More

    ಕೋಚ್​ ಆಗಿ ರಮೇಶ್​ ಪವಾರ್​ ಮರುನೇಮಕದ ಬಗ್ಗೆ ಮಿಥಾಲಿ ರಾಜ್​ ಏನಾಂತಾರೆ ಗೊತ್ತೇ?

    ನವದೆಹಲಿ: 2018ರಲ್ಲಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್​ ತಂಡದ ಕೋಚ್​ ಆಗಿದ್ದ ಮಾಜಿ ಸ್ಪಿನ್ನರ್​ ರಮೇಶ್​ ಪವಾರ್​, ಏಕದಿನ ತಂಡದ ನಾಯಕಿ ಹಾಗೂ ಅನುಭವಿ ಬ್ಯಾಟುಗಾತಿರ್ ಮಿಥಾಲಿ ರಾಜ್​ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಹುದ್ದೆ ಕಳೆದುಕೊಂಡಿದ್ದರು. ಇದೀಗ ಮಿಥಾಲಿ ರಾಜ್​ ಏಕದಿನ ತಂಡದ ನಾಯಕಿಯಾಗಿ ಮುಂದುವರಿದಿರುವ ನಡುವೆಯೂ ರಮೇಶ್​ ಪವಾರ್​ ಇತ್ತೀಚೆಗೆ ಕೋಚ್​ ಆಗಿ ಮರುನೇಮಕಗೊಂಡಿದ್ದಾರೆ. ಈಗ ಮತ್ತೆ ರಮೇಶ್​ ಪವಾರ್​ ಜತೆಗೆ ಕಾರ್ಯನಿರ್ವಹಿಸುವ ಬಗ್ಗೆ ಮಿಥಾಲಿ ರಾಜ್​ ಏನಂತಾರೆ ಗೊತ್ತೇ?

    2022ರ ಮಹಿಳೆಯರ ಏಕದಿನ ವಿಶ್ವಕಪ್​ಗೆ ಬಲಿಷ್ಠ ತಂಡವನ್ನು ಕಟ್ಟುವ ಹೊಣೆ ಇದೀಗ ಮಿಥಾಲಿ ರಾಜ್​ ಮತ್ತು ರಮೇಶ್​ ಪವಾರ್​ ಇಬ್ಬರ ಮೇಲೆಯೂ ಇದೆ. ಹೀಗಾಗಿ ಇಬ್ಬರೂ ಈಗ ಮತ್ತೆ ಜತೆಯಾಗಿ ಕಾರ್ಯನಿರ್ವಹಿಸಬೇಕಾಗಿದ್ದು, ಹಿಂದಿನ ವಿವಾದಗಳನ್ನು ಮರೆತು ಕೆಲಸ ಮಾಡಬೇಕಾಗಿದೆ. ಆಗಿದ್ದೆಲ್ಲ ಆಗಿ ಹೋಯಿತು. ನಾವು ಮತ್ತೆ ಹಿಂದಕ್ಕೆ ಹೋಗಲಾರೆವು. ರಮೇಶ್​ ಪವಾರ್​ ಹೊಸ ಯೋಜನೆಗಳೊಂದಿಗೆ ಬರುವ ನಿರೀಕ್ಷೆಯಲ್ಲಿದ್ದೇನೆ. ನಾವಿಬ್ಬರೂ ಜತೆಯಾಗಿ ಹಡಗನ್ನು ಮುನ್ನಡೆಸಲಿದ್ದೇವೆ ಎಂದು ಮಿಥಾಲಿ ರಾಜ್​ ಇದೀಗ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: VIDEO | ಆರು ವರ್ಷದ ಬಾಲಕಿಯ ಬ್ಯಾಟಿಂಗ್​ ವಿಡಿಯೋ ವೈರಲ್​

    ಮುಂದಿನ ವರ್ಷ ವಿಶ್ವಕಪ್​ ನಡೆಯಲಿರುವುದರಿಂದ ನಾವಿಬ್ಬರೂ ಜತೆಯಾಗಿ ಇದೀಗ ಬಲಿಷ್ಠ ತಂಡವನ್ನು ಕಟ್ಟಬೇಕಾಗಿದೆ ಎಂದು ಮಿಥಾಲಿ ಹೇಳಿದ್ದಾರೆ. 2018ರಲ್ಲಿ ಟಿ20 ವಿಶ್ವಕಪ್​ನ ಉಪಾಂತ್ಯ ಪಂದ್ಯದ ವೇಳೆ ಮಿಥಾಲಿ ರಾಜ್​ ಅವರನ್ನು ರಮೇಶ್​ ಪವಾರ್​ ಆಡುವ ಬಳಗದಿಂದ ಹೊರಗಿಟ್ಟಿದ್ದರು. ಇದರಿಂದ ಸಿಟ್ಟಾಗಿದ್ದ ಮಿಥಾಲಿ, ರಮೇಶ್​ ಪವಾರ್​ ತಂಡದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿ ಬಿಸಿಸಿಐಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಪವಾರ್​ ಅವರನ್ನು ಬಿಸಿಸಿಐ ವಜಾಗೊಳಿಸಿತ್ತು.

    ಮತ್ತೆ ಸುದ್ದಿಯಲ್ಲಿದೆ ಧೋನಿಯ ಸಾಲ್ಟ್​ ಆ್ಯಂಡ್​ ಪೆಪ್ಪರ್​ ಲುಕ್​!

    ಪತ್ನಿಯ ಬ್ಲರ್​ ಚಿತ್ರಕ್ಕೆ ಟ್ರೋಲ್​, ಇರ್ಫಾನ್​ ಪಠಾಣ್​ ನೀಡಿದ ಉತ್ತರವೇನು ಗೊತ್ತೇ?

    ವಿಶ್ವ ಟೆಸ್ಟ್ ಫೈನಲ್‌ಗೆ 6ನೇ ದಿನ? ಫಲಿತಾಂಶ ಬರದಿದ್ದರೆ ಹೆಚ್ಚುವರಿ ದಿನ ಆಟವಾಡಿಸಲು ಚಿಂತನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts