More

    ಸ್ವಚ್ಛ ಜಿಲ್ಲೆ ಉತ್ತರಕನ್ನಡ; ರಾಮದುರ್ಗದ ಕೋಟೆಯ ಪುನಃಶ್ಚೇತನ

    ಬೆಂಗಳೂರು: ಸ್ವಚ್ಛ ಭಾರತ ಅಭಿಯಾನದಡಿ ಕರ್ನಾಟಕದ ಉತ್ತರಕನ್ನಡ ಜಿಲ್ಲೆ ಇದೀಗ ಸ್ವಚ್ಛ ಜಿಲ್ಲೆ ಎನಿಸಿಕೊಳ್ಳುವತ್ತ ಮುನ್ನಡೆಯುತ್ತಿದೆ. ಇನ್ನೊಂದೆಡೆ ರಾಮದುರ್ಗದ ಕೋಟೆ ಪುನಃಶ್ಚೇತನಗೊಳಿಸಲಾಗಿದೆ. ಸ್ವಚ್ಛ ಭಾರತ ಮಿಷನ್​ನ ಏಕೈಕ ಗುರಿ ಕಸಮುಕ್ತ ನಗರ. ಕಸದ ಸುರಕ್ಷಿತ ವಿಲೇವಾರಿ, ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ ಸಂಪತ್ತನ್ನು ಸೃಷ್ಟಿಸುವುದು ಇತ್ಯಾದಿಗಳನ್ನು ನಿಭಾಯಿಸಲು ನವೀನ ಮಾರ್ಗಗಳನ್ನು ಕಂಡುಹಿಡಿಯುವುದು ಅವಶ್ಯಕವಾಗಿದ್ದು, ಈ ಸ್ವಚ್ಛತಾ ಪಯಣದಲ್ಲಿ ಕರ್ನಾಟಕದ ಉತ್ತರಕನ್ನಡ ಜಿಲ್ಲೆ ನಿಖರವಾಗಿ ಅದಕ್ಕಾಗಿ ಶ್ರಮಿಸುತ್ತಿದೆ.

    ಉತ್ತರ ಕನ್ನಡವು ಕರ್ನಾಟಕದ ಒಂದು ಸುಂದರ ಜಿಲ್ಲೆಯಾಗಿದ್ದು, ಅಗಾಧವಾದ ಪ್ರವಾಸಿ ಮತ್ತು ಪರಿಸರ ಪ್ರಾಮುಖ್ಯತೆಯ ಪ್ರದೇಶವಾಗಿದೆ. ಈ ಮನೋಜ್ಞವಾದ ಜಿಲ್ಲೆಯು ವೈವಿಧ್ಯಮಯ ಭೂಪ್ರದೇಶ ಹೊಂದಿದೆ. ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಸ್ವಚ್ಛತಾ ಹಿ ಸೇವಾ ಅಭಿಯಾನ 2023ರ ಅಡಿಯಲ್ಲಿ ಪರಿಸರ ತಾಣಗಳು, ಕಡಲ ತೀರಗಳು, ಪರ್ವತಗಳು ಮತ್ತು ಪ್ರವಾಸಿ ಸ್ಥಳಗಳ ಸುತ್ತಲೂ ಸಮಗ್ರ ಸ್ವಚ್ಛತಾ ಅಭಿಯಾನ ಆಯೋಜಿಸುವಲ್ಲಿ ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು (ಯುಎಲ್​ಬಿ) ಅಧಿಕಾರಿಗಳ ಪೂರ್ವಭಾವಿ ಪ್ರಯತ್ನಗಳು ಅಪೇಕ್ಷಿತ ಫಲಿತಾಂಶಗಳನ್ನು ನೀಡಿವೆ.

    ಸುಮಾರು 1000 ನಾಗರಿಕ ಸ್ವಯಂಸೇವಕರು ಸ್ವಚ್ಛತೆ ಮತ್ತು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡರು. ಅವರು ಸ್ವಚ್ಛತೆಯ ತಕ್ಷಣದ ಅಗತ್ಯ ತಿಳಿಸುವುದು ಮಾತ್ರವಲ್ಲದೆ ಜಿಲ್ಲೆಯ ಪರಿಸರ ಮತ್ತು ನೈಸರ್ಗಿಕ ಸೌಂದರ್ಯದ ಬಗ್ಗೆ ವಿಶಾಲವಾದ ಜವಾಬ್ದಾರಿಯ ಪ್ರಜ್ಞೆಯನ್ನು ಉತ್ತೇಜಿಸುತ್ತಿದ್ದಾರೆ. ಸ್ಥಳೀಯ ಸಮುದಾಯಗಳು, ನಿವೃತ್ತ ಶಿಕ್ಷಕರು, ವಕೀಲರು ಮತ್ತು ಯುವ ಕೇಂದ್ರ ಮತ್ತು ಎನ್​ಸಿಸಿಯಂಥ ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದು ಉಪಕ್ರಮದ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯ ಮುಖ್ಯ ಅಂಶಗಳು. ಈ ಸಾಮೂಹಿಕ ಪ್ರಯತ್ನವು ಶುಚಿತ್ವವು ಯಾವುದೇ ಒಂದು ಗುಂಪಿನ ಏಕೈಕ ಜವಾಬ್ದಾರಿಯಾಗಿರದೆ ಅದು ಎಲ್ಲಾ ಪಾಲುದಾರರ ಹಂಚಿಕೆಯ ಬದ್ಧತೆಯನ್ನು ತೋರಿಸುತ್ತದೆ.

    ಇದಲ್ಲದೆ ವಿವಿಧ ವಲಯಗಳ ವ್ಯಕ್ತಿಗಳನ್ನು ಸ್ವಚ್ಛತೆಯ ಚಾಂಪಿಯನ್ಸ್​ ಆಗಿ ಒಟ್ಟುಗೂಡಿಸುವ ಮೂಲಕ, ನಗರ ಸ್ಥಳೀಯ ಸಂಸ್ಥೆಗಳು ಜಿಲ್ಲೆಯ ಜನರಲ್ಲಿ ಹೆಮ್ಮೆ ಮತ್ತು ಮಾಲೀಕತ್ವದ ಭಾವನೆಯನ್ನು ಬೆಳೆಸುತ್ತಿವೆ. ʼಸ್ವಚ್ಛ ಭಾರತ್ ಮಿಷನ್ – ನಗರದʼ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯಾ ನಗರ ಸ್ಥಳೀಯ ಸಂಸ್ಥೆಗಳ ಅವಿರತ ಪ್ರಯತ್ನದಿಂದ ಇದು ಸಾಧ್ಯವಾಯಿತು. ಸ್ವಚ್ಛತೆಗಾಗಿ ಜನ ಆಂದೋಲನವನ್ನು ಮತ್ತಷ್ಟು ಉತ್ತೇಜಿಸಲು, ಇದೇ ಅ. 1ರಂದು ಮೆಗಾ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗುವುದು.

    ಮನ್ ಕಿ ಬಾತ್​ನ 105ನೇ ಸಂಚಿಕೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅ.1ರಂದು ಬೆಳಗ್ಗೆ 10 ಗಂಟೆಗೆ ಎಲ್ಲಾ ನಾಗರಿಕರು ಸಾಮೂಹಿಕವಾಗಿ ಸ್ವಚ್ಛತೆಗಾಗಿ 1 ಗಂಟೆಯ ಶ್ರಮದಾನಕ್ಕೆ ಮನವಿ ಮಾಡಿದ್ದರು.

    ಕರ್ನಾಟಕದ ರಾಮದುರ್ಗದ ಕೋಟೆಯ ಪುನಃಶ್ಚೇತನ

    ಸ್ವಚ್ಛ ಜಿಲ್ಲೆ ಉತ್ತರಕನ್ನಡ; ರಾಮದುರ್ಗದ ಕೋಟೆಯ ಪುನಃಶ್ಚೇತನಮಹಾತ್ಮಾಗಾಂಧೀಜಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸ್ವಚ್ಛಭಾರತ ದಿನದ (ಎಸ್​ಬಿಡಿ) ಸಂದರ್ಭದಲ್ಲಿ ಸೆ.15 ರಿಂದ ಅ.2ರ ವರೆಗೆ ಸ್ವಚ್ಛತೆಯೇ ಸೇವೆ – 2023ರ ಅಡಿ “ಸ್ವಚ್ಛತಾ ಪಾಕ್ಷಿಕ” ಆಯೋಜಿಸಲಾಗಿದೆ. ಇದರ ಅಂಗವಾಗಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ರಾಮದುರ್ಗ ಪುರಸಭೆಯಲ್ಲಿ ‘ಸ್ವಚ್ಛತೆ ಕುರಿತು ಐತಿಹಾಸಿಕ ಅಂದೋಲನ’ ಹಮ್ಮಿಕೊಳ್ಳಲಾಗಿದ್ದು, ಹಲವಾರು ಸ್ವಯಂ ಸೇವಕರು ಸ್ವಚ್ಛತಾ ಅಭಿಯಾನದಡಿ ಪಾಲ್ಗೊಂಡಿದ್ದಾರೆ.

    ತಮ್ಮ ಪಟ್ಟಣದ ಐತಿಹಾಸಿಕ ಗುರುತು ಸಂರಕ್ಷಿಸುವ ಮಹತ್ವವನ್ನು ಪರಿಗಣಿಸಿದ ರಾಮದುರ್ಗ ಪುರಸಭೆ ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದೆ. ಸ್ವಚ್ಛತಾ ಪಾಕ್ಷಿಕದಡಿ ರಾಮದುರ್ಗ ಪುರಸಭೆ ಈ ಐತಿಹಾಸಿಕ ರಾಮದುರ್ಗ ಕೋಟೆಯನ್ನು ಸ್ವಚ್ಛಗೊಳಿಸುವ ಬೃಹತ್ ಅಭಿಯಾನ ಹಮ್ಮಿಕೊಂಡಿದೆ. ವರ್ಷಗಳಿಂದ ಈ ಐತಿಹಾಸಿಕ ತಾಣ ಅಸಂಖ್ಯಾತ ಜನರ ಹೆಜ್ಜೆಗುರುತುಗಳಿಗೆ ಸಾಕ್ಷಿಯಾಗಿದೆ ಮತ್ತು ‘ಶತ್ರು’ ಕನ್ನಡ ಚಲನಚಿತ್ರ ಚಿತ್ರೀಕರಣ ಕೂಡ ಇಲ್ಲಿ ಮಾಡಲಾಗಿತ್ತು.

    ರಾಮದುರ್ಗದ ರಾಜಮನೆತನದ ನಾಯಕ ಶ್ರೀ ಸುರೇಶ್ ಪತ್ತೆಪುರ್ ಅವರ ದೂರದೃಷ್ಟಿಯ ನಾಯಕತ್ವದಡಿ ಸಾರ್ವಜನಿಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಜೊತೆಗೂಡಿ ಸ್ವಚ್ಛತಾ ಅಭಿಯಾನದಡಿ ಪಾಲ್ಗೊಳ್ಳುವ ಕುರಿತಾದ ಅದ್ಭುತ ಕಲ್ಪನೆ ಮೂಡಿ ಬಂತು. ಈ ಕಾರಣಕ್ಕಾಗಿ 150 ಕ್ಕೂ ಅಧಿಕ ಸ್ವಯಂ ಸೇವಕರು ಅಚಲ ಉತ್ಸಾಹದೊಂದಿಗೆ ರಾಮದುರ್ಗ ಕೋಟೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೈಜೋಡಿಸಿದರು.
    ಇವರೆಲ್ಲರ ಬದ್ಧತೆ ಕೇವಲ ಸ್ವಚ್ಛತೆಯಾಗಿರಲಿಲ್ಲ, ಬದಲಿಗೆ ಕಸಮುಕ್ತ ತಾಣವನ್ನಾಗಿ ಪರಿವರ್ತಿಸುವ ಭರವಸೆಯ ಪರಿವರ್ತನೆಗೆ ಇವರ ಶ್ರಮ ಸಾರ್ಥಕವಾಯಿತು. ಎಲ್ಲರೂ ಒಟ್ಟಿಗೆ ಅವಿರತವಾಗಿ ಅವಶೇಷಗಳನ್ನು ತೆರವುಗೊಳಿಸುವ, ಕಸ ತೆಗೆಯುವ ಮತ್ತು ಕೋಟೆಯನ್ನು ಮತ್ತೆ ಗತವೈಭವಕ್ಕೆ ಮರುಸ್ಥಾಪಿಸುವ ಉತ್ಸುಕತೆಯಿಂದ ಕಾರ್ಯನಿರ್ವಹಿಸಿದರು.

    ಅಂತಿಮವಾಗಿ ಸಮುದಾಯ ಒಗ್ಗೂಡಿದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಪ್ರಕಾಶಮಾನವಾದ ರಾಮದುರ್ಗ ಐತಿಹಾಸಿಕ ಕೋಟೆ ಸಾಕ್ಷಿಯಾಯಿತು. ಸ್ವಚ್ಛತೆಯ ಆಂದೋಲನ ಕೋಟೆಯನ್ನು ಶುಚಿಗೊಳಿಸುವುದಷ್ಟೇ ಅಲ್ಲದೇ ರಾಮದುರ್ಗದ ಗತಕಾಲಕ್ಕೆ ಮತ್ತೆ ಜೀವಕಳೆ ತುಂಬಿತು ಮತ್ತು ಐತಿಹಾಸಿಕ ಮಹತ್ವದ ದ್ವೀಪವಾಗಿ ಭವಿಷ್ಯದಲ್ಲಿ ತನ್ನ ಸ್ಥಾನವನ್ನು ಇದು ಭದ್ರಪಡಿಸಿಕೊಂಡಿತು.

    ಒಂದು ಪೊಂಗಲ್ ತಿನ್ನುವ ಸಮಯದಲ್ಲಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬಹುದಿತ್ತು: ಬಿಜೆಪಿ ಹೀಗಂದಿದ್ದೇಕೆ?

    ಮೇನಕಾ ಗಾಂಧಿ ಹೇಳಿಕೆ ಸುಳ್ಳು ಎಂದು ಖಂಡನೆ ವ್ಯಕ್ತಪಡಿಸಿದ ಇಸ್ಕಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts