More

    ಕೊಲೆ ಆರೋಪಿ ಸುಶೀಲ್​ ಕುಮಾರ್​ ಒಲಿಂಪಿಕ್ಸ್​ ಪದಕ, ಪದ್ಮಶ್ರೀ, ಖೇಲ್​ರತ್ನ ಪ್ರಶಸ್ತಿ ವಾಪಸ್​ ಕೊಡ್ಬೇಕಾ?

    ನವದೆಹಲಿ: ಒಲಿಂಪಿಕ್ಸ್​ ಇತಿಹಾಸದಲ್ಲಿ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಅವಳಿ ಪದಕ ಜಯಿಸಿದ ಭಾರತದ ಏಕೈಕ ಕ್ರೀಡಾಪಟು ಸುಶೀಲ್​ ಕುಮಾರ್​. 2008ರ ಬೀಜಿಂಗ್​ ಒಲಿಂಪಿಕ್ಸ್​ನಲ್ಲಿ ಕಂಚು ಮತ್ತು 2012ರ ಲಂಡನ್​ ಒಲಿಂಪಿಕ್ಸ್​ನಲ್ಲಿ ರಜತ ಪದಕ ಜಯಿಸಿದ್ದರು. ಆದರೆ ಕುಸ್ತಿಪಟು ಸುಶೀಲ್​ ಕುಮಾರ್​ ಇದೀಗ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದಾರೆ. ಹಾಗಾದರೆ ಈ ಪ್ರಕರಣದಲ್ಲಿ ತಪ್ಪಿತಸ್ಥರಾದರೆ ಸುಶೀಲ್​ ಕುಮಾರ್​ ತಾವು ಗೆದ್ದ ಒಲಿಂಪಿಕ್ಸ್​ ಪದಕಗಳನ್ನು ವಾಪಸ್​ ನೀಡಬೇಕಾಗುತ್ತದೆಯೇ ಎಂಬ ಚರ್ಚೆಯೊಂದು ನಡೆಯುತ್ತಿದೆ.

    ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿಯ (ಐಒಸಿ) ಸಾಮಾನ್ಯವಾಗಿ ಕ್ರೀಡಾಪಟುಗಳು ಉದ್ದೀಪನ ಮದ್ದು ಸೇವನೆ ಪ್ರಕರಣಗಳಲ್ಲಿ ಸಿಕ್ಕಿಬಿದ್ದಾಗ ಅವರು ಗೆದ್ದ ಒಲಿಂಪಿಕ್ಸ್​ ಪದಕಗಳನ್ನು ವಾಪಸ್​ ಪಡೆಯುತ್ತದೆ. ಆದರೆ ಕ್ರಿಮಿನಲ್​ ಅಪರಾಧಗಳಿಗೂ ಆ ರೀತಿ ಒಲಿಂಪಿಕ್ಸ್​ ಪದಕಗಳನ್ನು ವಾಪಸ್​ ಪಡೆಯುವ ಯಾವುದೇ ನಿಯಮವನ್ನು ಐಒಸಿ ಹೊಂದಿಲ್ಲ. ಹೀಗಾಗಿ ಸುಶೀಲ್​ ಒಲಿಂಪಿಕ್ಸ್​ ಪದಕಗಳನ್ನು ಹಿಂದಿರುಗಿಸಬೇಕಾಗಿಲ್ಲ ಎನ್ನಲಾಗುತ್ತಿದೆ.

    ಇದನ್ನೂ ಓದಿ: 100 ಕೆಜಿ ತೂಕದ ಈ ಕ್ರಿಕೆಟಿಗ ಪಾಕ್​ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾದ ಸೃಷ್ಟಿ!

    ಪ್ಯಾರಾಲಿಂಪಿಕ್ಸ್​ನಲ್ಲಿ 6 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕ ಜಯಿಸಿರುವ ದಣ ಆಫ್ರಿಕಾದ ಬ್ಲೇಡ್​ ರನ್ನರ್​ ಆಸ್ಕರ್​ ಪಿಸ್ಟೋರಿಯಸ್​ 2014ರಲ್ಲಿ ಗೆಳತಿ ರೀವಾ ಸ್ಟೀನ್​ಕೆಂಪ್​ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿದ್ದರು. ಈ ಪ್ರಕರಣದಲ್ಲಿ ತಪ್ಪಿತಸ್ಥರೂ ಆಗಿರುವ ಪಿಸ್ಟೋರಿಯಸ್​ ಇನ್ನೂ ಜೈಲಿನಲ್ಲೇ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ಅವರ ಪ್ಯಾರಾಲಿಂಪಿಕ್​ ಪದಕಗಳನ್ನು ವಾಪಸ್​ ಪಡೆಯಲಾಗಿಲ್ಲ. ಇದೇ ರೀತಿ ಸುಶೀಲ್​ ಕೂಡ ಹಾಲಿ ಪ್ರಕರಣದಲ್ಲಿ ಮುಂದೆ ಕಾರಾಗೃಹ ಶಿಕ್ಷೆಗೆ ಗುರಿಯಾದರೂ ಒಲಿಂಪಿಕ್ಸ್​ ಪದಕಗಳನ್ನು ಹಿಂದಿರುಗಿಸಬೇಕಾಗಿಲ್ಲ ಎನ್ನಲಾಗುತ್ತಿದೆ.

    ಖೇಲ್​ರತ್ನ, ಪದ್ಮಶ್ರೀ ವಾಪಸ್​?

    ಪದಕಗಳನ್ನು ವಾಪಸ್​ ಪಡೆಯುವ ಐಒಸಿ ನಿಯಮಗಳಲ್ಲೂ ಕ್ರಿಮಿನಲ್​ ಅಪರಾಧಗಳ ಬಗ್ಗೆ ಯಾವುದೇ ಉಲ್ಲೇಖಗಳಿಲ್ಲ. ಆದರೆ ಪ್ರಕರಣದಿಂದಾಗಿ ಈಗಾಗಲೆ ಭಾರತೀಯ ಕ್ರೀಡಾಲೋಕ ಮತ್ತು ಕುಸ್ತಿ ವಲಯ ಸಾಕಷ್ಟು ತಲೆತಗ್ಗಿಸುವಂತೆ ಮಾಡಿರುವ ಸುಶೀಲ್​ ಕುಮಾರ್​, ತಮ್ಮ ಕ್ರೀಡಾ ಸಾಧನೆಗಳಿಗಾಗಿ ಪಡೆದುಕೊಂಡಿರುವ ಖೇಲ್​ರತ್ನ, ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸಬೇಕಾದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಯಾಕೆಂದರೆ, ಹಾಲಿ ನಿಯಮ ಪ್ರಕಾರ ಇವುಗಳನ್ನು ವಾಪಸ್​ ಪಡೆಯುವ ಅಧಿಕಾರ ರಾಷ್ಟ್ರಪತಿ ಮತ್ತು ಕ್ರೀಡಾ ಸಚಿವಾಲಯಕ್ಕೆ ಇದೆ.

    ಪದ್ಮಶ್ರೀ ಪ್ರಶಸ್ತಿಯ ನಿಯಮ ಪ್ರಕಾರ, ಈ ಪ್ರಶಸ್ತಿ ಪುರಸ್ಕೃತರಾದ ಯಾವುದೇ ವ್ಯಕ್ತಿಯಿಂದ ಆ ಪ್ರಶಸ್ತಿಯನ್ನು ವಾಪಸ್​ ಪಡೆಯುವ ಮತ್ತು ಪ್ರಶಸ್ತಿ ಪುರಸ್ಕೃತರ ಪಟ್ಟಿಯಿಂದ ಅವರ ಹೆಸರನ್ನು ಅಳಿಸಿಹಾಕುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಮಾಜಿ ಗೃಹ ಕಾರ್ಯದರ್ಶಿ ಎನ್​. ಗೋಪಾಲಸ್ವಾಮಿ ಅವರು ನೀಡಿರುವ ವಿವರಣೆಗಳ ಪ್ರಕಾರ, ಒಂದೊಮ್ಮೆ ಚಾರ್ಜ್​ಶೀಟ್​ ಸಲ್ಲಿಕೆಯಾದ ಬಳಿಕ ಸುಶೀಲ್​ಗೆ ನೀಡಿರುವ ಪ್ರಶಸ್ತಿಗಳನ್ನು ರಾಷ್ಟಪತಿ ರದ್ದುಗೊಳಿಸಬಹುದು. ಬಳಿಕ ಪ್ರಕರಣದಲ್ಲಿ ಅವರು ನಿರ್ದೋಷಿಯಾದರೆ, ಪ್ರಶಸ್ತಿ ರದ್ದುಗೊಳಿಸಿದ ಆದೇಶವನ್ನು ರಾಷ್ಟ್ರಪತಿ ವಾಪಸ್​ ಪಡೆಯಬಹುದು. ಸುಶೀಲ್​ ಕುಮಾರ್​ 2011ರಲ್ಲಿ ಪದ್ಮಶ್ರೀ, 2009ರಲ್ಲಿ ಖೇಲ್​ರತ್ನ ಮತ್ತು 2006ರಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದರು.

    ಟೆಸ್ಟ್​ ವಿಶ್ವಕಪ್​ ಫೈನಲ್​ ಪಂದ್ಯದ ಫಾಲೋಆನ್​ ನಿಯಮದ ಬಗ್ಗೆ ಐಸಿಸಿ ಸ್ಪಷ್ಟನೆ

    ಗರ್ಲ್​ಫ್ರೆಂಡ್​​ ಜತೆ ಬ್ರೇಕ್​ಅಪ್​ ಮಾಡಿಕೊಂಡರೇ ಕ್ರಿಕೆಟಿಗ ಇಶಾನ್​ ಕಿಶನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts