More

    ರೈತರ ಪ್ರತಿಭಟನೆ: 18 ಮಂದಿ ದೆಹಲಿ ಪೊಲೀಸರು ಆಸ್ಪತ್ರೆಗೆ ದಾಖಲು, ಒಬ್ಬರ ಸ್ಥಿತಿ ಗಂಭೀರ

    ನವದೆಹಲಿ: ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆಯಿಂದಾಗಿ ದೆಹಲಿಯ 18 ಮಂದಿ ಪೊಲೀಸರು ಗಾಯಗೊಂಡು ಲೋಕನಾಯಕ್​ ಜಯಪ್ರಕಾಶ್ ನಾರಾಯಣ ಆಸ್ಪತ್ರೆ (ಎಲ್​ಎನ್​​ಜೆಪಿ) ಗೆ ದಾಖಲಾಗಿದ್ದು, ಓರ್ವ ಸಿಬ್ಬಂದಿಯ ಪರಿಸ್ಥಿತಿ ಗಂಭೀರವಾಗಿದೆ.

    ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕೆಲ ತಿಂಗಳಿಂದ ದೆಹಲಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದು, ಇಂದಿನ ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್​ ರ‍್ಯಾಲಿಯನ್ನು ರೈತರು ಹಮ್ಮಿಕೊಂಡಿದ್ದರು. ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ರೈತರು ಮತ್ತು ಪೊಲೀಸರ ನಡುವಿನ ತಿಕ್ಕಾಟದಲ್ಲಿ ಪೊಲೀಸ್​ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿರಿ: ಆ ಒಂದು ವಾಟ್ಸ್​ಆ್ಯಪ್​ ಮೆಸೇಜ್​ಗೆ ಆತುರ ನಿರ್ಧಾರ: ಪ್ರೇಮಿಗಳಿಬ್ಬರ ದುರಂತ ಅಂತ್ಯ!

    ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಗೃಹಸಚಿವಾಲಯ ಹೆಚ್ಚುವರಿ ರಕ್ಷಣಾ ಪಡೆಗಳನ್ನು ಪರಿಸ್ಥಿತಿ ನಿಯಂತ್ರಿಸಲು ನಿಯೋಜಿಸಿದೆ. ಮಂಗಳವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್​​ ಷಾ ನೇತೃತ್ವದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ.

    ಪ್ಯಾರಾಮಿಲಿಟರಿ ಪಡೆಗಳ ಹೆಚ್ಚುವರಿ ಕಂಪನಿಗಳು ದೆಹಲಿಯಲ್ಲಿ ನಿಯೋಜಿಸುವ ಸಾಧ್ಯತೆ ಇದೆ. ಸುಮಾರು 15 ಕ್ಕೂ ಹೆಚ್ಚು ಕಂಪನಿಗಳನ್ನು ನಿನ್ನೆಯೇ ಕಳುಹಿಸಲಾಗಿದ್ದು, ಇಂದು ಹೆಚ್ಚುವರಿಯಾಗಿ 5 ಕಂಪನಿಗಳು ನಿಯೋಜನೆಗೊಳ್ಳಲಿವೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಕೆಂಪುಕೋಟೆಗೆ ಮುತ್ತಿಗೆ, ಅನ್ಯ ಧ್ವಜಾರೋಹಣ

    VIDEO| ಹಿಂಸಾಚಾರಕ್ಕೆ ತಿರುಗಿದ ‘ಟ್ರ್ಯಾಕ್ಟರ್​ ಪರೇಡ್​’, ತಲ್ವಾರ್​ ಹಿಡಿದು ಬಂದ ರೈತರು!

    ಮೈ ಕೊರೆಯುವ ಚಳಿಯ ನಡುವೆಯೇ 16 ಸಾವಿರ ಅಡಿಯೇರಿ ಧ್ವಜ ಹಾರಿಸಿದ ವೀರ ಯೋಧರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts