More

    ಮೇನಕಾ ಗಾಂಧಿ ಹೇಳಿಕೆ ಸುಳ್ಳು ಎಂದು ಖಂಡನೆ ವ್ಯಕ್ತಪಡಿಸಿದ ಇಸ್ಕಾನ್​

    ನವದೆಹಲಿ: ಪ್ರಾಣಿ ಹಕ್ಕುಗಳ ಕಾರ್ಯಕರ್ತೆ, ಪರಿಸರವಾದಿ ಹಾಗೂ ಸಂಸದೆ ಮೇನಕಾ ಗಾಂಧಿ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಸುಳ್ಳು ಎಂದು ನಿರಾಕರಿಸಿರುವ ಇಸ್ಕಾನ್, ಆಕೆಯ ಹೇಳಿಕೆ ಬಗ್ಗೆ ಖಂಡನೆಯನ್ನೂ ವ್ಯಕ್ತಪಡಿಸಿದೆ.

    ಇಸ್ಕಾನ್​ನ ಅನಂತಪುರ ಗೋಶಾಲೆಯ ಬಗ್ಗೆ ಮೇನಕಾ ಗಾಂಧಿ ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ. ಆಶ್ರಮದ 246 ಹಸುಗಳು ಹಾಲು ನೀಡುತ್ತಿಲ್ಲವಾದರೂ ಅವುಗಳನ್ನು ಉಳಿದ ಹಸುಗಳಂತೆಯೇ ಪ್ರೀತಿಯಿಂದ ನೋಡಿಕೊಳ್ಳಲಾಗುತ್ತಿದೆ ಎಂದು ಇಸ್ಕಾನ್​ನ ಕಮ್ಯುನಿಕೇಷನ್ಸ್ ಡೈರೆಕ್ಟರ್​ ವೃಜೇಂದ್ರ ನಂದನ್ ದಾಸ್ ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೇನಕಾ ಗಾಂಧಿ, ಇಸ್ಕಾನ್​ ವಂಚಕ ಸಂಸ್ಥೆ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇಸ್ಕಾನ್ ಗೋಶಾಲೆಗಳನ್ನು ನಡೆಸುತ್ತಿದ್ದು, ಆ ಮೂಲಕ ಸರ್ಕಾರದಿಂದ ಜಮೀನು ಮತ್ತಿತರ ಸೌಲಭ್ಯಗಳನ್ನು ಪಡೆಯುತ್ತಿದೆ. ಆದರೆ ಇಸ್ಕಾನ್ ಹಸುಗಳನ್ನು ಕಟುಕರಿಗೆ ಮಾರುತ್ತಿದೆ ಎಂದು ಆಕೆ ಹೇಳಿದ್ದರು.

    ಒಂದು ಪೊಂಗಲ್ ತಿನ್ನುವ ಸಮಯದಲ್ಲಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬಹುದಿತ್ತು: ಬಿಜೆಪಿ ಹೀಗಂದಿದ್ದೇಕೆ?

    ಕಾವೇರಿ ನದಿ ನೀರು ವಿವಾದ: ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ ಎಂದ ಸಿಎಂ ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts