಣಾ ಜಾಮೀನು

    ಅಮಿತಾಭ್ ಬಚ್ಚನ್​ ಮೊಮ್ಮಗಳ ಹೊಸ ಪ್ಲಾನ್ ಏನು ಗೊತ್ತಾ ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts