ತಾರ್ಕಿಕ ಅಂತ್ಯಕ್ಕಿಂತ, ಸತ್ಯ ಬಯಲಾಗಬೇಕು!; ಸುಶಾಂತ್ ಪ್ರಕರಣಕ್ಕೆ ಅನುಪಮ್ ಖೇರ್ ಬೆಂಬಲ

Anu
Published on

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮೌನ ಮುರಿದಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಬಾಲಿವುಡ್‌ನ ಘಟಾನುಘಟಿಗಳ ಬೆವರಿಳಿಸಿದ ಈ ಪ್ರಕರಣ, ಇಂದಿಗೂ ಅದೇ ಕಾವಿನಲ್ಲಿದೆ. ನಿತ್ಯ ಒಂದಲ್ಲ ಒಂದು ಬೆಳವಣಿಗೆಗಳಿಗೆ ಸುಶಾಂತ್ ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಳ್ಳುತ್ತಿದೆ. ಸತ್ಯದ ದರ್ಶನ ಆಗಲೇಬೇಕು ಎಂದು ಇಡೀ ದೇಶವೇ ಪಟ್ಟು ಹಿಡಿದಿದೆ. ಇದೀಗ ಅದೇ ಮಾತನ್ನು ನಟ ಅನುಪಮ್ ಖೇರ್ ಹೇಳಿದ್ದಾರೆ.

‘ಜೂನ್ 14ರಿಂದ ಈ ತನಕ ಸುಶಾಂತ್ ಸಾವಿನ ವಿಚಾರ ಸದ್ದು ಮತ್ತು ಸುದ್ದಿ ಮಾಡುತ್ತಿದೆ. ಹಾಗಂತ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಸಾಕಷ್ಟು ಮಂದಿ ಈ ಬಗ್ಗೆ ಮಾತನಾಡುತ್ತಿಲ್ಲ. ನನಗೂ ಏನು ಮಾತನಾಡಬೇಕೆಂದು ಗೊತ್ತಿಲ್ಲ. ಆದರೂ, ಈ ಪ್ರಕರಣದ ಸತ್ಯ ಬಯಲಾಗಲೇಬೇಕು. ಏಕೆಂದರೆ, ಸುಶಾಂತ್ ಬೇರೊಬ್ಬರ ಮಗ, ಬೇರೊಬ್ಬರ ಸಹೋದರ. ಆತನ ನಟನೆ ನಿಜಕ್ಕೂ ಅದ್ಬುತ. ಬಗೆಬಗೆ ಕೋನಗಳಲ್ಲಿ ಪ್ರಕರಣ ಮಗ್ಗಲು ಬದಲಿಸುತ್ತಿದೆ. ಪಿತೂರಿಗಳೂ ನಡೆದಿರುವ ಹಾಗೆ ಕಂಡು ಬರುತ್ತಿದೆ. ಕೊನೆಗೆ ಇದು ತಾರ್ಕಿಕ ಅಂತ್ಯ ಕಾಣುತ್ತದೆ. ಹಾಗಾಗಿ ನಮಗೆ ಸತ್ಯ ಗೊತ್ತಾಗಬೇಕು’ ಎಂದು ಎರಡು ನಿಮಿಷದ ವಿಡಿಯೋ ಮಾಡಿ ಟ್ವಿಟ್ ಮಾಡಿದ್ದಾರೆ ಅನುಪಮ್.

ಇನ್ನು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಿಹಾರ ಪೊಲೀಸ್ ಮುಂಬೈನಲ್ಲಿ ಒಂದಷ್ಟು ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಈ ನಡುವೆ, ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಕರಣವನ್ನು ಸಿಬಿಐಗೆ ನೀಡುವುದಕ್ಕೆ ಶಿಾರಸು ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net