More

    ಖಾತ್ರಿ ಕೆಲಸದ ಬಾಕಿ ವೇತನ ನೀಡಿ

    ಬೆಳಗಾವಿ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಕೂಲಿ ಕೆಲಸ ಮಾಡಿದವರಿಗೆ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ತಾಲೂಕಿನ ಸುಳೇಬಾವಿ ಗ್ರಾಪಂ ಆವರಣದಲ್ಲಿ ಕೂಲಿ ಕಾರ್ಮಿಕರು ಶನಿವಾರ ಪ್ರತಿಭಟನೆ ನಡೆಸಿದರು.

    ಕೂಲಿ ಕೆಲಸ ಮಾಡುವ ಗುದ್ದಲಿ, ಪಿಕಾಸು ಹಾಗೂ ಬುಟ್ಟಿಯೊಂದಿಗೆ ಮಹಿಳೆಯರು ಸೇರಿದಂತೆ ನೂರಾರು ಕಾರ್ಮಿಕರು ಪ್ರತಿಭಟಿಸಿದರು. ಕಳೆದ ನಾಲ್ಕೈದು ತಿಂಗಳಿಂದ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದೇವೆ. ಆದರೆ, ಈವರೆಗೂ ವೇತನ ನೀಡಿಲ್ಲ. ಈ ವಿಚಾರವಾಗಿ ಪಿಡಿಒ ಹಾಗೂ ಗ್ರಾಪಂ ಸಿಬ್ಬಂದಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವೇತನ ನೀಡದ್ದರಿಂದ ನಮಗೆ ಕುಟುಂಬ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನೇಕಾರಿಕೆ ಕೆಲಸವೂ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಆದರೆ, ಇಲ್ಲಿಯೂ ವೇತನ ಕೊಡುತ್ತಿಲ್ಲ. ಹೀಗಾದರೆ ನಾವುಗಳು ಹೇಗೆ ಬದುಕಬೇಕು? ಸಂಬಂಧಿತ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಬಾಕಿ ವೇತನ ಕೊಡಿಸಿ ನಮಗೆ ನೆರವಾಗಬೇಕು ಎಂದು ಆಗ್ರಹಿಸಿದರು. ನರೇಗಾದ ಪ್ರಮುಖ ಕೂಲಿ ಕಾರ್ಮಿಕರಾದ ನಾಗಪ್ಪ ಹುಡೇದ, ಬಾಳಕೃಷ್ಣ ನಿಂಗನಗೌಡ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts