More

    4 ದಿನ ಫ್ರಾನ್ಸ್​ನಲ್ಲಿ ಸಿಲುಕಿದ್ದ ಭಾರತೀಯರಿದ್ದ ವಿಮಾನ ಮುಂಬೈಗೆ ಆಗಮನ! ತವರಿಗೆ ಬರಲು ಒಪ್ಪದ 25 ಮಂದಿ​

    ನವದೆಹಲಿ: ಮಾನವ ಕಳ್ಳಸಾಗಾಣೆ ಸಂಶಯದ ಮೇಲೆ ನಾಲ್ಕು ದಿನಗಳ ಕಾಲ ಫ್ರಾನ್ಸ್​ನಲ್ಲಿ ಸಿಲುಕಿದ್ದ ಸುಮಾರು 300 ಭಾರತೀಯರಿದ್ದ ಏರ್​ಬಸ್​ ಎ340 ವಿಮಾನ ಇಂದು (ಡಿ.26) ವಾಣಿಜ್ಯ ನಗರಿ ಮುಂಬೈನಲ್ಲಿ ಲ್ಯಾಂಡ್​ ಆಗಿದೆ.

    ರೋಮಾನಿಯಾ ಲೆಜೆಂಡ್​ ಏರ್​ಲೈನ್ಸ್​​ ಆಪರೇಟ್ ಮಾಡುವ ವಿಮಾನದಲ್ಲಿ 276 ಪ್ರಯಾಣಿಕರಿದ್ದರು ಮತ್ತು ಬಹುತೇಕರು ಭಾರತೀಯರು ಎಂದು ತಿಳಿದುಬಂದಿದೆ. ಪ್ಯಾರಿಸ್​ ಸಮೀಪದ ವಾಟ್ರಿ ವಿಮಾನ ನಿಲ್ದಾಣದಿಂದ ಟೇಕಾಫ್​ ಆಗಬೇಕಿದ್ದ ವಿಮಾನದ ಮೇಲೆ ಅನುಮಾನ ವ್ಯಕ್ತಪಡಿಸಿ, ಫ್ರೆಂಚ್​ ಅಧಿಕಾರಿಗಳನ್ನು ವಿಮಾನವನ್ನು ತಡೆದು, ಪ್ರವಾಸದ ಉದ್ದೇಶದ ಬಗ್ಗೆ ವಿಚಾರಣೆ ನಡೆಸಿದರು. ಮಾನವ ಕಳ್ಳಸಾಗಾಣೆ ಸಂಶಯ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಯಿತು.

    ಒಟ್ಟು ನಾಲ್ಕು ದಿನಗಳ ಕಾಲ ಫ್ರಾನ್ಸ್​ನಲ್ಲಿ ಹಾಲ್ಟ್​ ಆಗಿದ್ದ ವಿಮಾನ ನಿನ್ನೆ ತಡರಾತ್ರಿ 2.30ರ ಸುಮಾರಿಗೆ ವಾಟ್ರಿ ವಿಮಾನ ನಿಲ್ದಾಣದಿಂದ ಹೊರಟು ಇಂದು ನಸುಕಿನ ಜಾವ 4 ಗಂಟೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್​ ಆಗಿದೆ. ವಿಮಾನದಲ್ಲಿ ಒಟ್ಟು 276 ಪ್ರಯಾಣಿಕರಿದ್ದರು. ಅದರಲ್ಲಿ ಇಬ್ಬರು ಅಪ್ರಾಪ್ತರು ಸೇರಿದಂತೆ 25 ವ್ಯಕ್ತಿಗಳು ಆಶ್ರಯ ಕೋರಿ ಫ್ರೆಂಚ್ ನೆಲದಲ್ಲಿ ಉಳಿದರು ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇಂಧನ ತುಂಬಿಸಿಕೊಳ್ಳಲು ವಿಮಾನವು ಶುಕ್ರವಾರ ವಾಟ್ರಿಯಲ್ಲಿ ಇಳಿದಾಗ 303 ಭಾರತೀಯ ಪ್ರಯಾಣಿಕರಲ್ಲಿ 11 ಅಪ್ರಾಪ್ತ ವಯಸ್ಕರು ಇರುವುದು ಕಂಡುಬಂದಿತು. ಮಾನವ ಕಳ್ಳಸಾಗಾಣೆ ಸಂಶಯದ ಬಳಿಕ ನಾಲ್ಕು ದಿನಗಳ ಅಗ್ನಿಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರಿಗೆ ತಾತ್ಕಾಲಿಕ ಹಾಸಿಗೆಗಳು, ಶೌಚಾಲಯಗಳು, ಸ್ನಾನದ ವ್ಯವಸ್ಥೆ, ಊಟ ಮತ್ತು ಬಿಸಿ ಪಾನೀಯಗಳನ್ನು ವಾಟ್ರಿ ವಿಮಾನ ನಿಲ್ದಾಣದ ಸಭಾಂಗಣಗಳಲ್ಲಿ ಒದಗಿಸಲಾಯಿತು.

    ವಿಮಾನವು ನಿಕರಾಗುವಾಗೆ ಹೊರಟಿತ್ತು ಎಂದು ತಿಳಿದುಬಂದಿದೆ. ಯುನೈಟೆಡ್​ ಸ್ಟೇಟ್ಸ್​ನ ಮಧ್ಯ ಅಮೆರಿಕನ್ ರಾಷ್ಟ್ರಕ್ಕೆ ಆಶ್ರಯಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತೆರಳುತ್ತಾರೆ ಎಂದು ತಿಳಿದುಬಂದಿದೆ. ಯುಎಸ್​ ಕಸ್ಟಮ್ಸ್ ಮತ್ತು ಬಾರ್ಡರ್ ಪ್ಯಾಟ್ರೋಲ್ ಮಾಹಿತಿ ಪ್ರಕಾರ, ಭಾರತೀಯರು ಅಕ್ರಮವಾಗಿ ಯುಎಸ್​ ಪ್ರವೇಶಿಸಲು ಪ್ರಯತ್ನಿಸುವುದರಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 2023ರ ಆರ್ಥಿಕ ವರ್ಷದಲ್ಲಿ ಒಟ್ಟು 96,917 ಮಂದಿ ಯತ್ನಿಸಿರುವುದು ದಾಖಲಾಗಿದ. ಇದು ಹಿಂದಿನ ವರ್ಷಕ್ಕಿಂತ ಶೇ. 51.61 ರಷ್ಟು ಹೆಚ್ಚಾಗಿದೆ. (ಏಜೆನ್ಸೀಸ್​)

    ಮುದ್ರಾಂಕ ಇಲಾಖೆಗೆ ಕಾಯಕಲ್ಪ; ಹೆಚ್ಚುವರಿ ಡಿಐಜಿಆರ್, ಎಐಜಿಆರ್/ ಡಿಆರ್ ಹುದ್ದೆಗಳ ಸೃಜನೆಗೆ ಶಿಫಾರಸು

    ರಾರಾ ರಕ್ಕಮ್ಮಂಗೆ ಜೈಲಿನಿಂದಲೇ ಧಮಕಿ ಹಾಕಿದ ವಂಚಕ ! ಆಗಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts