More

    ಭಾರತದ ನೂತನ ಸಿಎಜಿ ಆಗಿ ಜಿ.ಸಿ. ಮುರ್ಮು ಪ್ರಮಾಣ ವಚನ ಸ್ವೀಕಾರ

    ನವದೆಹಲಿ: ಗಿರೀಶ್ ಚಂದ್ರ ಮುರ್ಮು ಶನಿವಾರ ಭಾರತದ ನೂತನ ಸಿಎಜಿ ಆಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಅಧಿಕಾರ ವಹಿಸಿಕೊಂಡ ಬಳಿಕ ಅವರು ಸಿಎಜಿ ಕಚೇರಿಯಲ್ಲಿ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.
    ಮುರ್ಮು ತೀರ ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕೆಳಗಿಳಿದಿದ್ದು, ಅವರ ಸ್ಥಾನಕ್ಕೆ ಕೇಂದ್ರದ ಮಾಜಿ ಸಚಿವ ಮನೋಜ್ ಸಿನ್ಹಾ ಆಯ್ಕೆಯಾಗಿದ್ದಾರೆ.

    ಇದನ್ನೂ ಓದಿ:  ಕರಿಪ್ಪೂರ್ ವಿಮಾನ ನಿಲ್ದಾಣದ ರನ್​ ವೇ 10 ಸುರಕ್ಷಿತವಾಗಿಲ್ಲ: 2011ರಲ್ಲೇ ತಜ್ಞರ ತಂಡದ ಎಚ್ಚರಿಕೆ

    1978ರ ಬ್ಯಾಚ್​​ನ ರಾಜಸ್ಥಾನ ಕೇಡರ್​​ನ ಐಎಎಸ್ ಅಧಿಕಾರಿ ರಾಜೀವ್ ಮೆಹರಿಷಿ ಅವರ ಅಧಿಕಾರ ಆಗಸ್ಟ್ 7 ಕ್ಕೆ ಪೂರ್ಣಗೊಂಡಿದ್ದು, ಅವರ ನಂತರ ಮುರ್ಮು ಅಧಿಕಾರ ಸ್ವೀಕರಿಸಿದ್ದಾರೆ.
    1985 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಮುರ್ಮು ಬುಧವಾರ ಏಕಾಏಕಿ ರಾಜೀನಾಮೆ ಸಲ್ಲಿಸಿದರು.
    ಗುಜರಾತ್ ಕೇಡರ್​​​ನ ಐಎಎಸ್ ಅಧಿಕಾರಿ, 60 ವರ್ಷ ವಯಸ್ಸಿನ ಮುರ್ಮು, ಕಳೆದ ವರ್ಷ ಅಕ್ಟೋಬರ್ 29 ರಂದು ರಾಜ್ಯವನ್ನು ಜಮ್ಮು, ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದರು. ಭಾರತದ ಸಿಎಜಿ ಆಗಿ ಮುರ್ಮು 2024ರ ನವೆಂಬರ್ 20ರವರೆಗೂ ಮುಂದುವರೆಯಲಿದ್ದಾರೆ.

    ನಾಪತ್ತೆಯಾಗಿರುವ ಸೈನಿಕನ ರಕ್ತ ಸಿಕ್ತ ಬಟ್ಟೆಗಳು ಪತ್ತೆ: ಅತನನ್ನು ಅಪಹರಿಸಿದ್ದು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts