More

    ಅರೆಕ್ಷಣದಲ್ಲಿ ನಡೆದ ದುರಂತ ನರಕವನ್ನೇ ಸೃಷ್ಟಿಸಿತು..

    ನವದೆಹಲಿ: ‘ಭೀಕರ ವಿಮಾನ ದುರಂತ ಕೇವಲ 5-10 ಸೆಕೆಂಡುಗಳು ನಡೆದುಹೋಯಿತು. ಸಹಾಯಕ್ಕಾಗಿ ಕೂಗುತ್ತಿದ್ದ ವಿಮಾನ ಪ್ರಯಾಣಿಕರಿಗೆ ಯಾರೊಬ್ಬರೂ ಸಹಾಯ ನೀಡಲು ಸಾಧ್ಯವಾಗಲಿಲ್ಲ. ‘ ಇದು ಕೋಳಿಕ್ಕೋಡ್ ಭೀಕರ ವಿಮಾನ ದುರಂತದಿಂದ ಪವಾಡ ಸದೃಶ್ಯವಾಗಿ ಪಾರಾಗಿ ಬದುಕುಳಿದ ವ್ಯಕ್ತಿ ಬಿಚ್ಚಿಟ್ಟ ಚಿತ್ರಣ.
    ಅಪಘಾತದಿಂದಾದ ಆಘಾತದಿಂದ ಇನ್ನೂ ಹೊರಬರದೇ ಭೀಕರ ಅಗ್ನಿಪರೀಕ್ಷೆಯ ಅನುಭವ ವಿವರಿಸಿದ ಅವರು, 5 ರಿಂದ 10 ಸೆಕೆಂಡುಗಳಲ್ಲಿ ಎಲ್ಲವೂ ನಡೆದುಹೋಯಿತು. ಜನ ತುರ್ತು ನಿರ್ಗಮನ ಬಾಗಿಲಿನಿಂದ ಪಾರಾಗಲು ಯತ್ನಿಸುತ್ತಿದ್ದರು ಎಂದು ಹೇಳಿದರು.

    ಇದನ್ನೂ ಓದಿ: ಏರ್​ ಇಂಡಿಯಾ ವಿಮಾನ ಅಪಘಾತ: ಪ್ರಯಾಣಿಕರಿಬ್ಬರಲ್ಲಿ ಕರೊನಾ ದೃಢ, ಸಿಐಎಸ್​ಎಫ್ ಸಿಬ್ಬಂದಿ ಕ್ವಾರಂಟೈನ್​

    “ರಕ್ಷಣಾ ತಂಡವು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಎಲ್ಲರಿಗೂ ಸಹಾಯ ಮಾಡಲು ಪಯತ್ನಿಸುತ್ತಿದ್ದರೂ ಮಳೆಯಿಂದಾಗಿ ಅವರೂ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿತ್ತು” ಎಂದು ತಿಳಿಸಿದರು.
    ಎರಡು ಆಸ್ಪತ್ರೆಗಳು ಗಾಯಳುಗಳಿಂದ ತುಂಬಿದ್ದರಿಂದ ಗಾಯಾಳುಗಳಿದ್ದ ಮತ್ತೊಂದು ವಾಹನವನ್ನು ಬಿಎಂ ಆಸ್ಪತ್ರೆಯತ್ತ ಸಾಗಿಸಲಾಯಿತು.
    ಮಲಪ್ಪುರಂ ಮತ್ತು ಕೋಳಿಕ್ಕೋಡ್ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಅಂದಾಜು 18 ಜನರು ಮೃತಪಟ್ಟಿದ್ದು, 149 ಜನರು ಚಿಕಿತ್ಸೆಯ ಪಡೆಯುತ್ತಿದ್ದಾರೆ.

    ಇದನ್ನೂ ಓದಿ:  ಮದುವೆ ಮಾತುಕತೆ ವಿಫಲ; ಹುಡುಗಿಯ ತಂದೆಗೆ ಇರಿದ ಹುಡುಗನ ತಂದೆ

    ಸಾವನ್ನಪ್ಪಿದ 18 ಜನರಲ್ಲಿ 14 ವಯಸ್ಕರು ಮತ್ತು ನಾಲ್ವರು ಮಕ್ಕಳು, .23 ಜನ ಗಂಭೀರ ಸ್ಥಿತಿಯಲ್ಲಿದ್ದು, ಮಲಪ್ಪುರಂ ಮತ್ತು ಕೋಳಿಕೋಡ್ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
    ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೇರಳ ಸರ್ಕಾರ 10 ಲಕ್ಷ ರೂ. ಪರಿಹಾರ ಧನ ಘೋಷಿಸಿದೆ.
    ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಹಲವಾರು ಸಚಿವರು ಸೇರಿದಂತೆ ಉನ್ನತ ರಾಜಕಾರಣಿಗಳು ಕರಿಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

    ಭಾರತದ ನೂತನ ಸಿಎಜಿ ಆಗಿ ಜಿ.ಸಿ. ಮುರ್ಮು ಪ್ರಮಾಣ ವಚನ ಸ್ವೀಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts