More

    ಮಹಿಳೆಯ ಕೈ ಮೇಲೆ ಬೆಳೆದ ಬದಲಿ ಮೂಗಿನ ಕಸಿ ಚಿಕಿತ್ಸೆ ಯಶಸ್ವಿ! ವೈದ್ಯಲೋಕದ ಚಮತ್ಕಾರವಿದು…

    ಪ್ಯಾರಿಸ್​: ಮಹಿಳೆಯ ಕೈಮೇಲೆ ಯಶಸ್ವಿಯಾಗಿ ಬೆಳೆಯಲಾದ ಬದಲಿ ಮೂಗಿನ ರಚನೆಯನ್ನು ಆಕೆಯ ಮುಖಕ್ಕೆ ಕಸಿ (Nose Transplant) ಮಾಡುವ ಮೂಲಕ ಫ್ರಾನ್ಸ್ (France)​ ಸರ್ಜನ್​ಗಳು ವೈದ್ಯಕೀಯ ಲೋಕದಲ್ಲಿ ಚಮತ್ಕಾರವೊಂದನ್ನು ಸೃಷ್ಟಿ ಮಾಡಿದ್ದಾರೆ.

    ಟೌಲೌಸ್ ಮೂಲದ ಮಹಿಳೆ ಮೂಗಿನ ಕ್ಯಾವಿಟಿ ಕ್ಯಾನ್ಸರ್​ (nasal cavity cancer)ನಿಂದ ಬಳಲುತ್ತಿದ್ದಳು. 2013ರಿಂದಲೂ ರೆಡಿಯೋಥೆರಪಿ (Radiotherapy) ಮತ್ತು ಕಿಮೋಥೆರಪಿ​ (Chemotherapy) ಚಿಕಿತ್ಸೆಯನ್ನು ಪಡೆಯುತ್ತಿದ್ದಳು. ಇದರ ಪರಿಣಾಮ ಆಕೆ ತನ್ನ ಮೂಗಿನ ಬಹುತೇಕ ಭಾಗವನ್ನು ಕಳೆದುಕೊಂಡಿದ್ದಳು. ಮೂಗಿನ ಮರು​ರ್ನಿರ್ಮಾಣದ ಪ್ರಯತ್ನಗಳ ವೈಫಲ್ಯಗಳ ಹೊರತಾಗಿಯೂ ವರ್ಷಗಳ ಕಾಲ ಆಕೆ ದೇಹದ ಪ್ರಮುಖ ಅಂಗಗಳಲ್ಲಿ ಒಂದಾದ ಮೂಗು ಇಲ್ಲದೆಯೇ ಬದುಕಿದ್ದಳು. ಇದೀಗ ಫ್ರಾನ್ಸ್​ ಸರ್ಜನ್​ಗಳು ವೈದ್ಯಕೀಯ ಲೋಕದಲ್ಲಿ ಅಚ್ಚರಿಯನ್ನೇ ಸೃಷ್ಟಿ ಮಾಡಿದ್ದು, ಮಹಿಳೆಯ ಕೈ ಮೇಲೆಯೇ ಬೆಳೆಯಲಾದ ಬದಲಿ ಮೂಗಿನ ರಚನೆಯನ್ನು ಆಕೆಗೆ ಕಸಿ ಮಾಡಲಾಗಿದೆ. ಇದೀಗ ಹೊಸ ಮೂಗನ್ನು ಪಡೆದಿರುವ ಮಹಿಳೆ ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾಳೆ.

    ಈವನಿಂಗ್​ ಸ್ಟ್ಯಾಂಡರ್ಡ್ ಮಾಧ್ಯಮದ ಪ್ರಕಾರ, ಕಾರ್ಟಿಲೆಜ್ (ಮೃದು ಎಲುಬು) ಅನ್ನು ಬದಲಿಸಲು 3D-ಮುದ್ರಿತ ಜೈವಿಕ ವಸ್ತುಗಳಿಂದ ತಯಾರಿಸಿದ ಕಸ್ಟಮ್ ಮೂಗನ್ನು ಮಹಿಳೆಯ ಮುಂದೋಳಿನ ಮೇಲೆ ಅಳವಡಿಸಲಾಯಿತು. ನಂತರ ವೈದ್ಯರು ಬದಲಿ ಮೂಗನ್ನು ಮುಚ್ಚಲು ಆಕೆಯ ಚರ್ಮವನ್ನೇ ನಾಟಿ ಮಾಡಿದರು. ಅದು ಬೆಳೆಯಲು ಸುಮಾರು 2 ತಿಂಗಳ ಕಾಲಾವಕಾಶವನ್ನು ನೀಡಲಾಯಿತು. ಮೂಗಿನ ರಚನೆ ಬೆಳೆದ ಬಳಿಕ ಅದನ್ನು ಆಕೆಯ ಮುಖಕ್ಕೆ ಕಸಿ ಮಾಡಲಾಗಿದೆ.

    ಟೌಲೌಸ್ ಯೂನಿವರ್ಸಿಟಿ ಹಾಸ್ಪಿಟಲ್ (CHU), ಮಹಿಳೆ ಮುಂದೋಳಿನ ಮೇಲೆ ಬೆಳೆಯುತ್ತಿರುವ ಮೂಗಿನ ಚಿತ್ರಗಳನ್ನು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಹಂಚಿಕೊಂಡಿದೆ. ಕಳೆದ ಮಂಗಳವಾರ (ನ.8) ಮಹಿಳೆಯ ಮುಖಕ್ಕೆ ಹೊಸ ಮೂಗನ್ನು ಯಶಸ್ವಿಯಾಗಿ ಕಸಿ ಮಾಡಲಾಗಿದೆ ಎಂದು ಆಸ್ಪತ್ರೆ ಪ್ರಕಟಿಸಿದೆ.

    ಬದಲಿ ಮೂಗು ಅಳವಡಿಸುವ ಪ್ರಕ್ರಿಯೆಯಲ್ಲಿ ವೈದ್ಯರು ಮೈಕ್ರೊಸರ್ಜರಿಯನ್ನು ಬಳಸಿದ್ದಾರೆ ಮತ್ತು ತೋಳಿನ ಚರ್ಮದಲ್ಲಿನ ರಕ್ತನಾಳಗಳನ್ನು ಮಹಿಳೆಯ ಮುಖದ ರಕ್ತನಾಳಗಳಿಗೆ ಸಂಪರ್ಕಿಸಿದ್ದಾರೆ. ಆಪರೇಷನ್​​ ನಡೆದ 10 ದಿನಗಳು ಮತ್ತು ಮೂರು ವಾರಗಳ ಕಾಲ ಪ್ರತಿಜೀವಕಗಳನ್ನು ಮಹಿಳೆಗೆ ನೀಡಿದ ಬಳಿಕ ಇದೀಗ ಆಕೆ ಆರಾಮಾಗಿದ್ದಾಳೆ.

    ದೇಹದ ದುರ್ಬಲವಾದ ಮತ್ತು ತುಂಬಾ ಸೂಕ್ಷ್ಮವಾದ ನಾಳೀಯ ಪ್ರದೇಶದಲ್ಲಿ ಈ ರೀತಿಯ ಬದಲಿ ಅಂಗ ನಿರ್ಮಾಣವು ಹಿಂದೆಂದೂ ನಡೆದಿಲ್ಲ. ಮೂಳೆ ಮರುನಿರ್ಮಾಣದಲ್ಲಿ ಪರಿಣತಿ ಹೊಂದಿರುವ ವೈದ್ಯಕೀಯ ಸಾಧನಗಳ ಬೆಲ್ಜಿಯಂ ತಯಾರಕರಾದ ಸೆರ್ಹಮ್ ಕಂಪನಿಯ ಸಹಯೋಗದೊಂದಿಗೆ ಇದು ಸಾಧ್ಯವಾಯಿತು ಎಂದು ಟೌಲೌಸ್ ಯೂನಿವರ್ಸಿಟಿ ಹಾಸ್ಪಿಟಲ್ ತಿಳಿಸಿದೆ. (ಏಜೆನ್ಸೀಸ್​)

    ಕರ್ನಾಟಕ ಮುಂಚೂಣಿ ಡಬಲ್ ತಾಕತ್ತು; ದೇಶದಲ್ಲಿಯೇ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿಕೆ

    VIDEO: ಜಲ ಬಂಧನದಲ್ಲೇ ವಿವಾಹ ಬಂಧನಕ್ಕೊಳಗಾದ ನವ ಜೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts