More

    ಒಲಿಂಪಿಕ್ಸ್​: ಸೆಮಿಫೈನಲ್​ಗೆ ಜಸ್ಟ್​ ಮಿಸ್​ ಆದ ಮಾನಾ ಪಟೇಲ್​

    ಟೋಕಿಯೋ : ಆಟ ಎಂದ ಮೇಲೆ ಗೆಲುವೂ ಉಂಟು ಸೋಲೂ ಉಂಟು. ಒಂದೆಡೆ, ಬಾಕ್ಸರ್ ಮೇರಿ ಕೋಂ ಮತ್ತು ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಉತ್ತಮ ಪ್ರದರ್ಶನ ನೀಡಿ ಮುಂದಿನ ಘಟ್ಟಗಳನ್ನು ಪ್ರವೇಶಿಸಿದ್ದಾರೆ. ಮತ್ತೊಂದೆಡೆ, ಕೆಲವು ಕ್ರೀಡಾ ವಿಭಾಗಗಳಲ್ಲಿ ಭಾರತೀಯ ಆಟಗಾರರು ಸೋಲನುಭವಿಸಿದ್ದಾರೆ.

    ಮಹಿಳೆಯರ 100 ಮೀ ಬ್ಯಾಕ್​ಸ್ಟ್ರೋಕ್ ಸ್ಪರ್ಧೆಯಲ್ಲಿ ಭಾರತದ ಮಾನಾ ಪಟೇಲ್​ ಸುಮಾರು ಮೂರು ಸೆಕೆಂಡುಗಳ ಅಂತರದಲ್ಲಿ ಸೆಮಿಫೈನಲ್ಸ್​ ಅವಕಾಶದಿಂದ ವಂಚಿತರಾಗಿದ್ದಾರೆ. ಇಂದು ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್​ನ ಹೀಟ್(ಆರಂಭಿಕ ಸ್ಪರ್ಧೆ)​ನಲ್ಲಿ ಪಟೇಲ್, 1 ನಿಮಿಷ 5 ಸೆಕೆಂಡು ಮತ್ತು 20 ಮಿನಿಸೆಕೆಂಡುಗಳಲ್ಲಿ ಮುಗಿಸಿ, ಎರಡನೇ ಸ್ಥಾನ ಗಳಿಸಿದರು.

    ಇದನ್ನೂ ಓದಿ: ಒಲಿಂಪಿಕ್ಸ್​: ಮೊದಲ ಪಂದ್ಯ ಗೆದ್ದ ವರ್ಲ್ಡ್ ಚ್ಯಾಂಪಿಯನ್ ಪಿ.ವಿ.ಸಿಂಧು

    ಈ ಹೀಟ್​​ನಲ್ಲಿ ಮೊದಲನೇ ಸ್ಥಾನ ಪಡೆದ ಜಿಂಬಾಬ್ವೆಯ ಡೊನಾಟಾ ಕಟಾಯಿ ಅವರು 1:02.73 ಕ್ಕೆ ಮುಗಿಸಿದರೆ, ಮೂರನೇ ಸ್ಥಾನ ಪಡೆದ ಗ್ರೆನಡಾದ ಕಿಂಬರ್ಲಿ ಇನ್ಸ್​​ ಕಾಲಾವಧಿಯು 1:10.24 ರಷ್ಟಿತ್ತು. ಇದರಿಂದಾಗಿ 21 ವರ್ಷದ ಮಾನಾ ಪಟೇಲ್​ ಒಟ್ಟಾರೆ 39ನೇ ಸ್ಥಾನ ಪಡೆದಿದ್ದು, ಟಾಪ್​ 16 ಈಜುಗಾರರು ಮಾತ್ರ ಖ್ವಾಲಿಫೈ ಆಗುವ ಸೆಮಿಫೈನಲ್ಸ್​ ಪ್ರವೇಶಿಸುವ ಅವಕಾಶ ಕಳೆದುಕೊಂಡರು.

    ಮತ್ತೊಂದೆಡೆ, ಜಿಮ್ನಾಸ್ಟ್​ ಪ್ರಣತಿ ನಾಯಕ್ ಸಬ್​ಡಿವಿಷನ್ 2 ರ ಅಂತ್ಯದಲ್ಲಿ 29ನೇ ಸ್ಥಾನ ಗಳಿಸಿ, ಮುಂಬಡ್ತಿ ಪಡೆಯುವಲ್ಲಿ ವಿಫಲರಾದರು. 26 ವರ್ಷ ವಯಸ್ಸಿನ ಪ್ರಣತಿಯು ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್​ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದ ಏಕೈಕ ಅಭ್ಯರ್ಥಿಯಾಗಿದ್ದರು. ಒಟ್ಟು ಐದು ಉಪವಿಭಾಗಗಳಲ್ಲಿ ನಡೆಯುವ ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳಲ್ಲಿ ಒಟ್ಟಾರೆ ಬೆಸ್ಟ್​ ಸ್ಕೋರ್ ಗಳಿಸುವ ಟಾಪ್ 24 ಜಿಮ್ನಾಸ್ಟ್​ಗಳಿಗೆ ಮಾತ್ರ ಜುಲೈ 29 ರ ಫೈನಲ್ಸ್​ಗೆ ಸ್ಥಾನ ಲಭಿಸಲಿದೆ. (ಏಜೆನ್ಸೀಸ್)

    ಪ್ರೀ-ಕ್ವಾರ್ಟರ್​ಫೈನಲ್ಸ್​​​ಗೆ ಮೇರಿ ಕೋಂ ಮುನ್ನಡೆ; ಚಿನ್ನದ ಮೇಲೆ ಕಣ್ಣು!

    ಒಲಿಂಪಿಕ್ಸ್​: ಮೆಡಲ್ ರೌಂಡ್​​ಗೆ ಭಾರತದ ಸೌರಭ್ ಚೌಧರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts