More

    ಪೈಲ್ವಾನ್​ಗಳಿಗೆ ನೀಡುವ ಆಹಾರವೇ ಬೇಕೆಂದ ಸುಶೀಲ್​, ಪೊಲೀಸ್​ ಕಸ್ಟಡಿಯಲ್ಲೇ ಬರ್ತ್​ಡೇ!

    ನವದೆಹಲಿ: ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸರಿಂದ ಬಂಧಿತರಾಗಿರುವ ಒಲಿಂಪಿಕ್ಸ್​ ಅವಳಿ ಪದಕ ವಿಜೇತ ಕುಸ್ತಿಪಟು ಸುಶೀಲ್​ ಕುಮಾರ್​, ಲಾಕ್​ಅಪ್​ನಲ್ಲೂ ತಮಗೆ ಪೈಲ್ವಾನರಿಗೆ ನೀಡಲಾಗುವ ಪೌಷ್ಠಿಕ ಆಹಾರಗಳನ್ನೇ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದು, ಪೊಲೀಸ್​ ಮೆಸ್​ನಲ್ಲಿ ಲಭ್ಯವಿರುವ ಆಹಾರಗಳನ್ನೇ ನೀಡಿದ್ದಾರೆ ಎನ್ನಲಾಗಿದೆ.

    ಇನ್ನು ಸುಶೀಲ್​ ಕುಮಾರ್​ ಬುಧವಾರ 39ನೇ ಜನ್ಮದಿನದ ಸಂಭ್ರಮದಲ್ಲಿರಬೇಕಾಗಿತ್ತು. ಆದರೆ ಕ್ರೈಮ್​​ ಬ್ರಾಂಚ್​ ತನಿಖೆ ಎದುರಿಸುತ್ತಿರುವ ಸುಶೀಲ್​ ಲಾಕ್​ಅಪ್​ನಲ್ಲೇ ಜನ್ಮದಿನವನ್ನು ಕಳೆಯಬೇಕಾಯಿತು. ಅವರು ಸದ್ಯ 6 ದಿನಗಳ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಜನ್ಮದಿನದಂದು ಸುಶೀಲ್​ ಕುಮಾರ್​ ಹೆತ್ತವರು ಅವರನ್ನು ಭೇಟಿಯಾಗಲು ಬಯಸಿದರೂ, ಪೊಲೀಸರು ಅನುಮತಿ ನೀಡಲಿಲ್ಲ. ತಂದೆ-ತಾಯಿ ನೀಡಿದ ಜನ್ಮದಿನದ ಶುಭಾಶಯವನ್ನು ನಾವೇ ಸುಶೀಲ್​ಗೆ ತಲುಪಿಸಿದೆವು ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಟೆಸ್ಟ್​ ವಿಶ್ವಕಪ್ ಫೈನಲ್​ನಲ್ಲಿ 4 ವಿಕೆಟ್​ ಕಬಳಿಸಿದರೆ ಅಶ್ವಿನ್​ ಹೊಸ ದಾಖಲೆ!

    ದೆಹಲಿಯ ಛತ್ರಶಾಲಾ ಕ್ರೀಡಾಂಗಣದ ಹೊರಗೆ ನಡೆದ 23 ವರ್ಷದ ಪೈಲ್ವಾನ್​ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಸುಶೀಲ್​ ಕುಮಾರ್​ ತನಿಖೆಗೆ ಸರಿಯಾದ ಸಹಕಾರ ನೀಡುತ್ತಿಲ್ಲ ಎಂದೂ ದೂರಲಾಗುತ್ತಿದೆ. ಪೊಲೀಸರು ಕೇಳುವ ಹಲವು ಪ್ರಶ್ನೆಗಳಲ್ಲಿ ಕೆಲವಕ್ಕೆ ಮಾತ್ರ ಅವರು ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಮಾನಸಿಕ ವೈದ್ಯರ ನೆರವು ಕೋರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 2008 ಮತ್ತು 2012ರ ಒಲಿಂಪಿಕ್ಸ್​ನಲ್ಲಿ ಕ್ರಮವಾಗಿ ಕಂಚು ಮತ್ತು ಬೆಳ್ಳಿ ಜಯಿಸಿದ್ದ ಸುಶೀಲ್​, ಒಲಿಂಪಿಕ್ಸ್​ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ 2 ಪದಕ ಜಯಿಸಿದ ದೇಶದ ಏಕಮಾತ್ರ ಕ್ರೀಡಾಪಟುವೆನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts